ನಿತ್ಯಭವಿಷ್ಯ|18-05-2019

ಮೇಷ: ಅವಸರದ ನಿರ್ಣಯ ಕೈಗೊಳ್ಳದಿರಿ. ಅನೇಕ ರೀತಿಯ ಅಸಂಗತ ಪರಿಣಾಮಗಳೂ ಉಂಟಾಗಲು ಸಾಧ್ಯ. ಶುಭಸಂಖ್ಯೆ: 2

ವೃಷಭ: ಖರ್ಚುವೆಚ್ಚ ಅಗತ್ಯವಾಗಿರುವಲ್ಲಿ ಕಠಿಣವಾದ ನಿಯಂತ್ರಣ ಬೇಡ. ಅದರಿಂದ ನಗೆಪಾಟಲಿಗೆ ಈಡಾಗುವಿರಿ. ಶುಭಸಂಖ್ಯೆ: 7

ಮಿಥುನ: ಹೊಸ ಪಾಲುದಾರರ ಲಭ್ಯತೆಯಿಂದಾಗಿ ಹಳೆಯ ಕಾರ್ಯಯೋಜನೆ ಮುನ್ನಡೆಸಲು ಸಾಧ್ಯವಾದೀತು. ಶುಭಸಂಖ್ಯೆ: 5

ಕಟಕ: ವ್ಯಾಪಾರ ವಹಿವಾಟು ಸಂದರ್ಭದಲ್ಲಿ ಎಚ್ಚರ ಇರಲಿ. ಸ್ವಕೀಯರೇ ನಿಮಗೆ ದೊಡ್ಡ ತೊಂದರೆ ತಂದಾರು. ಶುಭಸಂಖ್ಯೆ: 1

ಸಿಂಹ: ಜ್ಞಾನನಿಧಿಯಾದ ಮಹಾಗಣಪತಿಯನ್ನು ಆರಾಧಿಸಿ. ಹಲವು ರೀತಿಯ ತೊಡಕುಗಳು ದೂರವಾಗಲಿವೆ. ಶುಭಸಂಖ್ಯೆ: 8

ಕನ್ಯಾ: ರಾಜಕಾರಣಿಗಳಿಗೆ ಬೇಸರದ ವಿಷಯವನ್ನು ಉಂಟುಮಾಡುವ ಬೆಳವಣಿಗೆ ಸಾಧ್ಯವಿದೆ. ನಿಗಾ ಇರಲಿ. ಶುಭಸಂಖ್ಯೆ: 2

ತುಲಾ: ವಿರುದ್ಧ ಲಿಂಗಿಗಳಿಂದ ವರ್ಚಸ್ಸಿಗೆ ಬಾಧೆ ಬರಬಹುದಾದ ಸೂಚನೆಗಳಿವೆ. ಈ ಬಗ್ಗೆ ಹೆಚ್ಚು ಎಚ್ಚರ ಇರಲಿ. ಶುಭಸಂಖ್ಯೆ: 4

ವೃಶ್ಚಿಕ: ಮಹಾಲಕ್ಷಿ್ಮಯನ್ನು ಸ್ತುತಿಸುವ ವಿಚಾರವನ್ನು ನಿಷ್ಠೆಯಿಂದ ಮಾಡಿ. ಗಳಿಕೆಯ ದಾರಿ ಸುಗಮವಾಗಲಿದೆ. ಶುಭಸಂಖ್ಯೆ: 6

ಧನುಸ್ಸು: ಅತಿಯಾದ ಆತ್ಮವಿಶ್ವಾಸವನ್ನು ತೋರಿಸಿ ಕೈ ಸುಟ್ಟುಕೊಳ್ಳದಿರಿ. ತಾಳ್ಮೆಯು ನಿಮಗೆ ಸಂಜೀವಿನಿಯಾಗಿದೆ. ತಿಳಿದಿರಿ. ಶುಭಸಂಖ್ಯೆ: 9

ಮಕರ: ತೊಂದರೆ ತರುವ ಗೆಳೆಯರಿದ್ದು ಏನು ಪ್ರಯೋಜನ? ತೊಡಕು ತರುವವರ ಬಳಿ ಮಾತುಗಳು ಬೇಡ. ಶುಭಸಂಖ್ಯೆ: 3

ಕುಂಭ: ಒಡಹುಟ್ಟಿದವರಿಂದ ನಿಮ್ಮ ಪಾಳಿಗೆ ಸೂಕ್ತವಾದ ಸಲಹೆ ಸೂಚನೆಗಳ ಬಗೆಗಾಗಿ ಸಹಾಯ ಸಾಧ್ಯವಾಗಲಿದೆ. ಶುಭಸಂಖ್ಯೆ: 5

ಮೀನ: ಹೊಗಳಿ ಕೆಲಸ ಮಾಡಿಸಿಕೊಂಡು ಹೋಗುವ ಕೆಲವರಿಂದ ನಿಮ್ಮ ಕೆಲಸಗಳು ಹಾಳು. ಹುಷಾರು. ಶುಭಸಂಖ್ಯೆ: 8