ನಿತ್ಯಭವಿಷ್ಯ|23-05-2019

ಮೇಷ: ಸ್ವೇಚ್ಛೆಯು ಯಾವಾಗಲೂ ಆತ್ಮವನ್ನು ನಾಶಪಡಿಸುವಂತಹ ಕಾರ್ಕೇಟಕ ವಿಷವೇ ಆಗಿದೆ. ಎಚ್ಚರ ಇರಲಿ. ಶುಭಸಂಖ್ಯೆ: 6

ವೃಷಭ: ಸ್ವಂತದ್ದಾದ ವಹಿವಾಟನ್ನು ಇನ್ನಷ್ಟು ವಿಸ್ತರಿಸುವ ದಿಢೀರ್ ನಿರ್ಧಾರವನ್ನು ಸರ್ರನೆ ಮಾಡಲು ಹೋಗದಿರಿ. ಶುಭಸಂಖ್ಯೆ: 8

ಮಿಥುನ: ಗೆಳೆಯರು ಸಹಾಯಕ್ಕೆ ಬರುತ್ತಾರೆ ಎಂದು ನಂಬಿ ಮುಂದಾಗದಿರಿ. ನಿಮಗೇ ನೀವೇ ದೊಡ್ಡ ಶಕ್ತಿಯಾಗಿದ್ದೀರಿ. ಶುಭಸಂಖ್ಯೆ: 2

ಕಟಕ: ಶಿರಡಿ ಸಾಯಿಬಾಬಾರನ್ನು ಸ್ತುತಿಸಿ. ಕಗ್ಗಂಟಾದ ಕೆಲಸಗಳು ಕೂಡ ಸರಾಗವಾಗಿ ಜರುಗಿ ಸಫಲತೆ ತರುತ್ತವೆ. ಶುಭಸಂಖ್ಯೆ: 7

ಸಿಂಹ: ವೃಥಾ ತೊಂದರೆ ಕೊಡುವ ಜನರು ಇರುತ್ತಾರೆ. ನಿಮ್ಮ ಚಾತುರ್ಯದಿಂದ ಬಂಡೆಗಲ್ಲನ್ನು ಒಡೆದು ಮುನ್ನುಗ್ಗಿ. ಶುಭಸಂಖ್ಯೆ: 3

ಕನ್ಯಾ: ನಾನಾ ರೀತಿಯ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಳ್ಳುವುದು ಸರಿ. ಆದರೆ ಕಠಿಣ ಪರಿಶ್ರಮದಿಂದಲೇ ಯಶಸ್ಸು. ಶುಭಸಂಖ್ಯೆ: 5

ತುಲಾ: ಮಹಾಗೌರಿಯ ಭಕ್ತಿಪೂರ್ವಕ ಸ್ತುತಿಯಿಂದ ಅನಿಶ್ಚಿತತೆ ಇರುವ ಕೆಲಸಕಾರ್ಯಗಳಲ್ಲಿ ಜಯವಾಗಲಿದೆ. ಶುಭಸಂಖ್ಯೆ: 9

ವೃಶ್ಚಿಕ: ಯಶಸ್ವಿಯಾಗಿ ಪೂರೈಸಬೇಕೆಂದು ತಳೆದಿದ್ದ ನಿನ್ನೆಯ ನಿರ್ಧಾರವನ್ನು ಅರ್ಧದಲ್ಲೇ ಕೈಬಿಡಲು ಮುಂದಾಗದಿರಿ. ಶುಭಸಂಖ್ಯೆ: 4

ಧನುಸ್ಸು: ಮಕ್ಕಳ ಕಾರಣಕ್ಕಾಗಿ ವಿಶೇಷವಾದ ನಿರ್ಧಾರವೊಂದನ್ನು ತಳೆಯಬೇಕಾದ ಸಂದರ್ಭ ಏಕಾಏಕಿ ಎದುರಾದೀತು. ಶುಭಸಂಖ್ಯೆ: 1

ಮಕರ: ನಿಮ್ಮನ್ನು ಗೌರವಿಸುವ ಮಂದಿಯ ತಲ್ಲಣಗಳನ್ನು ಕೇಳಿಸಿಕೊಳ್ಳಿ. ಅವರಿಂದಲೂ ನಿಮಗೆ ಬೆಂಬಲ ಲಭ್ಯ. ಶುಭಸಂಖ್ಯೆ: 8

ಕುಂಭ: ಆಸ್ತಿಯ ವಿಚಾರದಲ್ಲಿ ಅರಿವಿರದೆಯೇ ನಿಮ್ಮ ನಿರೀಕ್ಷೆಗೆ ಮೀರಿದ ಧನಲಾಭವೊಂದು ನೆರವೇರಲು ಸಾಧ್ಯ. ಶುಭಸಂಖ್ಯೆ: 5

ಮೀನ: ನಿಮ್ಮ ಮಾತನ್ನು ಖಂಡಿಸಲೇಬೇಕು ಎಂದು ನಿರ್ಧರಿಸಿ ಬರುವವರನ್ನು ಕಡೆಗಣಿಸದೆ ತಾಳ್ಮೆ ವಹಿಸಿದರೆ ಉತ್ತಮ. ಶುಭಸಂಖ್ಯೆ: 1

Leave a Reply

Your email address will not be published. Required fields are marked *