More

    ನಿತ್ಯ ಭವಿಷ್ಯ: ಈ ರಾಶಿಯವರಿಗೆ ಹೊಸ ಮನೆ ಕಟ್ಟುವ ವಿಚಾರದಲ್ಲಿ ಒಂದು ನಿರ್ಣಯಕ್ಕೆ ಬರಲು ಈ ದಿನ ಅನುಕೂಲಕರವಾಗಿದೆ.

    ಮೇಷ: ವಿವಾಹಾಪೇಕ್ಷಿಗಳು ಹಿರಿಯರ ಸಹಾಯಕ್ಕಾಗಿ ಅವಲಂಬಿಸುವುದು ಸದ್ಯದ ಸಂದರ್ಭದಲ್ಲಿ ಸೂಕ್ತವಾಗಿರುತ್ತದೆ. ಶುಭಸಂಖ್ಯೆ: 7

    ವೃಷಭ: ಹಿಂದೆಮುಂದೆ ನೋಡದೆ, ಗ್ರಹಿಸದೆಯೇ ಮುನ್ನುಗ್ಗಿ ಹಣ ಕಳೆದುಕೊಳ್ಳದಿರಿ. ಆರ್ಥಿಕ ವಿಚಾರದಲ್ಲಿ ಎಚ್ಚರ. ಶುಭಸಂಖ್ಯೆ: 3

    ಮಿಥುನ: ಆಗಬೇಕಾದ ಕೆಲಸಗಳನ್ನು ವಿನಯದೊಂದಿಗೆ ಸಾಧಿಸಲು ಮುಂದಾಗಿ. ಇದರಿಂದಾಗಿ ಒಳಿತಿನ ದಾರಿ ಸರಳ. ಶುಭಸಂಖ್ಯೆ: 6

    ಕಟಕ: ಹೊಸದಾದ ಮನೆ ಕಟ್ಟುವ ವಿಚಾರದಲ್ಲಿ ಏನೋ ಒಂದು ನಿರ್ಣಯಕ್ಕೆ ಬರಲು ದಿನ ಅನುಕೂಲಕರವಾಗಿದೆ. ಶುಭಸಂಖ್ಯೆ: 4

    ಸಿಂಹ: ನಿಮ್ಮ ಮತ್ತು ಬಾಳಸಂಗಾತಿಯ ವಿಚಾರದಲ್ಲಿನ ಸಹಮತದಿಂದ ಹೊಸದೇ ಒಳಿತಿನ ಯೋಜನೆಗೆ ಚಾಲನೆ ಲಭ್ಯ. ಶುಭಸಂಖ್ಯೆ: 7

    ಕನ್ಯಾ:  ಅನೇಕ ಸಮಸ್ಯೆಗಳು. ದುಃಖಿಸುತ್ತಿದ್ದೀರಿ. ಇವುಗಳ ನಡುವೆ ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಒಳಿತಾಗಲಿದೆ. ಶುಭಸಂಖ್ಯೆ: 9

    ತುಲಾ: ನಿಮ್ಮ ಆರ್ಥಿಕ ವಿಚಾರಗಳನ್ನು ಹೆಚ್ಚಿನ ಎಚ್ಚರಿಕೆಯಿಂದ ನಿರ್ವಹಣೆಗೆ ಒಳಪಡಿಸಿ. ಇದರಿಂದಲೇ ಒಳಿತಿದೆ. ಶುಭಸಂಖ್ಯೆ: 2

    ವೃಶ್ಚಿಕ: ಮನಸ್ಸಿನ ಇಚ್ಛೆಗಳು ಸದಾ ನೆರವೇರಬೇಕೆಂಬ ಉದ್ದೇಶ ಸರಿ. ಆದರೂ ಏಕಾಗ್ರತೆಗಾಗಿನ ವಿಚಾರ ಗಟ್ಟಿಯಾಗಿರಲಿ. ಶುಭಸಂಖ್ಯೆ: 9

    ಧನಸ್ಸು: ನಿಮ್ಮ ವರ್ಚಸ್ಸಿನ ವಿಷಯದಲ್ಲಿ ಜನರಿಗೆ ಇರುವ ಪ್ರಶಂಸೆಯ ವಿಚಾರಕ್ಕೆ ಧಕ್ಕೆ ಬಂದೀತು. ಸ್ವಲ್ಪ ಎಚ್ಚರ ವಹಿಸಿ. ಶುಭಸಂಖ್ಯೆ: 1

    ಮಕರ:ಹೆಚ್ಚಿನ ಬಂಡವಾಳ ಹಾಕಿ ವಹಿವಾಟಿಗೆ ತೊಡಗುವ ವಿಚಾರಕ್ಕೆ ಖಂಡಿತವಾಗಿಯೂ ಅವಸರ ಮಾಡದಿರಿ. ಶುಭಸಂಖ್ಯೆ: 5

    ಕುಂಭ: ವಾಯುಪ್ರಕೋಪ ಅಥವಾ ಅಜೀರ್ಣದ ಸಮಸ್ಯೆಯಿಂದ ತುಸು ಬಿಕ್ಕಟ್ಟು ಎದುರಾದೀತು. ಈ ಬಗ್ಗೆ ಜಾಗ್ರತೆ ಅಗತ್ಯವಿದೆ. ಶುಭಸಂಖ್ಯೆ: 8

    ಮೀನ: ಜನ ಎಡಬಿಡದೆ ಮುನ್ನುಗ್ಗಿ ಬರುತ್ತಾರೆ. ಆದರೆ ಹಣದ ವಿಚಾರದಲ್ಲಿ ಮಾತ್ರ ಸೂಕ್ತ ರ್ತಾಕತೆಯನ್ನು ಹೊಂದಿರಿ. ಶುಭಸಂಖ್ಯೆ: 2













    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts