More

  ನಿತ್ಯಭವಿಷ್ಯ: ಈ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

  ಮೇಷ: ಈ ದಿನ ವಿದೇಶ ಪ್ರಯಾಣ ಸಾಧ್ಯತೆ. ಹಿರಿಯರಿಂದ ಬುದ್ಧಿಮಾತು. ಹಣಕಾಸು ಸಮಸ್ಯೆ. ಶತ್ರುವಿಗೆ ಅವಮಾನ. ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 5

  ವೃಷಭ: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಬರುವುದು. ಸ್ಥಿರಾಸ್ತಿ ಖರೀದಿ ಯೋಗ. ವಿವಾಹಕ್ಕೆ ಅಡಚಣೆ. ಆದಾಯಕ್ಕಿಂತ ಹೆಚ್ಚು ಖರ್ಚು.ಶುಭಸಂಖ್ಯೆ: 1

  ಮಿಥುನ: ಕೊಟ್ಟ ಹಣ ಹಿಂತಿರುಗಿ ಬರಲಿದೆ. ಚಂಚಲ ಮನಸ್ಸು. ಮಾನಸಿಕ ನೆಮ್ಮದಿ ದೊರೆಯುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 3

  ಕಟಕ: ಮನೆಯಲ್ಲಿ ನೆಮ್ಮದಿಯ ವಾತಾವರಣ. ಸರ್ಕಾರಿ ಕಾರ್ಯದಲ್ಲಿ ಜಯ. ಸಮಾಜದಲ್ಲಿ ಗೌರವ. ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ: 7

  ಸಿಂಹ: ಮನೆಯಲ್ಲಿ ಶುಭಕಾರ್ಯ. ಮನಸ್ಸಿಗೆ ನೆಮ್ಮದಿ. ಹಣಕಾಸು ಸ್ಥಿತಿ ಉತ್ತಮ. ಹಳೆಯ ಗೆಳೆಯರ ಭೇಟಿ. ಗಣ್ಯ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ: 7

  ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಶತ್ರುಗಳ ಕಾಟ ಅಂತ್ಯ. ಹಿತೈಷಿಗಳಿಂದ ಹೊಗಳಿಕೆ. ಷೇರು ವ್ಯವಹಾರದಲ್ಲಿ ಅಧಿಕ ಲಾಭ.ಶುಭಸಂಖ್ಯೆ: 2

  ತುಲಾ: ಎಲೆಕ್ಟ್ರಾನಿಕ್ಸ್ ಉಪಕರಣದಿಂದ ಲಾಭ. ಮಾತಿನಿಂದ ಅನರ್ಥ. ಮಾನಸಿಕ ವ್ಯಥೆ. ಗೊಂದಲದ ವಾತಾವರಣ. ಆಲಸ್ಯದ ಭಾವ.ಶುಭಸಂಖ್ಯೆ: 7

  ವೃಶ್ಚಿಕ: ವೃತ್ತಿ ಕ್ಷೇತ್ರದಲ್ಲಿ ಆಂತರಿಕ ಕಲಹ. ಕಣ್ಣಿಗೆ ಸಂಬಂಧಿಸಿ ರೋಗ ಬಾಧೆ. ಮಿತ್ರರಿಂದ ತೊಂದರೆ. ದುಶ್ಚಟಕ್ಕೆ ಖರ್ಚು. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 6

  ಧನಸ್ಸು:ಬಣ್ಣದ ಮಾತಿಗೆ ಮರುಳಾಗಿ ಧನ ನಷ್ಟ. ಹೂವು ಹಣ್ಣು ವ್ಯಾಪಾರಿಗಳಿಗೆ ಅಧಿಕ ಲಾಭ.ಸತ್ಕಾರ್ಯದಲ್ಲಿ ಆಸಕ್ತಿ. ಪುಣ್ಯಕ್ಷೇತ್ರ ದರ್ಶನ.ಶುಭಸಂಖ್ಯೆ: 5

  ಮಕರ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಯಶಸ್ಸಿನ ಮೆಟ್ಟಿಲು ತಲುಪುವಿರಿ. ದಾಂಪತ್ಯದಲ್ಲಿ ಸಾಮರಸ್ಯ. ನಂಬಿಕಸ್ತರಿಂದ ದ್ರೋಹ. ಶುಭಸಂಖ್ಯೆ: 1

  ಕುಂಭ: ದಿನಸಿ ಮತ್ತು ಸಗಟು ವ್ಯಾಪಾರಿಗಳಿಗೆ ಲಾಭ, ಟ್ರೇಡಿಂಗ್ ವಿಚಾರಗಳಲ್ಲಿ ಆಸಕ್ತಿ. ನಾಲ್ಕು ಚಕ್ರದ ವಾಹನದಿಂದ ತೊಂದರೆ. ಶುಭಸಂಖ್ಯೆ: 2

  See also  ಸಾಲಬಾಧೆಯಿಂದ ರೈತ ನೇಣಿಗೆ ಶರಣು

  ಮೀನ: ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ. ತಾಳ್ಮೆ ಅಗತ್ಯ, ಸಾಧಾರಣ ಲಾಭ. ಸ್ಥಳ ಬದಲಾವಣೆ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 9

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts