ನಿತ್ಯಭವಿಷ್ಯ|20-04-2019

ಮೇಷ: ಮನಸ್ಸನ್ನು ಎರಡೂ ಅತಿಗಳತ್ತ ಹೊಯ್ದಾಡಲು ಬಿಡಬೇಡಿ. ಇದರಿಂದ ಗುರಿಯನ್ನು ತಲುಪಲು ಅವಕಾಶವಿದೆ. ಶುಭಸಂಖ್ಯೆ: 7

ವೃಷಭ: ಹೋಗುವ ದಾರಿಯಲ್ಲಿ ಎದುರಾಗಬಹುದಾದ ಬಿಕ್ಕಟ್ಟುಗಳನ್ನು ದಿಟ್ಟತನದಿಂದ ಪರಿಹರಿಸಲು ಸಾಧ್ಯತೆ ಇದೆ. ಶುಭಸಂಖ್ಯೆ: 1

ಮಿಥುನ: ಎಷ್ಟೇ ಚಡಪಡಿಸಿದರೂ ಇಂದು ಕೆಲಸದಲ್ಲಿ ವಿಳಂಬ ಉಂಟಾಗಬಹುದು. ಈ ಬಗ್ಗೆ ನಿಮ್ಮಲ್ಲಿ ತುಸು ತಾಳ್ಮೆ ಇರಲಿ. ಶುಭಸಂಖ್ಯೆ: 4

ಕಟಕ: ಇದ್ದಿದ್ದನ್ನು ಬಿಟ್ಟು ಇಲ್ಲದ್ದರ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳದಿರಿ. ಪಾಲಿಗೆ ಬಂದಿದ್ದು ಪಂಚಾಮೃತವಾದರೆ ಕ್ಷೇಮ. ಶುಭಸಂಖ್ಯೆ: 2

ಸಿಂಹ: ಎದುರಾಗಿ ಬಂದರೆ ಹುಲಿಯನ್ನು ಕೂಡ ನಿಯಂತ್ರಿಸಬಲ್ಲಿರಿ. ಆದರೆ ಹಿಂಬದಿಯ ಶತ್ರುಗಳ ಬಗ್ಗೆ ಎಚ್ಚರ ವಹಿಸಿ. ಶುಭಸಂಖ್ಯೆ: 6

ಕನ್ಯಾ: ನಿಮ್ಮ ಹಿರಿಯರ ಆಸ್ತಿಯ ಬಗೆಗಿನ ವಿಚಾರದಲ್ಲಿ ಮುತುವರ್ಜಿಯಿಂದ ಇದ್ದರೆ ಕ್ಷೇಮ. ಸಿಟ್ಟು ಪ್ರಯೋಜನಕರವಲ್ಲ. ಶುಭಸಂಖ್ಯೆ: 3

ತುಲಾ: ಕುಟುಂಬದ ಹಿರಿಯರೊಬ್ಬರ ಮೂಲಕ ಕೆಲವು ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ. ಚಿಂತೆ ಬೇಡ. ಶುಭಸಂಖ್ಯೆ: 8

ವೃಶ್ಚಿಕ: ಹುಡುಕುವ ಬಳ್ಳಿಯೊಂದು ಕಾಲಿಗೆ ತಗುಲಿತು ಎಂಬಂತೆ ಅನಿರೀಕ್ಷಿತ ಸಹಾಯವೊಂದು ಆಕಸ್ಮಿಕವಾಗಿ ಸಿಗಲಿದೆ. ಶುಭಸಂಖ್ಯೆ: 4

ಧನುಸ್ಸು: ಮನೆಯ ಬಿಕ್ಕಟ್ಟುಗಳನ್ನು ಕೆಲಸದ ಸ್ಥಳಕ್ಕೆ ತರಬೇಡಿ. ಸದ್ಯ ಗಣಪತಿ ಸ್ತುತಿ, ಜತೆಗೆ ಶಾಂತತೆ ವಹಿಸುವುದು ಉತ್ತಮ. ಶುಭಸಂಖ್ಯೆ: 1

ಮಕರ: ಅಪರಿಚಿತರಿಂದಲೂ ಉತ್ತಮವಾದುದು ಲಭ್ಯವಾಗಲಿದೆ. ಆದರೆ ಹಣದ ವ್ಯವಹಾರ ಮಾಡುವುದೇನೂ ಬೇಡ. ಶುಭಸಂಖ್ಯೆ: 9

ಕುಂಭ: ಮಕ್ಕಳ ಬಗೆಗೆ ಲಕ್ಷ್ಯ ನೀಡಿ. ಮುಂದಿನ ದಿನಗಳಿಗಾಗಿ ಈ ನಿಟ್ಟಿನಲ್ಲಿ ಒಳಿತಾದುದನ್ನು ಯೋಚಿಸಿ. ಲಾಭವಿದೆ. ಶುಭಸಂಖ್ಯೆ: 7

ಮೀನ:  ನೀವು ಸ್ವಭಾವತಃ ಬುದ್ಧಿವಂತರು. ವಿನಾಕಾರಣ ತೊಂದರೆ ಕೊಡುವ ಜನರನ್ನು ಜಾಣ್ಮೆಯಿಂದ ದೂರಕ್ಕೆ ತಳ್ಳಿ. ಶುಭಸಂಖ್ಯೆ: 5

Leave a Reply

Your email address will not be published. Required fields are marked *