ನಿತ್ಯಭವಿಷ್ಯ|24-05-2019

ಮೇಷ: ಸುಮ್ಮನೆ ಯಾವುದೋ ಒಂದು ಕೆಲಸ ಮಾಡಿಕೊಂಡು ಹೋಗುವುದಕ್ಕಿಂತ ನಿರ್ದಿಷ್ಟ ಗುರಿ ಇದ್ದರೆ ಉತ್ತಮ. ಶುಭಸಂಖ್ಯೆ: 7

ವೃಷಭ: ಸುತ್ತಮುತ್ತಲಿನ ಜನರ ಪ್ರಶಂಸೆಯನ್ನು ಗಳಿಸುವ ಉತ್ತಮ ಪ್ರಾರಂಭ ನಿಮ್ಮ ಹಿರಿತನಕ್ಕೆ ಲಭ್ಯವಾಗಲಿದೆ. ಶುಭಸಂಖ್ಯೆ: 3

ಮಿಥುನ: ನಿಮ್ಮದೇ ಆದ ವಹಿವಾಟುಗಳನ್ನು ವಿಸ್ತರಿಸುವಂತಹ ಸದವಕಾಶಗಳು ಕೂಡಿಬರಲು ಹೊಸ ಸಾಧ್ಯತೆ ಇದೆ. ಶುಭಸಂಖ್ಯೆ: 9

ಕಟಕ: ಕಾರಣವಿರದೆ ಬಂದು ಹರಟೆ ಹೊಡೆಯುವ, ನಿಮ್ಮ ಕೆಲಸ ಹಾಳುಮಾಡುವ ಸ್ನೇಹಿತರಿಂದ ದೂರವಿರಿ. ಶುಭಸಂಖ್ಯೆ: 6

ಸಿಂಹ: ಕಾಯಕ ಸ್ವಲ್ಪ ಕಷ್ಟವಾದೀತು, ನಾಳೆಗೂ ಮುಂದುವರಿದೀತು. ಆದರೆ ಜಯವನ್ನು ಪಡೆಯುವಿರಿ. ಶುಭಸಂಖ್ಯೆ: 2

ಕನ್ಯಾ: ನಿಮ್ಮ ಕುಲದೇವರನ್ನು ನೆನೆಯುವ ಕಾರಣದಿಂದಾಗಿ ಮನದಾಳದ ಸಂಕಲ್ಪಗಳಿಗೆ ವಿಜಯವಾಗಲಿದೆ. ಶುಭಸಂಖ್ಯೆ: 8

ತುಲಾ: ನಿಗೂಢವಾದ ವಿಷಯಗಳು ಅಂತರಂಗದಲ್ಲಿ ಭಯ ತರುವ ಸಾಧ್ಯತೆಗಳು ಜಾಸ್ತಿ. ಆಶಾವಾದಿಗಳಾಗಿ ಇದ್ದಿರಿ. ಶುಭಸಂಖ್ಯೆ: 5

ವೃಶ್ಚಿಕ: ಇನ್ನೆಲ್ಲೋ ಅರ್ಥಪೂರ್ಣವಾದ ವೇದಿಕೆ ಇದೆ ಎಂಬ ವ್ಯರ್ಥ ಹುಡುಕಾಟ ಕೈಬಿಡಿ. ನಿಮ್ಮಲ್ಲಿಯೇ ಸಾರ್ಥಕತೆ ಇದೆ. ಶುಭಸಂಖ್ಯೆ: 3

ಧನುಸ್ಸು: ನಿಮ್ಮ ಅಭಿಲಾಷೆಗಳನ್ನು ನಿವಿಘ್ನವಾಗಿ ನೆರವೇರಿಸುವಂತೆ ಪಾರ್ವತೀವಲ್ಲಭನಾದ ಪರಶಿವನನ್ನು ಸ್ತುತಿಸಿ. ಶುಭಸಂಖ್ಯೆ: 1

ಮಕರ: ನಿಮ್ಮ ಕಷ್ಟ ಕೇಳಿಸಿಕೊಳ್ಳಲು ಯಾರೂ ಮುಂದಾಗಿ ಬರಲಾರರು. ನೀವೇ ನಿಮ್ಮ ರಕ್ಷಕರಾಗಿ ಹೆಜ್ಜೆ ಇಡಿ. ಶುಭಸಂಖ್ಯೆ: 9

ಕುಂಭ: ಇರುವುದೆಲ್ಲವನ್ನೂ ಬಿಟ್ಟು ಇರದಿರುವುದರ ಬಗ್ಗೆ ಯೋಚಿಸುತ್ತ, ಚಿಂತಿಸುತ್ತ ಒತ್ತಡ ನಿರ್ವಿುಸಿಕೊಳ್ಳದಿರಿ. ಶುಭಸಂಖ್ಯೆ: 7

ಮೀನ: ನಿರೀಕ್ಷಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಕೈಗೊಂಡ ಯೋಜನೆಗಳು ವಿಫಲವಾಗಬಹುದು. ಎಚ್ಚರ ಇರಲಿ. ಶುಭಸಂಖ್ಯೆ: 4

Leave a Reply

Your email address will not be published. Required fields are marked *