ನಿತ್ಯಭವಿಷ್ಯ|17-05-2019

ಮೇಷ: ವಹಿವಾಟಿನ ಕಾರಣವಾದ ಪ್ರವಾಸದ ಬಗೆಗೆ ಯೋಚಿಸುವ ಸಂದರ್ಭ ಅನಿರೀಕ್ಷಿತವಾಗಿ ಬಂದುಬಿಡಬಹುದು. ಶುಭಸಂಖ್ಯೆ: 1

ವೃಷಭ: ಕೆಲವರು ಒತ್ತಡ ತರುವ ಮೂಲಕ ನಿಮ್ಮ ಒಪ್ಪಿಗೆ ಪಡೆಯಲು ಪ್ರಯತ್ನಿಸಬಹುದು. ದುಡುಕದಿರಿ. ಒಳಿತಿದೆ. ಶುಭಸಂಖ್ಯೆ: 5

ಮಿಥುನ: ಗೆಳೆಯರ ಸಹಾಯದಿಂದ ನಿಮ್ಮ ಅನೇಕ ರೀತಿಯ ಕೆಲಸಗಳು ಸರಳವಾದ ರೀತಿಯಲ್ಲಿ ಯಶಸ್ಸು ಪಡೆದು ಗೆಲ್ಲಲು ಸಾಧ್ಯ. ಶುಭಸಂಖ್ಯೆ: 9

ಕಟಕ: ಅನೇಕ ರೀತಿಯ ಉತ್ತಮ ಕೆಲಸಗಳಿಗಾಗಿ ನಿಮಗೆ ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆಗಳು ಸಿಗಲಿವೆ. ಶುಭಸಂಖ್ಯೆ: 4

ಸಿಂಹ: ನಿಮ್ಮನ್ನು ಅಪಹಾಸ್ಯ ಮಾಡಲು ಖಾತರಿಪಡಿಸಿಕೊಂಡಿರುವ ಜನರನ್ನು ಮಾತಿನ ಜಾಣ್ಮೆಯಿಂದ ದೂರಕ್ಕೆ ಕಳಿಸಿ. ಶುಭಸಂಖ್ಯೆ: 6

ಕನ್ಯಾ: ನಿಮ್ಮ ಮೂಲಕವೇ ಸಲಹೆ ಪಡೆಯಲು ಯಾರು ಸ್ಪಂದಿಸುತ್ತಾರೋ ಅವರ ಬಳಿ ಮಾತನಾಡಿ. ಗೌರವ, ಆದರ ಲಭ್ಯ. ಶುಭಸಂಖ್ಯೆ: 1

ತುಲಾ: ವಿನಾಕಾರಣವಾದ ಮಾತು ಸಂಸಾರದಲ್ಲಿ ಬೇಡ. ಮಾತು ಬಂದರೂ ಚಕಮಕಿ ಆಗುವುದನ್ನು ನಿಲ್ಲಿಸಿ. ಕ್ಷೇಮ. ಶುಭಸಂಖ್ಯೆ: 8

ವೃಶ್ಚಿಕ: ನೆರೆಹೊರೆಯವರ ಜತೆ ಒಳಿತಿನಿಂದಲೇ ಇರುವುದು ನಿಮಗೆ ಸೂಕ್ತವೆನಿಸಿದರೂ ಮೈಮೇಲೆ ಬಿದ್ದು ಮಾತನಾಡಿಸಲು ಹೋಗದಿರಿ. ಶುಭಸಂಖ್ಯೆ: 5

ಧನುಸ್ಸು: ಅನೇಕ ರೀತಿಯ ಯಶಸ್ಸನ್ನು ಪಡೆಯುವ ನಿಮ್ಮ ಬಯಕೆಗೆ ಕುಟುಂಬದ ಸದಸ್ಯರ ಮೂಲಕ ಸಿದ್ಧಿಯ ದಾರಿ ಸಿಗಲಿದೆ. ಶುಭಸಂಖ್ಯೆ: 9

ಮಕರ: ಹೊಸದೇ ಬಿಜಿನೆಸ್ ಶುರು ಮಾಡೋಣ ಎಂಬ ಮಹತ್ವಾಕಾಂಕ್ಷೆ ಇರಲಿ. ಆದರೆ ಸೂಕ್ತವಾದ ಯೋಜನೆ ರೂಪಿಸಿಕೊಳ್ಳಿ. ಶುಭಸಂಖ್ಯೆ: 3

ಕುಂಭ: ಸಂದರ್ಭ, ವೇಳೆ, ಇರುವ ಜನರನ್ನು ಗಮನಿಸದೆ ಕಠಿಣವಾಗಿ ಮಾತನಾಡಲು ಹೋಗದಿರಿ. ಜಾಗ್ರತೆ ಇರಲಿ. ಶುಭಸಂಖ್ಯೆ: 7

ಮೀನ: ಅನೇಕ ರೀತಿಯ ಜನರನ್ನು ನೀವು ಸಂಧಿಸುವುದರಿಂದ ವಿವಿಧ ರೂಪದ ಅನುಭವಗಳು ನಿಮಗೂ ಸಹಾಯಕ್ಕೆ ಬರಲಿವೆ. ಶುಭಸಂಖ್ಯೆ: 4

Leave a Reply

Your email address will not be published. Required fields are marked *