ಸಿನಿಮಾ

ದಿನ ಭವಿಷ್ಯ | ಈ ರಾಶಿಯವರಿಗಿಂದು ಉದ್ಯೋಗ ಲಾಭ, ಕಾರ್ಯಗಳಲ್ಲಿ ಅಡೆತಡೆ ಇಲ್ಲದೆ ಯಶಸ್ಸು

ಮೇಷ: ಆಸೆಗಳು ಈಡೇರುವುದು. ತಂದೆಯ ಬಂಧುಗಳಿಂದ ನಷ್ಟ ಉಂಟಾಗುವ ಸಾಧ್ಯತೆ. ಪುಣ್ಯಕರ್ಮ ಫಲ ಪ್ರಾಪ್ತಿಯಾಗುವುದು. ಶುಭಸಂಖ್ಯೆ: 9

ವೃಷಭ: ಹತ್ತಿರದ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ. ರಾಜಕೀಯ ವ್ಯಕ್ತಿಗಳ ಭೇಟಿಯಾಗಲಿದೆ. ಆಸ್ತಿಯಿಂದ ಲಾಭ ಬರುವುದು. ಶುಭಸಂಖ್ಯೆ: 5

ಮಿಥುನ: ಧನ ಮತ್ತು ಉದ್ಯೋಗ ನಷ್ಟವಾಗಿ ಮಾನಸಿಕ ವೇದನೆ. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲ. ಶುಭಸಂಖ್ಯೆ: 1

ಕಟಕ: ಸ್ವಂತ ಉದ್ಯೋಗ, ಉದ್ಯಮದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಅಧಿಕಾರಿಗಳಿಂದ ಧನ ನಷ್ಟ, ಯತ್ನ ಕಾರ್ಯಜಯ. ಶುಭಸಂಖ್ಯೆ: 8

ಸಿಂಹ: ನಷ್ಟದ ಪ್ರಮಾಣ ಅಧಿಕ. ಉದ್ಯೋಗಸ್ಥರಿಗೆ ಬಡ್ತಿ ಮತ್ತು ಪ್ರಶಂಸೆ. ತಂದೆಯಿಂದ ಅನುಕೂಲ. ಮಾತನಾಡುವಾಗ ಎಚ್ಚರ. ಶುಭಸಂಖ್ಯೆ: 3

ಕನ್ಯಾ: ಆಸ್ತಿ ನಷ್ಟವಾಗುವ ಅಪಾಯವಿದೆ, ಎಚ್ಚರದಿಂದ ವ್ಯವಹರಿಸಿ. ಅಧಿಕಾರಿಗಳಿಗೆ ನಿರಾಸೆ. ದಾಂಪತ್ಯ ಸಮಸ್ಯೆ ಜಾಸ್ತಿಯಾಗುವುದು. ಶುಭಸಂಖ್ಯೆ: 8

ತುಲಾ: ಉದ್ಯೋಗ ಲಾಭ. ಕಾರ್ಯಗಳಲ್ಲಿ ಅಡೆತಡೆ ಇಲ್ಲದೆ ಯಶಸ್ಸು. ಶತ್ರು ದಮನ. ಋಣ ರೋಗ, ಬಾಧೆಗಳಿಂದ ಮುಕ್ತಿ ಸಿಗುವುದು. ಶುಭಸಂಖ್ಯೆ: 4

ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ. ದೂರ ಪ್ರದೇಶಕ್ಕೆ ತೆರಳುವಿರಿ. ರಾಜಕೀಯ ವ್ಯಕ್ತಿಗಳ ಸಂಪರ್ಕದಲ್ಲಿ ಇರುವವರಿಗೆ ಅನುಕೂಲ. ಶುಭಸಂಖ್ಯೆ: 6

ಧನುಸ್ಸು: ಬಹುಮಾನ ರೂಪದಲ್ಲಿ ಹಣ ದೊರಕುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮನೆ ವಾತಾವರಣ ಕಲುಷಿತ. ಶುಭಸಂಖ್ಯೆ: 7

ಮಕರ: ಶುಭಕಾರ್ಯ ರದ್ದಾಗುವ ಸಂಭವ. ಸ್ನೇಹಿತರು ದೂರವಾಗುವರು. ಉನ್ನತ ಅಧಿಕಾರಿಗಳಿಂದ ಅಂತರ ಕಾಯ್ದುಕೊಳ್ಳಿ. ಶುಭಸಂಖ್ಯೆ: 6

ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಸಾಲ ಮಾಡಬೇಕಾದೀತು. ದಾಂಪತ್ಯ ಸಮಸ್ಯೆ ಉಲ್ಬಣ. ಮಾತಿನಿಂದ ತೊಂದರೆಯಾದೀತು. ಶುಭಸಂಖ್ಯೆ: 9

ಮೀನ: ಗರ್ಭಿಣಿಯರು ಎಚ್ಚರಿಕೆ ವಹಿಸಿ. ಮನೋರೋಗಗಳು ಅಧಿಕ. ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ನರಸಿಂಹನನ್ನು ಭಜಿಸಿ. ಶುಭಸಂಖ್ಯೆ:1

Latest Posts

ಲೈಫ್‌ಸ್ಟೈಲ್