ಸಿನಿಮಾ

ದಿನ ಭವಿಷ್ಯ | ಈ ರಾಶಿಯವರಿಗಿಂದು ಕೀರ್ತಿ ವೃದ್ಧಿ, ಕೈಹಾಕಿದ ಕೆಲಸಗಳಲ್ಲಿ ಪ್ರಗತಿ

ಮೇಷ: ಕೀರ್ತಿ ವೃದ್ಧಿ. ಕೈಹಾಕಿದ ಕೆಲಸಗಳಲ್ಲಿ ಪ್ರಗತಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಆರೋಗ್ಯ ವೃದ್ಧಿಯಾಗುವುದು. ತಿರುಗಾಟ. ಶುಭಸಂಖ್ಯೆ: 9

ವೃಷಭ: ಯತ್ನ ಕಾರ್ಯಗಳಲ್ಲಿ ನಿರೀಕ್ಷಿತ ಪ್ರಗತಿ. ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ. ಕುಟುಂಬದಲ್ಲಿ ಆನಾರೋಗ್ಯ. ಬಂಧುಗಳಲ್ಲಿ ವಿರೋಧ. ಶುಭಸಂಖ್ಯೆ: 1

ಮಿಥುನ: ಪ್ರಭಾವಶಾಲಿ ವ್ಯಕ್ತಿಯ ಭೇಟಿ. ಪ್ರಿಯ ವ್ಯಕ್ತಿಯೊಂದಿಗೆ ಸೂಕ್ತ ರೀತಿಯಲ್ಲಿ ವಿಚಾರ ವಿನಿಮಯ ಮಾಡುವಿರಿ. ಸಂತರ ದರ್ಶನ. ಶುಭಸಂಖ್ಯೆ: 8

ಕಟಕ: ಆರೋಗ್ಯದ ಸಮಸ್ಯೆ. ನೌಕರಿಯಲ್ಲಿ ಕಿರಿಕಿರಿ. ನಿರೀಕ್ಷಿತ ಲಾಭಬರಲಿದೆ. ಕೆಲಸ ಕಾರ್ಯಗಳಲ್ಲಿ ವಿಘ್ನ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 9

ಸಿಂಹ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ. ಶುಭಕಾರ್ಯ ಗಳಲ್ಲಿ ಭಾಗಿ. ಮಿತ್ರರ ಸಹಾಯ. ಧರ್ಮಕಾರ್ಯಾ ಸಕ್ತಿ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5

ಕನ್ಯಾ: ವ್ಯರ್ಥ ಖರ್ಚು. ಮನೋವ್ಯಥೆ ಕಾಡಬಹುದು. ದಾಯಾದಿ ಕಲಹ. ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾದರೂ ನಿವಾರಣೆ. ಶುಭಸಂಖ್ಯೆ: 3

ತುಲಾ: ಮನಸ್ಸಿಗೆ ನೆಮ್ಮದಿ. ತೀರ್ಥಯಾತ್ರೆ ದರ್ಶನ. ಸೇವಕರಿಂದ ಸಹಾಯ. ಶತ್ರು ನಾಶ. ವ್ಯಾಪಾರದಲ್ಲಿ ನಷ್ಟ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:3

ವೃಶ್ಚಿಕ: ಕಾರ್ಯಾನುಕೂಲ. ಹಣಕಾಸಿನ ಪರಿಸ್ಥಿತಿ ಸುಧಾರಣೆ. ಸ್ಥಳ ಬದಲಾವಣೆ ಆದೀತು. ಬಂಧುಗಳಲ್ಲಿ ವೈರತ್ವ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 7

ಧನುಸ್ಸು: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಗೌರವ ಪ್ರಾಪ್ತಿ. ಹಣಕಾಸಿನ ಪರಿಸ್ಥಿತಿ ಉತ್ತಮ. ಧರ್ಮಕಾರ್ಯಾಸಕ್ತಿ. ಉತ್ತಮ ಫಲ. ಶುಭಸಂಖ್ಯೆ: 6

ಮಕರ: ಆದಾಯಕ್ಕಿಂತ ಖರ್ಚು ಜಾಸ್ತಿ. ಅಧಿಕ ತಿರುಗಾಟ. ವಾಹನದಿಂದ ತೊಂದರೆ. ಧನವ್ಯಯ. ಮಿಶ್ರಫಲ ನೀಡುವ ದಿನ. ಶುಭಸಂಖ್ಯೆ: 2

ಕುಂಭ: ಅಧಿಕಾರಿಗಳಿಂದ ಕಿರುಕುಳ. ಮಾನಹಾನಿ ಸಾಧ್ಯತೆ. ಮನಸ್ಸಿಗೆ ಚಿಂತೆ. ಧನವ್ಯಯ. ಸರ್ಕಾರಿ ಕೆಲಸಗಳಲ್ಲಿ ವಿಘ್ನ. ಅನಾರೋಗ್ಯ. ಶುಭಸಂಖ್ಯೆ: 8

ಮೀನ: ಕುಟುಂಬ ಸೌಖ್ಯ. ಯತ್ನ ಕಾರ್ಯಸಿದ್ಧಿಯಾಗಿ ನೆಮ್ಮದಿ. ತೀರ್ಥಕ್ಷೇತ್ರ ದರ್ಶನ. ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ. ಶುಭಸಂಖ್ಯೆ: 6

Latest Posts

ಲೈಫ್‌ಸ್ಟೈಲ್