ನಿತ್ಯಭವಿಷ್ಯ|ಈ ರಾಶಿಯವರಿಗೆ ಅನಪೇಕ್ಷಿತ ಜನರು ನಿಮ್ಮ ಸುತ್ತಮುತ್ತ ಬಂದು ತೊಂದರೆ ತರಬಹುದು

ಮೇಷ: ಅನಪೇಕ್ಷಿತ ಜನರು ನಿಮ್ಮ ಸುತ್ತಮುತ್ತ ಬಂದು ತೊಂದರೆ ತರಬಹುದು. ಉಪಾಯದಿಂದ ದೂರ ಕಳಿಸಿ. ಶುಭಸಂಖ್ಯೆ: 7

ವೃಷಭ: ನಿಮ್ಮ ಯೋಜನೆಗಳು ಅರ್ಥಪೂರ್ಣವಾದರೂ ಅನ್ಯದಾದ ರೀತಿಯ ಪ್ರಯತ್ನಗಳಿಂದಲೇ ಯಶಸ್ಸು ಲಭ್ಯವಿದೆ. ಶುಭಸಂಖ್ಯೆ: 8

ಮಿಥುನ: ನಿಮ್ಮನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ಕುರಿತು ಎಚ್ಚರಿಕೆಯಿಂದ ಇರಿ. ಜಾಣ್ಮೆ ಅಗತ್ಯವಾಗಿದೆ. ಶುಭಸಂಖ್ಯೆ: 5

ಕಟಕ: ನೀವು ಸುಮ್ಮನಿರಿ ನಾನೂ ಸುಮ್ಮನಿರುತ್ತೇನೆ ಎಂದು ಹೇಳಿದರೂ ಕೆಣಕುವ ಜನರನ್ನು ಖಡಕ್ಕಾಗಿ ಎದುರಿಸಿ. ಶುಭಸಂಖ್ಯೆ: 2

ಸಿಂಹ: ಮರಮಟ್ಟುಗಳ ವ್ಯಾಪಾರ, ಪೀಠೋಪಕರಣಗಳ ವ್ಯವಹಾರದ ಜನರಿಗೆ ಲಾಭಕ್ಕೆ ಹೊಸದಾದ ದಾರಿಯೊಂದು ಸಿಗಲಿದೆ. ಶುಭಸಂಖ್ಯೆ: 6

ಕನ್ಯಾ: ಬೆಣ್ಣೆಯಿಂದ ಕೂದಲು ತೆಗೆದಂತೆ ಮಾತನಾಡುವ ಜನರಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಅಧಿಕ. ಶುಭಸಂಖ್ಯೆ: 4

ತುಲಾ: ಕಂಟ್ರ್ಯಾಕ್ಟರ್ ಆಗಿ ತೊಡಗಿಸಿಕೊಂಡವರಾದರೆ ಬರಬೇಕಾದ ಹಣದ ಬಗೆಗೆ ಪ್ರಯತ್ನಿಸಿ. ಯಶಸ್ಸು ಸಾಧ್ಯವಾಗಲಿದೆ. ಶುಭಸಂಖ್ಯೆ: 1

ವೃಶ್ಚಿಕ: ಕೆಲವು ಬಿಕ್ಕಟ್ಟುಗಳನ್ನು ಎದುರಿಸಿ ಬಳಲಿಕೆ ನಿರ್ವಣವಾಗಲಿದೆ. ದುರ್ಗಾಸ್ತುತಿಯಿಂದ ಕಷ್ಟಗಳು ದೂರವಾಗಲಿವೆ. ಶುಭಸಂಖ್ಯೆ: 7

ಧನಸ್ಸು: ವಿವಾಹಾಪೇಕ್ಷಿಗಳಿಗೆ ಹಿರಿಯ ಸಂಬಂಧಿಗಳಿಂದ ಉತ್ತಮ ಸಹಾಯ ಲಭ್ಯವಾಗಲು ಅವಕಾಶ ಜಾಸ್ತಿ ಇದೆ. ಶುಭಸಂಖ್ಯೆ: 3

ಮಕರ: ಸಣ್ಣ ಮಾತುಗಳು ಅನೇಕ ಪ್ರತಿಭಾವಂತರಿಂದ ಸೂಕ್ತ ಪರಿಣಾಮ ನಿರ್ವಿುಸಿ ದೊಡ್ಡದನ್ನು ನಡೆಸಿಕೊಡುತ್ತವೆ. ಶುಭಸಂಖ್ಯೆ: 9

ಕುಂಭ: ಸಣ್ಣ ಮಾತುಗಳಿಗಾಗಿ ದೊಡ್ಡ ಜಗಳವಾದೀತು. ಅಲ್ಪರನ್ನು ದೂರ ಇಡಿ. ನೀವು ಕೂಡ ಅಲ್ಪರಾಗಲು ಬಯಸದಿರಿ. ಶುಭಸಂಖ್ಯೆ: 5

ಮೀನ: ಭ್ರಮೆಗಳನ್ನು ಇಟ್ಟುಕೊಳ್ಳದಿರಿ. ನಂಬಿಸಿ ಕೈಕೊಡುವಂತಹ ಜನ ಬಣ್ಣದ ಮಾತುಗಳಿಂದ ಕನಸುಗಳನ್ನು ಬಿತ್ತುತ್ತಾರೆ. ಶುಭಸಂಖ್ಯೆ: 2

Leave a Reply

Your email address will not be published. Required fields are marked *