ನಿತ್ಯಭವಿಷ್ಯ|19-05-2019

ಮೇಷ: ಬಾಲಗಣಪತಿಯ ಆರಾಧನೆಯಿಂದ ಮನೋವಾಂಛಿತ ಅಭಿಲಾಷೆಗಳನ್ನು ಗೆಲ್ಲಲು ಅವಕಾಶಗಳು ಹೇರಳವಾಗಿವೆ. ಶುಭಸಂಖ್ಯೆ: 2

ವೃಷಭ: ಬೆಣ್ಣೆಯಿಂದ ಕೂದಲು ತೆಗೆಯುವ ಕಲೆಯನ್ನು ಅರಗಿಸಿಕೊಳ್ಳಿ. ದುಷ್ಟರನ್ನು ಎದುರಿಸುವಂಥ ಎದೆಗಾರಿಕೆ ಕೂಡ ಇರಲಿ. ಶುಭಸಂಖ್ಯೆ: 6

ಮಿಥುನ: ನಿಮ್ಮ ಕಾಯಕ, ಶ್ರಮಪೂರ್ಣ ದುಡಿಮೆಗಳನ್ನು ಮುಂದುವರಿಸಿ. ಅದೃಷ್ಟದ ಸುವರ್ಣಸದೃಶವಾದ ಮಿಂಚು ಗೋಚರಿಸಲಿದೆ. ಶುಭಸಂಖ್ಯೆ: 9

ಕಟಕ: ಅನುಮಾನ ಯಾವಾಗಲೂ ಎರಡು ಅಲಗಿನ ಕತ್ತಿ. ವಿನಾಕಾರಣವಾಗಿ ಅನುಮಾನಿಸದಿರಿ. ರ್ತಾಕ ನಿಲುವು ಇರಲಿ. ಶುಭಸಂಖ್ಯೆ: 7

ಸಿಂಹ: ಶಾಂತಿ, ಸಮಾಧಾನಗಳಿಂದ ಇರುವುದು ಕೂಡ ಒಂದು ಕಲೆ. ಒತ್ತಡದ ನಡುವೆಯೇ ಕ್ರಿಯಾಶೀಲತೆ ತೋರಿಸುತ್ತಾ ಗೆಲ್ಲಿ. ಶುಭಸಂಖ್ಯೆ: 5

ಕನ್ಯಾ: ನೀವು ನಿಮ್ಮ ವರ್ತಮಾನದಲ್ಲಿ ಬರಿಯ ಬೋಳೆತನವನ್ನು ಪ್ರದರ್ಶಿಸುತ್ತಿದ್ದರೆ ಕಷ್ಟಗಳನ್ನೇ ಎದುರು ಹಾಕಿಕೊಳ್ಳುತ್ತೀರಿ. ಶುಭಸಂಖ್ಯೆ: 1

ತುಲಾ: ಕೇವಲ ತಾಳ್ಮೆ, ಪ್ರತಿಯೊಂದಕ್ಕೂ ಒಳಿತು-ಕೆಡುಕುಗಳ ಲೆಕ್ಕಾಚಾರ ಎಂದು ನಿಷ್ಕ್ರಿಯರಾಗಿದ್ದೀರಿ. ಮುನ್ನುಗ್ಗಿ. ಶುಭಸಂಖ್ಯೆ: 8

ವೃಶ್ಚಿಕ: ದಟ್ಟವಾಗಿಯೇ ಕರಿ ಕಾಮೋಡಗಳಿಂದ ತುಂಬಿಕೊಂಡಿರುವ ಆಗಸ ಎಂದು ಧೃತಿಗೆಡದಿರಿ. ಸೂರ್ಯನ ಬೆಳಕು ಕೂಡ ಬರಲಿದೆ. ಶುಭಸಂಖ್ಯೆ: 3

ಧನುಸ್ಸು: ಶ್ರೀಮನೋಹರ ಅಚ್ಯುತನನ್ನು ಭಕ್ತಿಭಾವದಿಂದ ಸ್ತುತಿಸುವ ಮೂಲಕ ಚ್ಯುತಿ ಇರದಂತಹ ಖ್ಯಾತಿಯನ್ನು ಗಳಿಸುವಿರಿ. ಶುಭಸಂಖ್ಯೆ: 7

ಮಕರ: ನಿಯಂತ್ರಿಸಲು ಅಸಾಧ್ಯ ಎಂಬ ಚಟ ಹಾಗೂ ಕೋಪಾವೇಶಗಳಿಂದ ಹೊರಬರಲು ನಿಗೂಢ ಶಕ್ತಿಯೊಂದು ಸಹಕರಿಸಲಿದೆ. ಶುಭಸಂಖ್ಯೆ: 4

ಕುಂಭ: ಎಷ್ಟೇ ಕತ್ತಲು ಇರಲಿ, ನಿಮಗೆ ಅನುಕೂಲಕರ ಶನೈಶ್ಚರನ ಕರುಣೆಯಿಂದ ಮನಸ್ಸಿನ ಯೋಚನೆಗಳಿಗೆ ಸಿದ್ಧಿ ಇದೆ. ಶುಭಸಂಖ್ಯೆ: 9

ಮೀನ: ಬಿಕ್ಕಟ್ಟನ್ನು ತಂದಿಡುತ್ತಿದ್ದ ವಿಷಯಗಳು ಇದ್ದಕ್ಕಿದ್ದಂತೆ ಎಲ್ಲ ತೊಂದರೆಗಳಿಂದ ಹೊರಬಂದು ಸಫಲವಾಗಲಿವೆ. ಶುಭಸಂಖ್ಯೆ: 5

Leave a Reply

Your email address will not be published. Required fields are marked *