ನಿತ್ಯಭವಿಷ್ಯ| 23-03-2019

ಮೇಷ: ಜಗದ ರೀತಿಯನ್ನು ಬದಲಿಸಲಾಗದು ಎಂಬ ಸತ್ಯವನ್ನು ತಿಳಿದಿರಿ. ಇದರಿಂದ ನಿಮಗಿಂದು ಲಾಭವಿದೆ. ಶುಭಸಂಖ್ಯೆ: 4

ವೃಷಭ: ಭಯದ ವಾತಾವರಣವನ್ನು ಒಂದು ಗೀಳಾಗಿಸಿಕೊಳ್ಳಬೇಡಿ. ಯೋಚನೆ ಬೇಡ. ಧೈರ್ಯದಿಂದ ಗೆಲುವಿದೆ. ಶುಭಸಂಖ್ಯೆ: 7

ಮಿಥುನ: ನಿಮ್ಮ ಮನೆಯಲ್ಲಿನ ಆಗುಹೋಗುಗಳ ಬಗ್ಗೆ ನೀವೂ ಲಕ್ಷ್ಯ ವಹಿಸಿ. ಇಲ್ಲದೆ ಹೋದರೆ ತೊಂದರೆಯೇ ಆದೀತು. ಶುಭಸಂಖ್ಯೆ: 5

ಕಟಕ: ಕಾಡುವ ಜನರನ್ನು ನಿರ್ಲಕ್ಷಿಸಿ. ಧೂರ್ತರನ್ನು ಮುಗುಳ್ನಗೆಯಿಂದ ಸ್ವೀಕರಿಸಿ. ಆಂತರ್ಯದಲ್ಲಿ ಎಚ್ಚರ ಇರಲಿ. ಶುಭಸಂಖ್ಯೆ: 1

ಸಿಂಹ: ಸರ್ವಸ್ವಕ್ಕೆ ದಾತನಾದ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ನೆನೆಯಿರಿ. ನಿಮ್ಮ ಉದ್ದೇಶಗಳಿಗೆ ಜಯ ಸಾಧ್ಯ. ಶುಭಸಂಖ್ಯೆ: 3

ಕನ್ಯಾ: ಹೊಸ ಕೆಲಸ ಸಿಗಬಹುದೆಂಬ ಕಾರಣಕ್ಕೆ ಎಲ್ಲವೂ ಬದಲಾಗದು. ವರಮಾನ ವೃದ್ಧಿಗೆ ದಾರಿ ಇದ್ದರೆ ಬದಲಿಸಿ. ಶುಭಸಂಖ್ಯೆ: 9

ತುಲಾ: ದೊಡ್ಡದಾದ ಬಂಡವಾಳಕ್ಕಾಗಿ ನಿಮ್ಮ ಮೇಲೆ ಪಾಲುದಾರರ ಒತ್ತಡ ಇದ್ದರೆ ನಿಯಂತ್ರಿಸಿ. ಲಾಭಕ್ಕೆ ಧಕ್ಕೆ ಬರಲು ಸಾಧ್ಯ. ಶುಭಸಂಖ್ಯೆ: 5

ವೃಶ್ಚಿಕ: ಏಕೆ ಹಿಂಜರಿಯುತ್ತಿದ್ದೀರಿ? ಮಾತಿನ ಶಕ್ತಿಯನ್ನು ವೃದ್ಧಿಸಿಕೊಳ್ಳಿ. ಅನೇಕ ಸಮಸ್ಯೆಗಳಿಂದ ದೂರ ಬರುವಿರಿ. ಶುಭಸಂಖ್ಯೆ: 7

ಧನುಸ್ಸು: ಪೂರ್ಣಚಂದ್ರ ತೇಜಸ್ವಿಯಾದ ಶ್ರೀರಾಮನನ್ನು ಆರಾಧಿಸಿ. ರಾಮರಕ್ಷಾ ಬಲದಿಂದ ಶನಿಯ ಕಾಟ ದೂರ. ಶುಭಸಂಖ್ಯೆ: 4

ಮಕರ: ಇಲೆಕ್ಟ್ರಿಕ್ ಉಪಕರಣಗಳಿಂದ ದೂರವಿರಿ. ಇಲ್ಲವೇ ಹೆಚ್ಚಿನದಾದ ಎಚ್ಚರ ಇರಲಿ. ಅಜಾಗ್ರತೆ ಮಾತ್ರ ಬೇಡ. ಶುಭಸಂಖ್ಯೆ: 6

ಕುಂಭ: ದೂರದ ಬೆಟ್ಟ ನೋಡುತ್ತಲಿದ್ದೀರಿ. ಅದು ಕಣ್ಣಿಗೆ ನಯವಾಗಿರಬಹುದು. ಆದರೆ ಮುಳ್ಳುಗಳಿವೆ. ಗಮನವಿರಲಿ. ಶುಭಸಂಖ್ಯೆ: 2

ಮೀನ: ಅಧಿಕವಾದ ಬಂಡವಾಳವನ್ನು ತೊಡಗಿಸಲು ಶತಪ್ರಯತ್ನ ನಡೆಸುತ್ತಿದ್ದೀರಿ.ಯಾವುದಕ್ಕೂ ಮಿತಿ ಇರಲಿ. ತೊಂದರೆ ಇರದು. ಶುಭಸಂಖ್ಯೆ: 8