More

    ಈ ರಾಶಿಯವರಿಗಿಂದು ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ: ನಿತ್ಯಭವಿಷ್ಯ

    ಮೇಷ: ವಿದ್ಯಾರ್ಥಿಗಳು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ಮಹಿಳಾ ಪೊಲೀಸ್​ಗಳಿಗೆ ಒತ್ತಡ. ನಿಮ್ಮ ನಿರ್ಧಾರಗಳಿಗೆ ಬದ್ಧರಾಗಿರಿ. ಶುಭಸಂಖ್ಯೆ: 8

    ವೃಷಭ: ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಲಭ್ಯವಾಗಿ ಸಂತಸ. ಖರ್ಚು ವೆಚ್ಚಗಳು ಹೆಚ್ಚು. ಸಾರಿಗೆ ವ್ಯವಹಾರ ನಡೆಸುತ್ತಿರುವವರಿಗೆ ಲಾಭ. ಶುಭಸಂಖ್ಯೆ:3

    ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು. ಮಹಿಳೆಯರಿಗೆ ಶುಭ. ಅರ್ಧದಲ್ಲಿ ನಿಂತುಹೋಗಿದ್ದ ಕಾರ್ಯಗಳು ಮುಂದುವರಿಯುವವು. ಶುಭಸಂಖ್ಯೆ: 7

    ಕಟಕ: ಕೈಗೊಂಡ ಎಲ್ಲ ಕಾರ್ಯಗಳಲ್ಲಿ ಯಶಸ್ಸು, ಸಿದ್ಧಿ. ದೂರದ ಊರಿನಿಂದ ಬಂಧುಗಳ ಆಗಮನ, ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 5

    ಸಿಂಹ: ಅನಿರೀಕ್ಷಿತ ಧನ ಲಾಭವಾಗಿ ಮಾನಸಿಕ ನೆಮ್ಮದಿ. ಗ್ರಂಥ ರಚನೆಯಲ್ಲಿ ಆಸಕ್ತಿ ತೋರುವಿರಿ. ಭೂಮಿ ಖರೀದಿಸುವ ಯೋಗ. ಶುಭಸಂಖ್ಯೆ: 4

    ಕನ್ಯಾ: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲಕರ ದಿನ. ಅಧಿಕ ಪ್ರಯಾಣ ಮಾಡುವುದು ಬೇಡ. ಕೆಲಸದ ಒತ್ತಡದಿಂದ ದೇಹಯಾಸ. ಶುಭಸಂಖ್ಯೆ: 9

    ತುಲಾ: ಹಿರಿಯರಿಗೆ ಅಪಘಾತವಾಗುವ ಸಾಧ್ಯತೆ, ಹುಷಾರು. ಆರ್ಥಿಕಸ್ಥಿತಿಯಲ್ಲಿ ಚೇತರಿಕೆ. ಶಿಕ್ಷಕ ವರ್ಗದವರಿಗೆ ಶುಭದಾಯಕ ದಿನ. ಶುಭಸಂಖ್ಯೆ: 2

    ವೃಶ್ಚಿಕ: ವ್ಯಾಪಾರದಲ್ಲಿ ಅನಿರೀಕ್ಷಿತ ನಷ್ಟವಾಗಿ ಬೇಸರ. ವಿದ್ಯೆಯಲ್ಲಿ ಅನಾಸಕ್ತಿ, ವೈರಾಗ್ಯ ಮನೋಭಾವ. ಕುಲದೇವರ ಮೊರೆ ಹೋಗಿ. ಶುಭಸಂಖ್ಯೆ: 5

    ಧನುಸ್ಸು: ಬಂಧುಗಳೊಂದಿಗೆ ಜಗಳವಾಗುವಂತಿದ್ದರೂ ಸಮಾಧಾನ ಚಿತ್ತರಾಗಿರಿ. ಮನಸ್ಸಿನಲ್ಲಿ ಅಶಾಂತಿ, ಸಮಾಜದಲ್ಲಿ ಅಪಕೀರ್ತಿ. ಶುಭಸಂಖ್ಯೆ: 7

    ಮಕರ: ದಾಂಪತ್ಯದಲ್ಲಿ ವಿರಸ ತಲೆದೋರುವುದು. ಶತ್ರುಗಳೊಂದಿಗೆ ವಾಗ್ವಾದ ಮಾಡಬೇಡಿ. ಭೂಮಿ ವ್ಯಾಜ್ಯದಲ್ಲಿ ಸೋಲು. ಶುಭಸಂಖ್ಯೆ: 4

    ಕುಂಭ: ಅಧಿಕಾರಿ ವರ್ಗದಿಂದ ತೊಂದರೆಯಾಗುವುದು. ವಿವಾಹದಲ್ಲಿ ಅಶುಭ ತಲೆದೋರಿ ಮಾನಸಿಕ ನೋವು. ಕುಟುಂಬಕ್ಕಾಗಿ ಖರ್ಚು. ಶುಭಸಂಖ್ಯೆ: 5

    ಮೀನ: ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಹೃದಯ ಸಂಬಂಧಿ ರೋಗಗಳು ಉಲ್ಬಣವಾದಾವು. ಒತ್ತಡದ ಬದುಕಿನಿಂದ ಹೊರಬನ್ನಿ. ಶುಭಸಂಖ್ಯೆ: 9

    ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts