ನಿತ್ಯ ಭವಿಷ್ಯ| 14-03-2019

ಮೇಷ: ನಿಮಗೆ ನಿಶ್ಚಿತವಾದ ದಾರಿಗಳು ತಿಳಿದ ಹೊರತು ಅನವಶ್ಯಕವಾಗಿ ದೊಡ್ಡದಾದ ಯೋಜನೆಗಳನ್ನು ಹಾಕದಿರಿ. ಶುಭಸಂಖ್ಯೆ: 8

ವೃಷಭ: ಬಾಳಸಂಗಾತಿಯ ವಿಚಾರದಲ್ಲಿ ನಿಮ್ಮ ಮನೋಮಂಡಲದ ಬಿಗು ಸಡಿಲಾಗಲಿ. ಅಭಿವೃದ್ಧಿಗೆ ಅವಕಾಶ ಲಭ್ಯ. ಶುಭಸಂಖ್ಯೆ: 6

ಮಿಥುನ: ಪಕ್ಕದ, ನೆರೆಹೊರೆಯ ಜನ ಅರ್ಥವಿರದ ಚರ್ಚೆ, ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಜಾಗ್ರತೆಯಿಂದ ನಿವಾರಿಸಿಕೊಳ್ಳಿ. ಶುಭಸಂಖ್ಯೆ: 3

ಕರ್ಕಾಟಕ: ವಿವೇಚನೆ, ತರ್ಕ, ಹಿಂದುಮುಂದಿನ ವಿಚಾರ ತಿಳಿಯಬಲ್ಲವರಾದರೂ ಮುಂಗೋಪದಿಂದ ತೊಂದರೆ ಆದೀತು. ಶುಭಸಂಖ್ಯೆ: 7

ಸಿಂಹ: ವಿನಾಕಾರಣವಾಗಿ ನಿಮ್ಮನ್ನು ಆಕ್ಷೇಪಿಸಲು ಬರುವ ಜನರ ಬಗೆಗೆ ಎಚ್ಚರ ಇರಲಿ. ನಿಮ್ಮ ಮೌನವೇ ಸಂಜೀವಿನಿ. ಶುಭಸಂಖ್ಯೆ: 1

ಕನ್ಯಾ: ‘ಇಲ್ಲ, ಸಾಧ್ಯವಾಗದು’ ಎಂಬುದನ್ನು ಹೇಳಲು ಸಮರ್ಥರಾಗಿ. ಸಂಭಾವ್ಯವಾಗುವ ಧನನಾಶ ತಪ್ಪಲು ಸಾಧ್ಯ. ಶುಭಸಂಖ್ಯೆ: 8

ತುಲಾ: ಬುದ್ಧಿಬಲವನ್ನು, ಜ್ಞಾನವನ್ನು ಸಂವರ್ಧಿಸುವ ಮಾತೆ ಶ್ರೀ ಶಾರದಾದೇವಿಯ ಅನುಗ್ರಹ ಬೇಗ ನಿಮಗೆ ಸಿಗಲಿದೆ. ಶುಭಸಂಖ್ಯೆ: 4

ವೃಶ್ಚಿಕ: ಅನುಭವ ಇರದ ವಿಚಾರಗಳನ್ನು ಮನಸ್ಸಿನಲ್ಲಿ ಸಂಯೋಜಿಸಿಕೊಂಡು ವ್ಯರ್ಥವಾದ ತಲ್ಲಣಗಳಿಗೆ ಸಿಲುಕಿಕೊಳ್ಳದಿರಿ. ಶುಭಸಂಖ್ಯೆ: 2

ಧನಸ್ಸು: ಅತುಲವಾದ ಐಶ್ವರ್ಯ, ಇಷ್ಟಾರ್ಥಸಿದ್ಧಿ, ಕಾಮನೆಗಳನ್ನು ಸಾಧಿಸುವಿರಿ. ಶ್ರೇಯಸ್ಸಿನ ಹೆಜ್ಜೆಗಾಗಿ ಎಚ್ಚರಿಕೆಯಿಂದ ಮುಂದಾಗಿ. ಶುಭಸಂಖ್ಯೆ: 5

ಮಕರ: ಶ್ರೇಯಸ್ಸನ್ನು ಉಂಟುಮಾಡುವ ದುರ್ಗಾಮಾತೆಯನ್ನು ಸ್ತುತಿಸಿ. ಸಂಕಟಗಳಿಂದ ಬೇಗ ಹೊರಬರುತ್ತೀರಿ. ಶುಭಸಂಖ್ಯೆ: 3

ಕುಂಭ: ಬಗೆಹರಿಯದೆ ಕಗ್ಗಂಟಾಗಿ ಹೋಗಿರುವ ವ್ಯಾಜ್ಯಗಳು ದೂರವಾಗುವ ಬೆಳಕಿನ ದಾರಿ ಹಿರಿಯರಿಂದ ಲಭ್ಯ. ಶುಭಸಂಖ್ಯೆ: 9

ಮೀನ: ದುರದೃಷ್ಟವು ನಿಮ್ಮನ್ನು ಬೇಕಿರದ ಕೆಲಸಕ್ಕೆ ಕೈ ಹಾಕಿಸಿ ಅವಮಾನವನ್ನು ಸೃಷ್ಟಿಸುವ ಸಾಧ್ಯತೆಗಳು ಸದ್ಯ ಜಾಸ್ತಿ ಇವೆ. ಶುಭಸಂಖ್ಯೆ: 7