ನಿತ್ಯಭವಿಷ್ಯ|20-05-2019

ಮೇಷ: ನಿಮ್ಮನ್ನು ಸುಲಭವಾಗಿ ಮೋಸಗೊಳಿಸಬಹುದು ಎಂಬಂಥವರ ತಂತ್ರಕ್ಕೆ ಅವಕಾಶವನ್ನು ಮಾಡಿಕೊಡದಿರಿ ಜಾಗ್ರತೆ. ಶುಭಸಂಖ್ಯೆ: 8

ವೃಷಭ: ಪ್ರಾಮಾಣಿಕರು ಯಾರು, ನಾಟಕ ಮಾಡುವವರು ಯಾರು ಎಂಬ ವಿಷಯ ಗೊಂದಲ ತರಬಹುದು. ಎಚ್ಚರ. ಶುಭಸಂಖ್ಯೆ: 2

ಮಿಥುನ: ನಿಮ್ಮನ್ನು ಉಪಯೋಗಿಸಿಕೊಳ್ಳುವ ಮಂದಿಯ ಬಗೆಗೆ ಮೈಯೆಲ್ಲ ಕಣ್ಣಾಗಿರಲಿ. ಆದರೆ ಚಿಂತೆ ಬೇಡ. ಒಳಿತಿದೆ. ಶುಭಸಂಖ್ಯೆ: 5

ಕಟಕ: ಬಳಸಿ ಸುತ್ತಿ ಸಾಗುವ ಮಾರ್ಗವನ್ನು ವ್ರತ ಉಪಯೋಗಿಸದಿರಿ. ನೇರ ನಡೆಯಿಂದಲೇ ಶೀಘ್ರದಲ್ಲಿ ಸಿದ್ಧಿ ಇದೆ. ಶುಭಸಂಖ್ಯೆ: 1

ಸಿಂಹ: ಹಲವಾರು ಮುಖವಾಡ ಹೊತ್ತಂತಹ ಜನರು ತೊಂದರೆ ನೀಡಬಹುದು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ. ಶುಭಸಂಖ್ಯೆ: 9

ಕನ್ಯಾ: ಗುರು ನರಸಿಂಹನ ಆರಾಧನೆಯಿಂದ ದುಷ್ಟ ಶಕ್ತಿಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ನಿಮಗೆ ಸಾಧ್ಯವಿದೆ. ಶುಭಸಂಖ್ಯೆ: 2

ತುಲಾ: ಧನಲಾಭವನ್ನು ನೀಡುವಂತಹ ವರಪ್ರದೆಯಾದ ಶ್ರೀ ಮಹಾಲಕ್ಷಿ್ಮಯ ಸ್ತುತಿಯಿಂದ ಮನಸ್ಸಿಗೆ ಆನಂದ ಲಭ್ಯ. ಶುಭಸಂಖ್ಯೆ: 7

ವೃಶ್ಚಿಕ: ವ್ಯಾಪಾರದ ಕುರಿತಾದ ವಿಚಾರ ಬಂದಾಗ ಪಕ್ಕಾ ವ್ಯವಹಾರಸ್ಥರಾಗಿ ವರ್ತಿಸುವುದರಿಂದ ಲಾಭಕ್ಕೆ ದಾರಿ ಇದೆ. ಶುಭಸಂಖ್ಯೆ: 8

ಧನುಸ್ಸು: ಮಾತಿನ ಚಾತುರ್ಯವು ಬಾಳಿನಲ್ಲಿ ಹೊಸದೇ ಆದ ಒಂದು ಒಳ್ಳೆಯ ಅಧ್ಯಾಯವನ್ನು ಬರೆಯಲು ಸಾಧ್ಯವಿದೆ. ಶುಭಸಂಖ್ಯೆ: 3

ಮಕರ: ವಿರೋಧಿಗಳನ್ನು ಕೂಡ ಬಹಳ ಆದರದಿಂದಲೇ ನಡೆಸಿಕೊಳ್ಳಿ. ಆದರೆ ಹೆಗಲಿಗೆ ಏರಿಸಿಕೊಳ್ಳಲು ಹೋಗದಿರಿ. ಶುಭಸಂಖ್ಯೆ: 5

ಕುಂಭ: ಬರೀ ಮಾತು ಮಾತು ಎಂದು ಸಮಯವನ್ನು ವ್ಯರ್ಥ ಮಾಡದಿರಿ. ವ್ಯಕ್ತಿತ್ವದ ತೂಕವನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 4

ಮೀನ: ಆರೋಗ್ಯದ ಕುರಿತು ಹೆಚ್ಚಿನದಾದ ಎಚ್ಚರ ಇದ್ದೇ ಇರಲಿ. ದಿನನಿತ್ಯದ ಒತ್ತಡ ಇದ್ದದೇ. ವಿಶ್ರಾಂತಿಯೂ ಇರಲಿ. ಶುಭಸಂಖ್ಯೆ: 6

Leave a Reply

Your email address will not be published. Required fields are marked *