ನಿತ್ಯಭವಿಷ್ಯ|21-05-2019

ಮೇಷ: ರೇಗುವ ಪ್ರಶ್ನೆ ಬಂದಾಗ ಮಕ್ಕಳು ಖಿನ್ನತೆಗೆ ಜಾರದಂತೆ ನಿಗಾ ವಹಿಸಿ. ಸಂಭಾಳಿಸಿ ಧೈರ್ಯ ತುಂಬಿ. ಶುಭಸಂಖ್ಯೆ: 2

ವೃಷಭ: ಮೂಲಭೂತವಾಗಿ ನೀವು ಶ್ರಮಜೀವಿಗಳು. ನಿಮ್ಮ ಗೆಳೆಯರಿಗೆ ಇದು ಸಂತಸದ ವಿಷಯವಾಗಿ ಬೆಂಬಲ ಲಭ್ಯ. ಶುಭಸಂಖ್ಯೆ: 6

ಮಿಥುನ: ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿನ ವಿಷಯದಲ್ಲಿ ನಿಮಗೆ ಅಪರಿಚಿತರಿಂದ ಅನಿರೀಕ್ಷಿತವಾದ ಬೆಂಬಲ ಸಿಗಲಿದೆ. ಶುಭಸಂಖ್ಯೆ: 1

ಕಟಕ: ನೀವು ಅಂದುಕೊಂಡಂತೆ ನಡೆಯುವುದು ಕಷ್ಟ. ನಿಮ್ಮ ಕೆಲಸಕಾರ್ಯಗಳಲ್ಲಿ ಶ್ರಮ ಸಾಹಸಗಳು ಇರಲಿ. ಗೆಲುವಿದೆ. ಶುಭಸಂಖ್ಯೆ: 9

ಸಿಂಹ: ಭಕ್ತವತ್ಸಲನಾದ ಶ್ರೀಹರಿಯನ್ನು ತ್ರಿಕಾಲವೂ ಸ್ತುತಿಸಿ. ಕೆಲಸದ ವಿಚಾರದಲ್ಲಿ ಹರ್ಷದ ವಾರ್ತೆ ತೆರೆಯಲಿದೆ. ಶುಭಸಂಖ್ಯೆ: 5

ಕನ್ಯಾ: ಕೆಲಸದ ಸ್ಥಳದಲ್ಲಿ ಒತ್ತಡ ಎದುರಿಸುವುದು ಇದ್ದಿದ್ದೇ. ಆದರೆ ಯಾರಿಗೂ ಸಲುಗೆ ಕೊಡಬೇಡಿ. ಕಷ್ಟವಾದೀತು. ಶುಭಸಂಖ್ಯೆ: 2

ತುಲಾ: ಸುಸ್ತು, ಬಳಲಿಕೆ ನಿಮಗೆ ಕಿರಿಕಿರಿ ತರುತ್ತಿದ್ದರೆ ರಕ್ತಪರೀಕ್ಷೆ ಮಾಡಿಸಿ ಕಬ್ಬಿಣದ ಅಂಶವನ್ನು ಪರೀಕ್ಷಿಸಿಕೊಳ್ಳಿ. ಶುಭಸಂಖ್ಯೆ: 8

ವೃಶ್ಚಿಕ: ಬಾಳಸಂಗಾತಿಯ ಜತೆಗೆ ವಿರಸ ಬೇಡ. ಸಣ್ಣ ವಿಚಾರವೊಂದು ವಿಸ್ತಾರವಾದ ಕಂದಕ ನಿರ್ವಿುಸಲು ಸಾಧ್ಯ. ಶುಭಸಂಖ್ಯೆ: 6

ಧನುಸ್ಸು: ಕಣ್ಣಿಗೆ ಕಂಡಿದ್ದನ್ನು ಖರೀದಿಸಲೇಬೇಕು ಎಂಬ ಮನಸ್ಸಿನ ಒತ್ತಡ ನಿಯಂತ್ರಿಸುವುದರಿಂದ ಒಳಿತು ಉಂಟಾಗಲಿದೆ. ಶುಭಸಂಖ್ಯೆ: 3

ಮಕರ: ಕುಟುಂಬದಲ್ಲಿ ನಿಮ್ಮ ಆಣತಿಗಾಗಿ ಕಾಯುತ್ತಿರುವವರು ಇದ್ದಾರೆ. ಸೂಕ್ತವಾಗಿ ನಿರ್ದೇಶಿಸಿ ಯಶಸ್ಸು ಪಡೆಯಿರಿ. ಶುಭಸಂಖ್ಯೆ: 8

ಕುಂಭ: ನೀವು ಇಂದು ಕೆಲಸದ ಸ್ಥಳದಲ್ಲಿ ಹಲವಾರು ರೀತಿಯ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಗಿ ಬರಬಹುದು. ಶುಭಸಂಖ್ಯೆ: 4

ಮೀನ: ವರಪ್ರದೆಯಾದ ಶ್ರೀ ಕನ್ನಿಕಾ ಪರಮೇಶ್ವರಿಯನ್ನು ಬಿಳಿಯ ಹೂಗಳಿಂದ ಆರಾಧಿಸಿ. ಮುಂದಿನ ದಾರಿ ಸುಸೂತ್ರ. ಶುಭಸಂಖ್ಯೆ: 7

Leave a Reply

Your email address will not be published. Required fields are marked *