ನಿತ್ಯಭವಿಷ್ಯ|22-05-2019

ಮೇಷ: ನಿಮ್ಮ ವಿಚಾರದಲ್ಲಿ ಖಂಡಿತ ಆತ್ಮವಿಮರ್ಶೆಯನ್ನು ಮಾಡಿಕೊಳ್ಳಿ. ಆದರೆ ಒಂದು ಮಿತಿ ಮಾತ್ರ ಇರಲಿ. ಶುಭಸಂಖ್ಯೆ: 4

ವೃಷಭ: ತಿಳಿಸದೆ ಬರುವ ಅತಿಥಿಗಳಿಂದ ಮುಜುಗರದ ಸಂದರ್ಭವು ಎದುರಾಗಬಹುದಾದ ಸಾಧ್ಯತೆ ಇದೆ. ಶುಭಸಂಖ್ಯೆ: 2

ಮಿಥುನ: ಜಗದಂಬಿಕೆಯಾದ ಚಾಮುಂಡೇಶ್ವರಿಯನ್ನು ಸ್ತುತಿಸಿ. ವಿರೋಧಿಗಳನ್ನು ನಿಯಂತ್ರಿಸಿ. ಒಳಿತಾಗಲಿದೆ. ಶುಭಸಂಖ್ಯೆ: 7

ಕಟಕ: ಪಿತೃಸಂಬಂಧವಾದ ಆಸ್ತಿಯ ವಿಚಾರದಲ್ಲಿ ಸಜ್ಜನರಿಂದ ಅನುಕೂಲವಾಗುವ ಸಾಧ್ಯತೆಗಳು ಜಾಸ್ತಿ ಇವೆ. ಶುಭಸಂಖ್ಯೆ: 5

ಸಿಂಹ: ವಿಶೇಷವಾದ ಸ್ಥಾನಮಾನ ದೊರಕುವ ವಿಚಾರದಲ್ಲಿ ಹಲವರು ನಿಮಗೆ ನೆರವಾಗುವ ಸಾಧ್ಯತೆಗಳು ಸ್ಪಷ್ಟ. ಶುಭಸಂಖ್ಯೆ: 2

ಕನ್ಯಾ: ಯೋಜನೆ ರೂಪಿಸಿದ ಮೇಲೆ ಯಶಸ್ಸು ಶತಸಿದ್ಧ ಎಂಬ ಅತಿಯಾದ ಆತ್ಮವಿಶ್ವಾಸವನ್ನು ಕೈಬಿಡಿ. ಕ್ಷೇಮ. ಶುಭಸಂಖ್ಯೆ: 8

ತುಲಾ: ಜಲದುರ್ಗೆಯನ್ನು ಭಕ್ತಿಪೂರ್ವಕವಾಗಿ ಸ್ತುತಿಸುವುದರ ಮೂಲಕ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಾಫಲ್ಯವಿದೆ. ಶುಭಸಂಖ್ಯೆ: 1

ವೃಶ್ಚಿಕ: ವಿದೇಶದಲ್ಲಿರುವ ಬಂಧುಗಳ ಜತೆಗಿನ ಆಸ್ತಿಯ ವಿವಾದವೊಂದು ಶಾಂತ ರೀತಿಯಲ್ಲಿ ಪರಿಸಮಾಪ್ತಿ ಆಗಲಿದೆ. ಶುಭಸಂಖ್ಯೆ: 5

ಧನುಸ್ಸು: ಹಳೆಯ ಸ್ನೇಹಿತರೊಬ್ಬರ ಮೂಲಕ ಸಾಲದ ವಿಷಯದ ಬಿಕ್ಕಟ್ಟೊಂದು ಶೀಘ್ರ ಪರಿಹಾರವನ್ನು ಕಾಣಲಿದೆ. ಶುಭಸಂಖ್ಯೆ: 9

ಮಕರ: ಬೆಟ್ಟದಷ್ಟು ದುಗುಡ, ದುಮ್ಮಾನ, ಕಷ್ಟಗಳಿದ್ದರೂ ಕ್ರಿಯಾಶೀಲತೆಯಿಂದ ಮುನ್ನುಗ್ಗಿ. ಜಯವು ನಿಮಗೆ ಸಿಗಲಿದೆ. ಶುಭಸಂಖ್ಯೆ: 3

ಕುಂಭ: ವಿಶೇಷವಾಗಿ ನಿಮ್ಮ ವಹಿವಾಟಿನ ಸಂಬಂಧದ ಚೌಕಟ್ಟು ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ. ಶುಭಸಂಖ್ಯೆ: 6

ಮೀನ: ಸಣ್ಣ ಪ್ರಮಾಣದ ಪ್ರವಾಸ ಕಾರ್ಯಕ್ರಮಗಳನ್ನು ಮನಸ್ಸಿರದಿದ್ದರೂ ಮಾಡಲೇಬೇಕಾಗಿ ಬರಬಹುದು. ಚಿಂತೆ ಬೇಡ. ಶುಭಸಂಖ್ಯೆ: 9

Leave a Reply

Your email address will not be published. Required fields are marked *