ನಿತ್ಯ ಭವಿಷ್ಯ| 11-03-2019

ಮೇಷ: ಮಕ್ಕಳು ಅನವಶ್ಯಕವಾಗಿ ಮುನಿಸಿಕೊಂಡಾರು. ಎಚ್ಚರವಾಗಿರಿ. ಸದ್ಯಕ್ಕೆ ಸೂಕ್ತವಾದ ಮಾತುಗಳಿಂದಲೇ ಕ್ಷೇಮ. ಶುಭಸಂಖ್ಯೆ: 9

ವೃಷಭ: ನಿಮ್ಮನ್ನು ಕಂಡು ಅಸೂಯೆಪಡುವಂತಹ ಜನ ಸಿಗಬಹುದು. ನಿಮ್ಮ ಕುರಿತಾಗಿ ನಿಮಗೆ ವಿಶೇಷ ನಂಬಿಕೆ ಇರಲಿ. ಶುಭಸಂಖ್ಯೆ: 2

ಮಿಥುನ: ಶ್ರೀ ವಿಘ್ನ ನಿವಾರಕ ಗಣೇಶನ ಕೃಪೆಯಿಂದ ಬಹಳ ದಿನಗಳ ಕಷ್ಟಕ್ಕೆ ಪರಿಹಾರ ಸಾಧ್ಯವಾಗಲಿದೆ. ಶಾಂತರಾಗಿರಿ. ಶುಭಸಂಖ್ಯೆ: 7

ಕರ್ಕಾಟಕ: ಲವಲವಿಕೆಯ ಮಾತುಗಳು ನಿಮ್ಮನ್ನು ನಾಲ್ಕು ಜನರ ನಡುವೆ ಗೆಲುವಿನ ದಾರಿಗೆ ಒಯ್ದು ತಲುಪಿಸುತ್ತವೆ. ಹರ್ಷಪಡಿ. ಶುಭಸಂಖ್ಯೆ: 5

ಸಿಂಹ: ಎಷ್ಟೇ ಕೋಪ ಬಂದರೂ ಆರ್ಭಟ ಬೇಡ. ಪ್ರಶಾಂತ ನದಿಯಂತೆ ಸಮಾಧಾನದಿಂದಿರಿ. ಶ್ರೀಹರಿಯ ಒಲುಮೆ ಲಭ್ಯ. ಶುಭಸಂಖ್ಯೆ: 9

ಕನ್ಯಾ: ಹತ್ತಿರದ ಜನರೇ ಕೆಲವು ದೋಷಾರೋಪಗಳನ್ನು ನಡೆಸಿಯಾರು. ಸ್ನೇಹಿತರು ನಿಮ್ಮನ್ನು ಕಾಪಾಡುತ್ತಾರೆ. ನೆನಪಿಡಿ. ಶುಭಸಂಖ್ಯೆ: 7

ತುಲಾ: ಹಳೆಯ ವ್ಯಾಜ್ಯವೊಂದರಿಂದ ಹೊರಬರುವ ನಿಮಗೆ, ಹೊಸದೇ ಅವಕಾಶಗಳಿಂದ ಸಿದ್ಧಿಗೆ ದಾರಿ ಸಾಧ್ಯವಾಗಲಿದೆ. ಶುಭಸಂಖ್ಯೆ: 8

ವೃಶ್ಚಿಕ: ನಿಮ್ಮ ಬಾಳಸಂಗಾತಿಯ ವಿಚಾರದಲ್ಲಿ ಅಲಕ್ಷ್ಯ ಮಾಡುವುದು ಬೇಡ. ಜತನದಿಂದ ಆರೈಕೆ ಮಾಡಿ. ಕಷ್ಟಗಳು ದೂರ. ಶುಭಸಂಖ್ಯೆ: 1

ಧನಸ್ಸು: ಖರ್ಚಿನ ದಾರಿಗಳನ್ನು ನಿಯಂತ್ರಿಸಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಕೆಲವು ದಿನಗಳಲ್ಲೇ ಒಳ್ಳೆಯದಕ್ಕೆ ದಾರಿ. ಶುಭಸಂಖ್ಯೆ: 5

ಮಕರ: ಹಿರಿಯರನ್ನು ಆರೈಕೆ ಮಾಡುವ ವಿಚಾರದಲ್ಲಿ ಹಿಂದೇಟು ಹಾಕುವುದು ಬೇಡ. ನಿಮ್ಮ ಸಮಸ್ಯೆಗಳಿಗೂ ಪರಿಹಾರ ಸಾಧ್ಯ. ಶುಭಸಂಖ್ಯೆ: 4

ಕುಂಭ: ಉನ್ನತ ವ್ಯಾಸಂಗಕ್ಕೆ ಅಪರೂಪದ ಅವಕಾಶಗಳು ಲಭ್ಯವಾಗಲಿವೆ. ಶ್ರೀ ದುರ್ಗಾ ಅಷ್ಟಕವನ್ನು ಭಕ್ತಿಯಿಂದ ಪಠಣ ಮಾಡಿ. ಶುಭಸಂಖ್ಯೆ: 3

ಮೀನ: ಹಳೆಯ ಕೆಲಸದ ಸ್ಥಳದಲ್ಲೇ ಮತ್ತೆ ಹೊಸದಾದ ಅವಕಾಶಗಳು ಸಿಗುವಂತಹ ಉತ್ತಮ ವಿಚಾರ ಕೈಗೂಡಬಹುದು. ಶುಭಸಂಖ್ಯೆ: 6