ನಿತ್ಯಭವಿಷ್ಯ|16-05-2019

ಮೇಷ: ನಿಮ್ಮ ಮೃದು ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುವ ಅಪಾಯ ಇರುತ್ತದೆ. ಜಾಣ್ಮೆ ಪ್ರದರ್ಶಿಸಿ. ಶುಭಸಂಖ್ಯೆ: 7

ವೃಷಭ: ನಿಮ್ಮನ್ನು ನೀವೇ ಅತಿಶಯವಾಗಿ ವಿಮರ್ಶೆಯನ್ನು ಮಾಡಿಕೊಂಡು ಕೀಳರಿಮೆ ಹೊಂದಲು ಹೋಗದಿರಿ. ಶುಭಸಂಖ್ಯೆ: 1

ಮಿಥುನ: ನಿಮಗಾಗಿಯೇ ಇರುವ ಕೆಲಸಗಳನ್ನು ಬಿಟ್ಟು ಇತರ ಕಡೆ ಗಮನ ಹರಿಸದಿದ್ದರೆ ಯಶಸ್ಸು ನಿಶ್ಚಿತವಾಗಿದೆ. ಶುಭಸಂಖ್ಯೆ: 6

ಕಟಕ: ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು ಎಂಬ ಮಾತು ನೆನಪಿರಲಿ. ಅಪಾಯ ಬರಲಾರದು. ಶುಭಸಂಖ್ಯೆ: 3

ಸಿಂಹ: ಇಡಬೇಕಾದ ಹೆಜ್ಜೆಯನ್ನು ಧೈರ್ಯದಿಂದ ಇಡಲು, ಅಡ್ಡಿ ಆತಂಕಗಳನ್ನು ಎದುರಿಸಲು ದುರ್ಗೆಯನ್ನು ಸ್ತುತಿಸಿ. ಶುಭಸಂಖ್ಯೆ: 9

ಕನ್ಯಾ: ಮನೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ಬಾಳಸಂಗಾತಿಯ ನೆರವಿನಿಂದ ಮುಖ್ಯವಾದ ಕೆಲಸಗಳಲ್ಲಿ ಗೆಲುವು. ಶುಭಸಂಖ್ಯೆ: 5

ತುಲಾ: ಅನೇಕ ರೀತಿಯ ಅಗ್ನಿಪರೀಕ್ಷೆಗಳಲ್ಲೂ ನೀವು ಗೆದ್ದು ಹೊರಬರಬಲ್ಲಿರಿ. ಗೆಳೆಯರು ಹಾಗೂ ಇತರರ ಪ್ರಶಂಸೆ. ಶುಭಸಂಖ್ಯೆ: 8

ವೃಶ್ಚಿಕ: ನಿಮ್ಮ ಬಳಿಗೆ ಸಮಯಸಾಧಕರು ಬೇಡವೆಂದಷ್ಟೂ ನುಸುಳಿಕೊಳ್ಳುತ್ತಾರೆ. ಚಾತುರ್ಯದಿಂದ ದೂರವಿಡಿ. ಶುಭಸಂಖ್ಯೆ: 2

ಧನುಸ್ಸು: ಧನಲಾಭದ ಬಗೆಗಿನ ನಿಮ್ಮ ಲೆಕ್ಕಾಚಾರ ತಪ್ಪಾಗಲು ಸಾಧ್ಯವಿಲ್ಲವಾದರೂ ಎಡವಟ್ಟುಗಳು ಸಂಭವಿಸದಂತೆ ಎಚ್ಚರ. ಶುಭಸಂಖ್ಯೆ: 4

ಮಕರ: ಅನಿರೀಕ್ಷಿತವಾಗಿ ವಿದೇಶಪ್ರವಾಸ ಗಂಟು ಬೀಳಬಹುದು. ಆದರೆ ಹಿಂಜರಿಕೆ ಹೊಂದುವುದು ಬೇಡ. ಮುನ್ನುಗ್ಗಿ. ಶುಭಸಂಖ್ಯೆ: 9

ಕುಂಭ: ಬಿರುಗಾಳಿಯೇ ಬೀಸಲಿ, ಬೆಂಕಿಯ ಮಳೆ ಬೀಳಲಿ, ಇಷ್ಟದೇವರ ಅನುಗ್ರಹದಿಂದ ರಕ್ಷಣೆಗೆ ದಾರಿ ಇದೆ. ಶುಭಸಂಖ್ಯೆ: 7

ಮೀನ: ವೃಥಾ ಜಗಳವನ್ನು ತಂದಿಡುವ ನರಿಸ್ವಭಾವದ ತೋರಿಕೆಯ ಗೆಳೆಯರಿಂದ ಅಪಾಯ ಇದೆ. ಎಚ್ಚರ ವಹಿಸಿ. ಶುಭಸಂಖ್ಯೆ: 1