ನಿತ್ಯಭವಿಷ್ಯ| ಈ ರಾಶಿಯವರಿಗೆ ಬಾಳಸಂಗಾತಿಯ ಬೆಂಬಲದಿಂದ ಒಳಿತಾಗಲಿದೆ

ಮೇಷ: ನಿಮ್ಮದೇ ಆದ ವೈಯಕ್ತಿಕ ಬದುಕನ್ನು ಹೊಸದೇ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿಸಿಕೊಂಡರೆ ವಿಶಿಷ್ಟ ಸಿದ್ಧಿ ಇದೆ. ಶುಭಸಂಖ್ಯೆ: 7

ವೃಷಭ: ಸ್ವಲ್ಪ ಮಟ್ಟಿಗಿನ ಶ್ರಮ ಮತ್ತು ಬಿಕ್ಕಟ್ಟುಗಳು ಎದುರಾದರೂ ಅಚಲ ನಿರ್ಧಾರಗಳು ಗುರಿಯನ್ನು ತಲುಪಿಸುತ್ತವೆ. ಶುಭಸಂಖ್ಯೆ: 3

ಮಿಥುನ: ದಾರಿಗೆ ಅಡ್ಡವಾಗಿ ಕೆಲವು ಅಡೆತಡೆಗಳು ಬಂದರೂ ಮನಸ್ಸಿಗೆ ಹೆಚ್ಚಿನದಾದ ಕಿರಿಕಿರಿ ಎದುರಾಗಲು ಸಾಧ್ಯ. ಶುಭಸಂಖ್ಯೆ: 9

ಕಟಕ: ಚಂದ್ರಗ್ರಹದ ಸಿದ್ಧಿಯ ಸತ್ವವು ಬಲಯುತವಾದುದರಿಂದ ಚೇತನಯುಕ್ತ ಸ್ವಂತ ಸಾತ್ವಿಕಶಕ್ತಿಗೆ ದಾರಿ ಲಭ್ಯ. ಶುಭಸಂಖ್ಯೆ: 4

ಸಿಂಹ: ದುರ್ಗಾ ಮತ್ತು ಮಾರುತಿಯ ಆರಾಧನೆಯ ಫಲವಾಗಿ ನಿರೀಕ್ಷಿಸಿದ ಫಲವನ್ನು ಬೇಗನೆ ಸಂಪಾದಿಸುತ್ತೀರಿ. ಶುಭಸಂಖ್ಯೆ: 8

ಕನ್ಯಾ: ವೃಥಾ ಸುಮ್ಮನೆ ಅವಸರ ಮಾಡದೆ ಕೆಲಸದಲ್ಲಿ ಆಸ್ಥೆ ತೋರಿ. ಒಳ್ಳೆಯ ಭವಿಷ್ಯಕ್ಕೆ ಸಮಾಧಾನದ ಮನಸ್ಸಿರಲಿ. ಶುಭಸಂಖ್ಯೆ: 6

ತುಲಾ: ಜನಸಮೂಹದ ಜೊತೆಗಿನ ವೈಯಕ್ತಿಕ ಸಂಪರ್ಕದ ಚಾತುರ್ಯದಿಂದ ಹೊಸ ಜವಾಬ್ದಾರಿಗೆ ದಾರಿ ಸಿಗಲಿದೆ. ಶುಭಸಂಖ್ಯೆ: 2

ವೃಶ್ಚಿಕ: ಬಾಕಿ ಇರುವ ಕೆಲಸಗಳ ಯಾದಿಯನ್ನು ಸೂಕ್ತವಾಗಿ ಮಾಡಿ ಮುಗಿಸಲು ಬಾಳಸಂಗಾತಿಯ ಬೆಂಬಲ ಲಭ್ಯ. ಶುಭಸಂಖ್ಯೆ: 5

ಧನುಸ್ಸು: ವೆಂಕಟೇಶ್ವರನನ್ನು, ಭೂವರಾಹಸ್ವಾಮಿಯನ್ನು ಸ್ತುತಿಸಿ. ಮನೆಯ ಸಂಬಂಧದ ವಿಚಾರ ನಿರಾಳವಾಗಲಿದೆ. ಶುಭಸಂಖ್ಯೆ: 1

ಮಕರ: ನಿಮಗೆ ಪೂರ್ವಪುಣ್ಯ ಸ್ಥಾನಬಲದ ವಿಶೇಷದಿಂದಾಗಿ ಮಕ್ಕಳಿಂದ ಒಳಿತಿನ ಸುದ್ದಿಯೊಂದು ದೊರೆಯಲಿದೆ. ಶುಭಸಂಖ್ಯೆ: 7

ಕುಂಭ: ಕೆಲವು ಜನರು ನಿಮಗೆ ಹಲವು ರೀತಿಯ ಬಿಕ್ಕಟ್ಟುಗಳನ್ನು ಸೃಷ್ಟಿಸಲು ಸಾಧ್ಯ. ತಾಳ್ಮೆಯೇ ನಿಮಗೆ ಸಂಜೀವಿನಿ. ಶುಭಸಂಖ್ಯೆ: 9

ಮೀನ: ಗೆಳೆಯರ ಸಂಪೂರ್ಣ ಬೆಂಬಲ, ಒಳ್ಳೆಯ ಸಲಹೆಗಳ ಕಾರಣದಿಂದ ಬಹು ದೊಡ್ಡ ಸಮಸ್ಯೆಗೆ ಪರಿಹಾರ ಸಾಧ್ಯ. ಶುಭಸಂಖ್ಯೆ: 4

Leave a Reply

Your email address will not be published. Required fields are marked *