ನಿತ್ಯಭವಿಷ್ಯ|14-07-2019

ಮೇಷ: ನಿಮ್ಮ ಪಾಲಿಗೆ ಧೈರ್ಯ ಒದಗಿಸುವ ಗೆಳೆಯರಿಂದ ಕಾರ್ಯ ವಿಧಾನಗಳ ಎಲ್ಲಾ ಯಶಸ್ಸಿಗೆ ಬೆಂಬಲ ಇದೆ. ಶುಭಸಂಖ್ಯೆ: 3

ವೃಷಭ: ಯಾವುದೇ ಬಗೆಯ ನಿರ್ಧಾರಗಳನ್ನೂ ಸರ್ರನೆ ಕೈಗೊಳ್ಳದಿರಿ. ತಾಂತ್ರಿಕ ತೊಂದರೆಗಳಿಂದ ಹಿನ್ನಡೆ ಆದೀತು. ಶುಭಸಂಖ್ಯೆ: 6

ಮಿಥುನ: ನಿಮಗೆ ಬರಬೇಕಾದ ಧನಪ್ರಾಪ್ತಿಯ ವಿಷಯದಲ್ಲಿ ಹೊಸ ಬೆಳಕೊಂದು ಗೋಚರಿಸಲಿದೆ. ಚಿಂತೆ ಬೇಡ. ಶುಭಸಂಖ್ಯೆ: 9

ಕಟಕ: ಯಾತಕ್ಕೋ ಆರ್ಥಿಕ ವಿಚಾರಗಳಲ್ಲಿ ಹಿನ್ನೆಡೆ ಬರುತ್ತಿದೆ ಎಂಬ ನಿಮ್ಮ ವ್ಯಾಕುಲತೆಗೆ ತಡೆ ಬರಲು ಸಾಧ್ಯ. ಶುಭಸಂಖ್ಯೆ: 2

ಸಿಂಹ: ನಿಮ್ಮ ವಿಷಯದಲ್ಲಿನ ನ್ಯಾಯಯುತ ಎನಿಸಿದಂತಹ ಬೇಡಿಕೆಗಳನ್ನು ಧೂರ್ತರು ನಿರಾಕರಿಸಲು ಸಾಧ್ಯವಿದೆ. ಶುಭಸಂಖ್ಯೆ: 7

ಕನ್ಯಾ: ವಿದೇಶದಲ್ಲಿ ಮಕ್ಕಳ ಓದಿದಾಗಿನ ವಿಚಾರದಲ್ಲಿ ವಿನೂತನವಾದ ಬೆಳವಣಿಗೆಗಳಿಗೆ ಹೆಚ್ಚಿನ ಅವಕಾಶವಿದೆ. ಶುಭಸಂಖ್ಯೆ: 5

ತುಲಾ: ತೂಗಾಡುತ್ತಿರುವ ವಿಷಯಗಳು ನಾಟಕೀಯವಾದ ರೀತಿಯಲ್ಲಿ ಸರಿಹೋಗುವ ವಿಚಾರ ಅಧಿಕವಾಗಿದೆ. ಶುಭಸಂಖ್ಯೆ: 4

ವೃಶ್ಚಿಕ: ತಪ್ಪು ಮಾಡುವುದು ಮನುಷ್ಯನ ಗುಣವಾದರೂ ಮತ್ತೆ ಅದೇ ಅದೇ ತಪ್ಪು ಮಾಡಲು ಹೋಗದಿರಿ. ಎಚ್ಚರ. ಶುಭಸಂಖ್ಯೆ: 6

ಧನುಸ್ಸು: ವ್ಯಾಪಾರ ವಹಿವಾಟಿನಲ್ಲಿ ನಿಮ್ಮ ನಿರೀಕ್ಷೆಗಳನ್ನು ಮೀರಿ ಹೊಸದೇ ಹರ್ಷದ ವಿಚಾರ ರೂಪುಗೊಳ್ಳಲು ಸಾಧ್ಯ. ಶುಭಸಂಖ್ಯೆ: 1

ಮಕರ: ತಾಯಿ ಶ್ರೀ ಕಾಳಿಕಾದೇವಿಯ ಸ್ತುತಿಯಿಂದ ಒದಗಿಬರಬೇಕಾದ ಅನುಕೂಲಗಳನ್ನು ಪಡೆದುಕೊಳ್ಳಿ. ಶುಭಸಂಖ್ಯೆ: 5

ಕುಂಭ: ನಿಮ್ಮವರೇ ನಿಮಗೆ ಕೆಲವು ರೀತಿಯ ಅಡೆತಡೆಗಳನ್ನು ತರಲು ಸಾಧ್ಯ. ಎಚ್ಚರಿಕೆಯ ಹೆಜ್ಜೆ ಇಡಬೇಕು. ಜಾಗ್ರತೆ. ಶುಭಸಂಖ್ಯೆ: 3

ಮೀನ: ಮಂಗಳಕಾರಕನಾದ ಪ್ರಭು ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಕೈಗೊಂಡ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಬಲ್ಲಿರಿ. ಶುಭಸಂಖ್ಯೆ: 8

Leave a Reply

Your email address will not be published. Required fields are marked *