ನಿತ್ಯಭವಿಷ್ಯ| 15-03-2019

ಮೇಷ: ಯಾವುದೇ ಕೆಲಸಕಾರ್ಯಗಳೂ ಸುಲಭವಾಗಿ ಕೈಗೂಡುವುದಿಲ್ಲ. ಆದರೆ ಪ್ರಯತ್ನಶೀಲತೆಯು ಗುರಿಯನ್ನು ತಲುಪಿಸುತ್ತದೆ. ಶುಭಸಂಖ್ಯೆ: 2

ವೃಷಭ: ಹುಲಿ ಹೋಗುವುದನ್ನು ನೋಡದೆ, ಇಲಿ ಹೋಯಿತೆಂದು ಪರಿತಪಿಸುವ ವ್ಯರ್ಥ ರೋದನ ಕೈಬಿಡಿ. ಒಳಿತಾಗಲಿದೆ. ಶುಭಸಂಖ್ಯೆ: 6

ಮಿಥುನ: ಪೊಳ್ಳು ಮಾತುಗಳನ್ನು ಕೇಳಿಸಿಕೊಳ್ಳಲೂ ಬೇಡಿ. ಮಾತನಾಡಲೂ ಬೇಡಿ. ಇಷ್ಟಾರ್ಥಗಳ ಸಿದ್ಧಿಗೆ ದಾರಿ ಇದೆ. ಶುಭಸಂಖ್ಯೆ: 3

ಕರ್ಕಾಟಕ: ನಿಮ್ಮಲ್ಲಿ ಮನೋಬಲ, ಆತ್ಮಬಲ ಭದ್ರವಾಗಿದೆ. ಸಂಕಲ್ಪಿತ ಕಾರ್ಯಗಳಿಗೆ ಮುಂದಡಿ ಇರಿಸಿ. ನಿಮಗೆ ನಿರಾಳತೆ ಸಾಧ್ಯ. ಶುಭಸಂಖ್ಯೆ: 9

ಸಿಂಹ: ಪರಮ ಶಾಂತಾತ್ಮನಾದ ಕುಬೇರನನ್ನು ಆರಾಧಿಸಿ. ಕೊಟ್ಟ ಹಣ ಹಿಂದಿರುಗಿ ಬರುವ ಸಾಧ್ಯತೆಗೆ ದಾರಿ ಸಿಗಲಿದೆ. ಶುಭಸಂಖ್ಯೆ: 5

ಕನ್ಯಾ: ಹುಟ್ಟು ಗುಣ ಘಟ್ಟ ಹತ್ತಿದರೂ ಬಿಡದು ಎಂಬ ಗಾದೆಮಾತು ನೆನಪಿಡಿ. ಜವಾಬ್ದಾರಿಯನ್ನು ಪೂರೈಸಿ. ಪ್ರಶಂಸೆ ಲಭ್ಯ. ಶುಭಸಂಖ್ಯೆ: 7

ತುಲಾ: ನಿಮ್ಮ ಮಾತಿನ ಶಕ್ತಿಗೆ ಅಪರೂಪದ ಚುಂಬಕದ ಗುಣವಿದೆ. ಜನರ ಪ್ರಶಂಸೆಗೆ ಪಾತ್ರರಾಗಿ ಗೆಲ್ಲುತ್ತೀರಿ. ಶುಭಸಂಖ್ಯೆ: 2

ವೃಶ್ಚಿಕ: ಶಿವಚಾಪ ಪ್ರಭಂಜನನಾದ ಶ್ರೀರಾಮನನ್ನು ಸ್ತುತಿಸಿ. ಆವರಿಸಿಕೊಳ್ಳುವ ಕರಿಮೋಡಗಳು ದೂರವಾಗಲಿವೆ. ಶುಭಸಂಖ್ಯೆ: 4

ಧನಸ್ಸು: ಬಿಕ್ಕಟ್ಟು, ಬಿಕ್ಕಟ್ಟು ಎಂದು ಸುಮ್ಮನೆ ಕ್ರಿಯಾಶೂನ್ಯರಾಗಿ ಇರಬೇಡಿ. ಮುನ್ನುಗ್ಗಿ. ದೈವಬಲದಿಂದ ಗೆಲುವಿದೆ. ಶುಭಸಂಖ್ಯೆ: 9

ಮಕರ: ಯಾವುದೋ ದಿನದ ನಿಮ್ಮ ಪ್ರಮಾದ ಒಂದನ್ನು ನೆನಪಿಟ್ಟು ತೊಂದರೆ ತರುವ ವ್ಯಕ್ತಿಯ ಬಗ್ಗೆ ಎಚ್ಚರ ಇರಲಿ. ಶುಭಸಂಖ್ಯೆ: 1

ಕುಂಭ: ದಂತಗೋಪುರದಲ್ಲಿ ವಿಹರಿಸುವ ಕೆಲಸ ಕೈಬಿಡಿ. ಕಾಯಕವೇ ಕೈಲಾಸ ಎಂಬುದನ್ನು ನಂಬಿ. ಯಶಸ್ಸು ಲಭ್ಯ. ಶುಭಸಂಖ್ಯೆ: 8

ಮೀನ: ನಿಮ್ಮ ಸಂಭ್ರಮವನ್ನು ಕಂಡು ಹೊಟ್ಟೆ ಉರಿದುಕೊಳ್ಳುವ ಮಂದಿಯ ಬಳಿ ಯಾವುದೇ ರೀತಿಯ ಮಾತುಕತೆ ಬೇಡ. ಶುಭಸಂಖ್ಯೆ: 5