More

    ನಿತ್ಯ ಭವಿಷ್ಯ| ಈ ರಾಶಿಯವರಿಗೆ ತಿಳಿಸದೆಯೇ ಬರುವ ಅತಿಥಿಗಳಿಂದ ಮುಜುಗರದ ಸಂದರ್ಭಗಳು ಎದುರಾಗುವ ಸಾಧ್ಯತೆ

    ಮೇಷ: ನಿಮ್ಮ ವಿಚಾರದಲ್ಲಿ ಖಂಡಿತವಾಗಿಯೂ ಆತ್ಮವಿಮರ್ಶೆಯನ್ನು ಮಾಡಿಕೊಳ್ಳಿ. ಆದರೆ ಒಂದು ಮಿತಿ ಇರಲಿ. ಶುಭಸಂಖ್ಯೆ: 4

    ವೃಷಭ: ತಿಳಿಸದೆಯೇ ಬರುವ ಅತಿಥಿಗಳಿಂದ ಮುಜುಗರದ ಸಂದರ್ಭಗಳು ಎದುರಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 2

    ಮಿಥುನ: ಜಗದಂಬಿಕೆ ಚಾಮುಂಡೇಶ್ವರಿಯನ್ನು ಶ್ರದ್ಧೆಯಿಂದ ಸ್ತುತಿಸಿಯೇ ವಿರೋಧಿಗಳನ್ನು ನಿಯಂತ್ರಿಸಿ. ಒಳಿತಿದೆ. ಶುಭಸಂಖ್ಯೆ: 7

    ಕಟಕ: ಪಿತೃಸಂಬಂಧವಾದ ಆಸ್ತಿಯ ವಿಚಾರದಲ್ಲಿ ಸಜ್ಜನರಿಂದ ಅನುಕೂಲ ಒದಗುವ ಸಾಧ್ಯತೆಗಳು ಜಾಸ್ತಿ ಇವೆ. ಶುಭಸಂಖ್ಯೆ: 5

    ಸಿಂಹ: ವಿಶೇಷವಾದ ಸ್ಥಾನಮಾನ ದೊರಕುವ ವಿಚಾರದಲ್ಲಿ ಹಲವರು ನಿಮಗೆ ನೆರವಾಗುವ ಸಾಧ್ಯತೆಗಳು ಸ್ಪಷ್ಟ. ಶುಭಸಂಖ್ಯೆ: 2

    ಕನ್ಯಾ: ಯೋಜನೆಯನ್ನು ರೂಪಿಸಿದ ಮೇಲೆ ಯಶಸ್ಸು ಶತಸಿದ್ಧ ಎಂಬ ಅತಿಯಾದ ಆತ್ಮವಿಶ್ವಾಸ ಬಿಟ್ಟರೆ ಕ್ಷೇಮ. ಶುಭಸಂಖ್ಯೆ: 8

    ತುಲಾ: ಜಲದುರ್ಗೆಯನ್ನು ಸ್ತುತಿಸುವುದರ ಮೂಲಕ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಫಲತೆ ಸಿಗಲು ಸಾಧ್ಯವಿದೆ. ಶುಭಸಂಖ್ಯೆ: 1

    ವೃಶ್ಚಿಕ: ವಿದೇಶದಲ್ಲಿರುವ ಬಂಧುಗಳ ಜತೆಗಿನ ಆಸ್ತಿಯ ವಿವಾದವು ಶಾಂತ ರೀತಿಯಲ್ಲಿ ಪರಿಸಮಾಪ್ತಿ ಆಗಲಿದೆ. ಶುಭಸಂಖ್ಯೆ: 5

    ಧನಸ್ಸು: ಹಳೆಯ ಸ್ನೇಹಿತರೊಬ್ಬರ ಮೂಲಕ ಸಾಲದ ವಿಚಾರದ ಬಿಕ್ಕಟ್ಟೊಂದು ಸರಳವಾಗಿ ಪರಿಹಾರ ಕಾಣಲಿದೆ. ಶುಭಸಂಖ್ಯೆ: 9

    ಮಕರ: ಬೆಟ್ಟದಷ್ಟು ದುಗುಡ ದುಮ್ಮಾನ ಕಷ್ಟಗಳಿದ್ದರೂ ಕ್ರಿಯಾಶೀಲತೆಯಿಂದ ಮುನ್ನುಗ್ಗಿ. ನಿಮಗೇ ಜಯ ಸಿಗಲಿದೆ. ಶುಭಸಂಖ್ಯೆ: 3

    ಕುಂಭ: ವಿಶೇಷವಾಗಿ ನಿಮ್ಮ ವಹಿವಾಟಿನ ಚೌಕಟ್ಟುಗಳು ಇನ್ನಷ್ಟು ವಿಸ್ತಾರಗೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ. ಶುಭಸಂಖ್ಯೆ: 6

    ಮೀನ: ಮನಸ್ಸು ಇರದಿದ್ದರೂ ಸಣ್ಣ ಪ್ರಮಾಣದ ಪ್ರವಾಸ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಮಾಡಬೇಕಾಗಬಹುದು. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts