ನಿತ್ಯಭವಿಷ್ಯ|18-06-2019

ಮೇಷ: ಹಲವು ಪ್ರಯತ್ನಗಳನ್ನು ಮಾಡುವ ನಿಮ್ಮ ಕ್ರಿಯಾಶೀಲತೆ ಪ್ರಶಂಸಾರ್ಹ. ಉತ್ತಮ ಕೆಲಸವನ್ನು ಹಚ್ಚುತ್ತೀರಿ. ಶುಭಸಂಖ್ಯೆ: 2

ವೃಷಭ: ಸ್ವಜನರಿಂದಲೇ ಅವಮಾನ ಆಗುವ ಸಾಧ್ಯತೆಗಳಿವೆ. ಅಲ್ಪರನ್ನು ಹೆಗಲ ಮೇಲೆ ಏರಿಸಿಕೊಳ್ಳಲು ಹೋಗದಿರಿ. ಶುಭಸಂಖ್ಯೆ: 7

ಮಿಥುನ: ಇರುವ ಕೆಲಸ ಬಿಟ್ಟು ಹೊಸ ಕೆಲಸವನ್ನು ಹುಡುಕಾಡಿ. ತೊಂದರೆ ಇಲ್ಲ. ಆದರೆ ಏಕಾಏಕಿ ಇರುವ ಕೆಲಸ ಬಿಡಬೇಡಿ. ಶುಭಸಂಖ್ಯೆ: 3

ಕಟಕ: ನೆರಮನೆಯ ಜನರು ಕಾಲು ಕೆದರಿ ಜಗಳ ಮಾಡಲು ಅಥವಾ ತಪ್ಪು ಹುಡುಕಲು ಬರಬಹುದು. ಎಚ್ಚರ. ಶುಭಸಂಖ್ಯೆ: 5

ಸಿಂಹ: ವೈಯಕ್ತಿಕ ವಿಷಯಗಳಲ್ಲಿ ತಲೆ ಹಾಕಲು ಯಾರಿಗೂ ಅವಕಾಶ ಸಿಗದಿರುವಂತೆ ನಿಗಾ ವಹಿಸಿ. ಇದರಿಂದ ಕ್ಷೇಮ. ಶುಭಸಂಖ್ಯೆ: 9

ಕನ್ಯಾ: ಮನೆಯ ಜನರ ನಡುವಿನ ಮನಸ್ತಾಪಗಳು ತಲೆ ತಿನ್ನಬಹುದು. ಯಜಮಾನರಾಗಿ ಸಮಸ್ಯೆಯನ್ನು ಬಗೆಹರಿಸಿ. ಶುಭಸಂಖ್ಯೆ: 3

ತುಲಾ: ಹಿರಿಯರು ನಿಮ್ಮಿಂದ ತುಂಬ ನಿರೀಕ್ಷೆ ಮಾಡಬಹುದು. ತಾಳ್ಮೆ ಕಳೆದುಕೊಳ್ಳದಿರಿ. ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ಶುಭಸಂಖ್ಯೆ: 1

ವೃಶ್ಚಿಕ: ಪೂರೈಸಬೇಕಾದ ಕೆಲಸ ಕಷ್ಟಕರವಾಗಬಹುದು. ಸಹೋದರರ ಸಹಾಯದಿಂದ ಅದನ್ನು ಮಾಡಿ ಮುಗಿಸಬಹುದು. ಶುಭಸಂಖ್ಯೆ: 6

ಧನುಸ್ಸು: ಧನಲಾಭಕ್ಕಾಗಿ ಕಾತರಿಸುತ್ತಿದ್ದೀರಿ. ನಿಮ್ಮ ಪ್ರತಿಭೆಯನ್ನು ಸರಿಯಾಗಿ ಬಳಸಿ ಮುಂದೆ ನಡೆದರೆ ಧನಲಾಭ ಸಾಧ್ಯ. ಶುಭಸಂಖ್ಯೆ: 4

ಮಕರ: ಕೃಷಿಕರಿಗೆ, ರಾಜಕಾರಣಿಗಳಿಗೆ, ಗಾಯಕರಿಗೆ ಉತ್ತಮವಾದುದನ್ನು ಸಾಧಿಸಿಕೊಳ್ಳಲು ಉಪಯುಕ್ತವಾದ ದಿನವಾಗಿದೆ. ಶುಭಸಂಖ್ಯೆ: 7

ಕುಂಭ: ಆತ್ಮೀಯರಂತೆ ನಟಿಸಿ ನಿಮ್ಮ ದುರುಪಯೋಗ ಮಾಡಿಕೊಳ್ಳಲು ಕೆಲವರು ಮುಂದಾಗಬಹುದು. ಈ ಬಗೆಗೆ ಜಾಣ್ಮೆಯಿಂದಿರಿ. ಶುಭಸಂಖ್ಯೆ: 1

ಮೀನ: ತೀರಾ ಬೇಗುದಿಯ ವಿಚಾರವೊಂದು ನಿಮ್ಮನ್ನು ಚಿಂತೆಗೆ ಗುರಿ ಮಾಡಬಹುದು. ಎಚ್ಚರದಿಂದಲೇ ನಿಭಾಯಿಸಿ. ಶುಭಸಂಖ್ಯೆ: 8

Leave a Reply

Your email address will not be published. Required fields are marked *