ನಿತ್ಯಭವಿಷ್ಯ| 01-03-2019

ಮೇಷ: ನಿಮ್ಮನ್ನು ವಿಚಲಿತಗೊಳಿಸಲು ಸನ್ನದ್ಧರಾಗಿಯೇ ವಿರೋಧಿಗಳು ಆಟ ಆಡುತ್ತಾರೆ. ಆದಷ್ಟು
ಎಚ್ಚರ ಜತೆಗೆ ಇರಲಿ. ಶುಭಸಂಖ್ಯೆ: 6

ವೃಷಭ: ದೂರದ ಊರಿನ ಪ್ರವಾಸದ ಬಗೆಗೆ ಪೂರ್ತಿ ತಯಾರಿಯಿಂದಲೇ ಇರಿ. ಸರ‌್ರನೆ ನಿಶ್ಚಯ ಸಾಧ್ಯವಾಗಲಿದೆ. ಶುಭಸಂಖ್ಯೆ: 1

ಮಿಥುನ: ಎಲ್ಲವೂ ಕೇವಲ ಅರ್ಧರ್ಧ ಕೆಲಸಗಳು ಪೂರೈಸುತ್ತಿವೆ ಎಂಬ ಚಿಂತೆ ಬೇಡ. ಪರ್ಯಾಯ ಮಾರ್ಗಗಳು ಕೂಡ ಲಭ್ಯ. ಶುಭಸಂಖ್ಯೆ: 3

ಕಟಕ: ಕ್ರೀಡಾಪಟುಗಳಿಗೂ, ಬಂಗಾರದ ಒಡವೆ, ರತ್ನದ ಹರಳುಗಳ ವ್ಯಾಪಾರಿಗಳಿಗೂ ಹಿನ್ನಡೆ ಆಗಲಿದೆ. ಎಚ್ಚರ ಇರಲಿ. ಶುಭಸಂಖ್ಯೆ: 5

ಸಿಂಹ: ಆನೆ ನಡೆದಿದ್ದೇ ದಾರಿ ಎಂಬ ವಿಚಾರ ಮನಸ್ಸಿಗೆ ಬಾರದಿರಲಿ. ಸರಳತೆ, ವಿನಯಗಳಿಂದಲೇ ಎಲ್ಲರನ್ನೂ ಗೆದ್ದು ನೋಡಿ. ಶುಭಸಂಖ್ಯೆ: 8

ಕನ್ಯಾ: ನಿಮ್ಮದು ಮೃದು ಮನಸ್ಸು. ಆದರೆ ಅಯೋಗ್ಯರು ಶೋಷಿಸಬಹುದು. ಜಾಣತನವು ಮಾತ್ರ
ನಿಮ್ಮ ಜತೆಗೆ ಇದ್ದೇ ಇರಲಿ. ಶುಭಸಂಖ್ಯೆ: 5

ತುಲಾ: ನಿಮಗೇ ತಿಳಿಯದಂತಹ ವಿಷಯವೊಂದನ್ನು ನಿಮ್ಮ ಮಕ್ಕಳು ಬಹಿರಂಗಪಡಿಸಿ ಹರ್ಷವನ್ನು ಉಂಟುಮಾಡುತ್ತಾರೆ. ಶುಭಸಂಖ್ಯೆ: 9

ವೃಶ್ಚಿಕ: ಬಹು ನಿರೀಕ್ಷಿತ ವಿಷಯವೊಂದು ಘಟಿಸದೆ, ಅನಿರೀಕ್ಷಿತ ವಿಷಯದಿಂದಾಗಿ ಹೆಚ್ಚಿನದಾದ ಸಂತಸವನ್ನು ಪಡುವಿರಿ. ಶುಭಸಂಖ್ಯೆ: 7

ಧನಸ್ಸು: ಕೆಲವು ಕ್ಷುಲ್ಲಕ ವಿಚಾರಗಳನ್ನು ಮೇಲೆತ್ತಿ ಸಹೋದರರಿಂದ ಮನಸ್ಸಿಗೆ ಖೇದ ಒದಗಬಹುದು. ತಾಳ್ಮೆ ಇರಲಿ. ಶುಭಸಂಖ್ಯೆ: 1

ಮಕರ: ವಿರುದ್ಧ ಲಿಂಗಿಗಳೊಡನೆ ಕಟ್ಟೆಚ್ಚರದಿಂದಿರಿ. ಈಗ ಸಾಡೇಸಾತಿ ಸಂದರ್ಭವಾಗಿದೆ. ತೊಂದರೆಯನ್ನು ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 9

ಕುಂಭ: ಮೇಲಧಿಕಾರಿಗಳು ನಿಮ್ಮ ಬಳಿ ಬಹು ಮುಖ್ಯ ವಿಚಾರದಲ್ಲಿ ಸಲಹೆ ಕೇಳಬಹುದು. ಉತ್ತಮ ಸಂಗತಿಯನ್ನು ತಿಳಿಸಿ. ಒಳಿತಿದೆ. ಶುಭಸಂಖ್ಯೆ: 4

ಮೀನ: ನಿಮ್ಮ ಸಲಹೆ ಸೂಚನೆಗಳಿಗಾಗಿ ಕಾದಿದ್ದೇವೆ ಎಂಬ ನಟನೆ ಮಾಡಿ ಹಣವನ್ನು ದೋಚಬಹುದು. ಆ ಬಗ್ಗೆ ಎಚ್ಚರ. ಶುಭಸಂಖ್ಯೆ: 2