ನಿತ್ಯಭವಿಷ್ಯ|19-04-2019

ಮೇಷ: ಇಷ್ಟು ದಿನಗಳಿಂದ ಸುಮ್ಮನೆ ತಲೆ ತಿನ್ನುತ್ತಿದ್ದ ವಿಚಾರಗಳೇ ಸುಲಭವಾಗಿ ಲಾಭದ ದಾರಿಗೆ ಬೆಳಕು ನೀಡಲಿವೆ. ಶುಭಸಂಖ್ಯೆ: 8

ಮೇಷ: ಕೂಡಲೇ ಧಾವಂತದಿಂದ ಶಾಂತಿ, ಸಮಾಧಾನ ಕಳೆದುಕೊಳ್ಳದಿರಿ. ಕವಿದ ಕಾರ್ಮೋಡ ದೂರವಾಗಿ ಬೆಳಕು ಬರುತ್ತದೆ. ಶುಭಸಂಖ್ಯೆ: 6

ಮಿಥುನ: ನಿಮ್ಮ ಭಾವನಾತ್ಮಕ ಸಂಬಂಧ-ಅನುಬಂಧ ಎಲ್ಲವೂ ಸರಿ. ಆದರೆ ಅತಿಯಾದ ಬೋಳೆತನ ಮಾತ್ರ ಬೇಡ. ಎಚ್ಚರ. ಶುಭಸಂಖ್ಯೆ: 1

ಕಟಕ: ಸುಖಾಸುಮ್ಮನೆ ಕೂಗಾಡುವ ಮಂದಿ ಸಿಗುತ್ತಾರೆ. ತಾಳ್ಮೆ ಕಳೆದುಕೊಳ್ಳದಿರಿ. ನಾಜೂಕಾಗಿ ಅವರನ್ನು ದೂರ ಕಳುಹಿಸಿ. ಶುಭಸಂಖ್ಯೆ: 3

ಸಿಂಹ: ಎದುರಾಗುವ ಅಡೆತಡೆಗಳ ಬಗ್ಗೆ ಕ್ರಿಯಾಶೀಲರಾದ ನೀವು ಹೆದರಬೇಕಾಗಿಲ್ಲ. ಪ್ರಯತ್ನವೇ ಒಳಿತಿನ ದಾರಿ. ಶುಭಸಂಖ್ಯೆ: 9

ಕನ್ಯಾ: ಮೈ ಪರಚಿಕೊಳ್ಳದಿರಿ. ಸುಲಭವಾದ ದಾರಿಗಳನ್ನು ಸೂಕ್ತವಾದ ಆಲೋಚನೆಯೊಂದಿಗೆ ಹುಡುಕಿ. ಯಶಸ್ಸಿದೆ. ಶುಭಸಂಖ್ಯೆ: 6

ತುಲಾ: ಕಾರಣವಿರದೆ ಯಾರನ್ನೂ ಅವಮಾನಿಸಲು ಹೋಗದಿರಿ. ನಂಬಲೂ ಮುಂದಾಗದಿರಿ. ಆತ್ಮವಿಶ್ವಾಸದಿಂದ ಗೆಲುವು. ಶುಭಸಂಖ್ಯೆ: 1

ವೃಶ್ಚಿಕ: ನಿಮ್ಮ ಯೋಚನಾಶಕ್ತಿಯ ಅಲೆಗಳು ನಿರ್ವಿುಸುವ ಭ್ರಮೆಗಳೇ ನಿಜವಾದ ನಿಮ್ಮ ಶತ್ರುಗಳಾಗುತ್ತವೆ. ಎಚ್ಚರ. ಶುಭಸಂಖ್ಯೆ: 4

ಧನುಸ್ಸು: ಅದೃಶ್ಯ ಹಾಗೂ ನಿಗೂಢ ಚೈತನ್ಯವೊಂದು ನಿಮಗೆ ಸಕಾರಾತ್ಮಕ ಧ್ಯೇಯೋದ್ದೇಶಗಳನ್ನು ಒದಗಿಸಿಕೊಡಲಿದೆ. ಶುಭಸಂಖ್ಯೆ: 7

ಮಕರ: ಅದೃಷ್ಟವನ್ನು ನಂಬಲೇಬೇಕು. ಆದರೂ ಕೆಲವು ಬಗೆಯ ಪುರುಷಪ್ರಯತ್ನಗಳು ಕೂಡ ಬೇಕು. ಮುನ್ನುಗ್ಗದೆ ಯಶಸ್ಸಿಲ್ಲ. ಶುಭಸಂಖ್ಯೆ: 9

ಕುಂಭ: ನಿಮ್ಮನ್ನು ನೀವೇ ನಿಯಂತ್ರಿಸಲಾಗದ ಕೆಟ್ಟ ಚಟಗಳಿಂದ ಹೊರಬರಲು ಇಂದು ಒಳಿತಿನ ದಿನ. ಸ್ಥೆ ೖರ್ಯವನ್ನು ಪ್ರಕಟಿಸಿ. ಶುಭಸಂಖ್ಯೆ: 2

ಮೀನ:  ಅವಸರ ಮಾಡದೆ ನಿಧಾನವಾದ ಆದರೆ ಪ್ರಧಾನವಾದ ಹೆಜ್ಜೆಗಳನ್ನು ಇರಿಸಿ ಯಶಸ್ಸಿನ ಬಾಗಿಲು ತೆರೆಯಿರಿ. ಒಳಿತಿದೆ. ಶುಭಸಂಖ್ಯೆ: 5