ನಿತ್ಯ ಭವಿಷ್ಯ|ಈ ರಾಶಿಯವರಿಗೆ ಇಂದು ಜಟಿಲ ಸಮಸ್ಯೆಗಳ ಜತೆ ಹೋಗುತ್ತಿದ್ದೇನೆಂಬ ಭಯ ಬೇಡ

ಮೇಷ: ನಿಮ್ಮ ಕಾರ್ಯಸಿದ್ಧಿಗಾಗಿ ಚಂದ್ರಪೀಡಾ ನಿವಾರಣಾ ಸ್ತೋತ್ರ ಓದಿ. ಅನೇಕ ವಿಚಾರಗಳಲ್ಲಿ ಯಶಸ್ಸು ಪಡೆಯುವಿರಿ. ಶುಭಸಂಖ್ಯೆ: 1

ವೃಷಭ: ನಿಮ್ಮ ಯೋಜನೆಗಳಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಇದು ಸೂಕ್ತ ಕಾಲ. ಬುಧ ಸಿದ್ಧಿ ಇದೆ. ಶುಭಸಂಖ್ಯೆ: 8

ಮಿಥುನ: ಅಲೌಕಿಕ ಶಾಸ್ತ್ರಸಂಪ್ರದಾಯದಿಂದ ಹೆಚ್ಚಿನ ಜ್ಞಾನ ಗಳಿಸುವಿರಿ. ಶ್ರೀದೇವಿ ಖಡ್ಗಮಾಲಿನಿ ಆರಾಧನೆಯಿಂದ ಶ್ರೀರಕ್ಷೆ. ಶುಭಸಂಖ್ಯೆ: 5

ಕಟಕ: ಜಟಿಲ ಸಮಸ್ಯೆಗಳ ಜತೆ ಹೋಗುತ್ತಿದ್ದೇನೆಂಬ ಭಯ ಬೇಡ. ನಿಮ್ಮ ಮನೋಬಲ ನಿಮಗೆ ಸಂಜೀವಿನಿ ಆಗಲಿದೆ. ಶುಭಸಂಖ್ಯೆ: 3

ಸಿಂಹ: ಬಂಡವಾಳದೊಂದಿಗೆ ವ್ಯಾಪಾರವೆಂಬ ಸಿದ್ಧಮಾದರಿಯಲ್ಲೇ ಮುಂದೆ ಸಾಗದಿರಿ. ನಿಮ್ಮ ಮಾತು ಲಾಭ ತರಲಿದೆ. ಶುಭಸಂಖ್ಯೆ: 6

ಕನ್ಯಾ: ಶ್ರೀ ಸಿದ್ಧಿವಿನಾಯಕನ ಆರಾಧನೆಯಿಂದ ಕೈಗೊಂಡ ಕಾರ್ಯಗಳಲ್ಲಿ ಸಿದ್ಧಿ ಇದೆ. ಉಳಿತಾಯಕ್ಕೆ ಮಾರ್ಗಗಳು ಅನೇಕ. ಶುಭಸಂಖ್ಯೆ: 4

ತುಲಾ: ನಿಮ್ಮ ವಿಚಾರದಲ್ಲಿ ಅನೇಕರು ಸಹಾಯ ಸಲ್ಲಿಸಲು ಸಿದ್ಧರಿದ್ದಾರೆ. ಎಲ್ಲರೊಡನೆಯ ಸ್ನೇಹದಿಂದ ಪ್ರಗತಿಗೆ ದಾರಿ. ಶುಭಸಂಖ್ಯೆ: 7

ವೃಶ್ಚಿಕ: ವಿದೇಶದಲ್ಲಿ ಹೆಚ್ಚಿನ ಓದಿಗೆ ತಳೆದ ಕಾರ್ಯವಿಧಾನಗಳು ಫಲ ಕೊಡುವ ನಿರೀಕ್ಷೆ ಇದೆ. ಹಣಕಾಸಿನ ವ್ಯವಸ್ಥೆ ಲಭ್ಯ. ಶುಭಸಂಖ್ಯೆ: 2

ಧನಸ್ಸು: ತಿಂಗಳು ಪೂರ್ತಿ ಅನಾರೋಗ್ಯದಲ್ಲಿ ಕಳೆದಿದ್ದರೂ ಉತ್ತಮ ವೈದ್ಯರು ಇಂದು ನಿಮಗೆ ಒಳ್ಳೆಯ ಚಿಕಿತ್ಸೆ ಕೊಡಲಿದ್ದಾರೆ. ಶುಭಸಂಖ್ಯೆ: 9

ಮಕರ: ಪ್ರವಾಸಗಳ ಕುರಿತು ಕಾರ್ಯಕ್ರಮ ಸೂಚಿಗಳನ್ನು ಸೂಕ್ತವಾಗಿ ನಿರ್ವಿುಸಿಕೊಳ್ಳಿ. ಸಂಗಾತಿಯೊಡನೆ ಚರ್ಚೆ ಮಾಡುವುದು ಸೂಕ್ತ. ಶುಭಸಂಖ್ಯೆ: 1

ಕುಂಭ: ಇಂಜಿನಿಯರ್ಸ್, ವಸ್ತ್ರವಿನ್ಯಾಸಕರಿಗೆ ಯಶಸ್ಸಿಗೆ ದಾರಿ ಇದೆ. ಕುಕ್ಕುಟೋದ್ಯಮ ಹಾಗೂ ಕೃಷಿಕರಿಗೆ ಹಿನ್ನಡೆ ಉಂಟಾದೀತು. ಶುಭಸಂಖ್ಯೆ: 3

ಮೀನ: ಸೋದರರ ನಡುವೆ ಮನಸ್ತಾಪಗಳಿಗೆ ವಿರಾಮಕ್ಕೆ ದಾರಿ. ಹಿರಿಯರೊಬ್ಬರಿಂದ ಅನೇಕ ರೀತಿಯ ಸಹಾಯ ಲಭ್ಯ. ಶುಭಸಂಖ್ಯೆ: 6

Leave a Reply

Your email address will not be published. Required fields are marked *