ನಿತ್ಯಭವಿಷ್ಯ|13-07-2019

ಮೇಷ: ನಿಮ್ಮ ಶಕ್ತಿ ಮತ್ತು ಪ್ರತಿಭೆಗಳನ್ನು ಕುಗ್ಗಿಸುವಂತಹ ದುಷ್ಟ ಜನರನ್ನು ಉಪಾಯದಿಂದಲೇ ನಿಗ್ರಹಿಸಿ. ಶುಭಸಂಖ್ಯೆ: 6

ವೃಷಭ: ನ್ಯಾಯವಾಗಿ ಬರಬೇಕಾದ ನಿಮ್ಮ ಪಾಲಿನ ಕುರಿತು ವಿವಾದಗಳನ್ನು ಹುಟ್ಟಿಸುವ ಜನರಿಂದ ದೂರ ಇರಿ. ಶುಭಸಂಖ್ಯೆ: 8

ಮಿಥುನ: ರಕ್ಷಕಿಯಾದ ಜ್ಞಾನಸಂವೇದಿನಿ ಶ್ರೀ ಶಾರದಾಳನ್ನು ಆರಾಧಿಸಿ. ರಕ್ಷಣೆಗಾಗಿನ ದಾರಿಯೊಂದು ಸಿಗಲಿದೆ. ಶುಭಸಂಖ್ಯೆ: 7

ಕಟಕ: ಚಿನ್ನದ ಕೊಪ್ಪರಿಗೆಯನ್ನೇ ಕೈವಶ ಮಾಡಿಕೊಡುತ್ತೇವೆ ಎಂದು ಆಸೆ ಹುಟ್ಟಿಸುವ ಜನರ ಬಗ್ಗೆ ಎಚ್ಚರ ಇರಲಿ. ಶುಭಸಂಖ್ಯೆ: 2

ಸಿಂಹ: ಮಹತ್ವದ ಕಡತಗಳು, ಹಳೆಯ ಕಾಲದ ದಸ್ತಾವೇಜು, ಸರ್ಟಿಫಿಕೆಟ್​ಗಳ ಬಗ್ಗೆ ಅಲಕ್ಷ್ಯ ಮಾಡುವುದು ಬೇಡ. ಶುಭಸಂಖ್ಯೆ: 4

ಕನ್ಯಾ: ತೊಂದರೆಗಳೇ ಇರದೆ ಸಂಕಲ್ಪಿತ ಕಾರ್ಯಗಳಲ್ಲಿ ಗೆಲ್ಲುತ್ತೀರಿ. ಆದರೆ ಆಡುವ ಮಾತಿನಲ್ಲಿ ಮಾತ್ರ ತೂಕವಿರಲಿ. ಶುಭಸಂಖ್ಯೆ: 1

ತುಲಾ: ಧೈರ್ಯ, ಸಾಹಸಗಳು ಇಂದಿನ ಆವಶ್ಯಕತೆಯಾಗಿದೆ. ಸಾಗುವುದು ನ್ಯಾಯದ ದಾರಿಯೇ ಆಗಿರಲಿ. ಒಳಿತಿದೆ. ಶುಭಸಂಖ್ಯೆ: 3

ವೃಶ್ಚಿಕ: ಶ್ರಮವೇ ಇರದೆ ಹಣ ಗಳಿಸುವ ಮಾರ್ಗದ ವಿಚಾರದಲ್ಲಿ ಬಿಕ್ಕಟ್ಟುಗಳು ಎದುರಾಗಬಹುದು. ಎಚ್ಚರ ಇರಲಿ. ಶುಭಸಂಖ್ಯೆ: 9

ಧನುಸ್ಸು: ಸನ್ಮಂಗಳಕಾರಕನಾದ ಶ್ರೀ ವಿದ್ಯಾಗಣಪತಿಯ ಆರಾಧನೆಯಿಂದ ದಾಂಪತ್ಯಕ್ಕೆ ಹೆಚ್ಚಿನ ದಾರ್ಢ್ಯತೆ ಸಿಗಲಿದೆ. ಶುಭಸಂಖ್ಯೆ: 6

ಮಕರ: ವಿನಾಕಾರಣವಾದ ವ್ಯಾಜ್ಯದಲ್ಲಿ ಸಿಕ್ಕಿಬೀಳದ ಹಾಗೆ ಚಾತುರ್ಯವನ್ನು ಪ್ರದರ್ಶಿಸಿ. ಆದರೆ ತಾಳ್ಮೆ ಇರಲಿ. ಶುಭಸಂಖ್ಯೆ: 1

ಕುಂಭ: ದೂರದ ಊರಿನ ಕಡೆಗಿನ ಪ್ರವಾಸವನ್ನು ಕೈಬಿಡದಿರಿ. ಆರೋಗ್ಯದ ಕುರಿತು ಎಚ್ಚರ ವಹಿಸುವುದು ಲೇಸು. ಶುಭಸಂಖ್ಯೆ: 5

ಮೀನ: ನಾನು ಕಂಡ ಮೊಲಕ್ಕೆ ಮೂರೇ ಕಾಲು ಎಂಬ ವಿಚಾರವನ್ನು ಕೈಬಿಡಿ. ವರ್ಚಸ್ಸಿನ ಬಗೆಗೆ ಎಚ್ಚರ ಇದ್ದೇ ಇರಲಿ. ಶುಭಸಂಖ್ಯೆ: 2

Leave a Reply

Your email address will not be published. Required fields are marked *