ಮೇಷ : ಅನವಶ್ಯಕವಾದ ಮಾತುಕತೆಗಳಿಂದ ಉಪಯೋಗವಿಲ್ಲ. ಇತರರ ಮಾತುಗಳ ಬಗೆಗೆ ಎಚ್ಚರ ಇರಲಿ. ಶುಭಸಂಖ್ಯೆ: 6
ವೃಷಭ : ವಿನಾಕರಣ ರೇಗದಿರಿ. ಕೋಪವನ್ನು ಕೂಡ ನಿಯಂತ್ರಿಸಿ. ಅನವಶ್ಯಕ ಬಿಕ್ಕಟ್ಟುಗಳಿಗೆ ದಾರಿಯಾದೀತು. ಶುಭಸಂಖ್ಯೆ: 1
ಮಿಥುನ : ಧನಲಾಭದ ವಿಚಾರದಲ್ಲಿ ನಿಗೂಢ ರೀತಿಯ ಶಕ್ತಿಗಳಿಂದ ಹಲವಾರು ಅಡೆತಡೆಗಳು ಎದುರಾಗಲು ಸಾಧ್ಯ. ಶುಭಸಂಖ್ಯೆ: 8
ಕಟಕ : ನಿಮಗೇ ತಿಳಿಯದ ರೀತಿಯಲ್ಲಿ ಹಲವರಿಂದ ಅನುಕೂಲಕರ ಸಹಾಯ ದೊರಕಿ ಮನಕ್ಕೆ ನಿರಾಳತೆ ಸಾಧ್ಯ. ಶುಭಸಂಖ್ಯೆ: 2
ಸಿಂಹ: ಆಘಾತಕರ ಬೆಳವಣಿಗೆಗಳನ್ನು ನಿವಾರಿಸಿಕೊಳ್ಳಲು ಮಹಾಗೌರಿಯನ್ನು ಭಕ್ತಿಯಿಂದ ಆರಾಧಿಸಿ.
ಶುಭಸಂಖ್ಯೆ: 5
ಕನ್ಯಾ: ಅನುಮಾನಾಸ್ಪದವಾದ ಜನರು ಬಂದಾಗ ಸರ್ರನೆ ಒತ್ತಡದಿಂದ ಯಾವುದೇ ಬಗೆಯ ನಿರ್ಧಾರಕ್ಕೆ ಕೂಡ ಬರಬೇಡಿ. ಶುಭಸಂಖ್ಯೆ: 3
ತುಲಾ : ಒಂದು ರೀತಿಯಲ್ಲಿ ಇಂದು ನಷ್ಟಕ್ಕೆ ದಾರಿಯಾಗುವ ದಿನ. ಹಣದ ಕುರಿತು ಎಚ್ಚರ ವಹಿಸುವುದು ಅಗತ್ಯ. ಶುಭಸಂಖ್ಯೆ: 9
ವೃಶ್ಚಿಕ : ನಂಬಬೇಕೋ ಬಿಡಬೇಕೋ ಎಂಬ ಸಂದಿಗ್ಧತೆ ಎದುರಾದರೆ ನಿರ್ಧಾರ ನಿಶ್ಚಯಿಸಲು ಸಮಯ ಪಡೆದುಕೊಳ್ಳಿ. ಶುಭಸಂಖ್ಯೆ: 4
ಧನುಸ್ಸು : ಸಂಕಷ್ಟದ ವಿಚಾರಗಳನ್ನು ದೂರ ಮಾಡಿಕೊಳ್ಳಲು ಶ್ರೀ ಲಕ್ಷ್ಮೀನರಸಿಂಹನನ್ನು ಭಕ್ತಿಯಿಂದ ಸ್ತುತಿ ಮಾಡಿ. ಶುಭಸಂಖ್ಯೆ: 7
ಮಕರ : ಭಾರಿ ಚಿಂತೆಯಲ್ಲಿದ್ದೀರಿ ಎಂದು ಇತರರು ಹೇಳಿದರೂ ದುಃಖವನ್ನು ಹೊರಗೆಡವದಿರಿ. ತಣ್ಣಗೆ ಕಾರ್ಯನಿರತರಾಗಿ. ಶುಭಸಂಖ್ಯೆ: 8
ಕುಂಭ : ಒಂದೇ ಸಲಕ್ಕೆ ಎರಡೆರಡು ದೋಣಿಗಳ ಮೇಲಿನ ಪ್ರಯಾಣವನ್ನು ಮಾಡುವ ಸಾಹಸವನ್ನು ಕೈಗೊಳ್ಳದಿರಿ. ಶುಭಸಂಖ್ಯೆ: 6
ಮೀನ : ಹಲವಾರು ಹಳೆಯ ಗೆಳೆಯರು ನಿಮಗೆ ಸಹಾಯವನ್ನು ಮಾಡುವುದರಿಂದ ನಿರಾಳತೆ ಸಾಧ್ಯವಾಗಲಿದೆ. ಶುಭಸಂಖ್ಯೆ: 2