ನಿತ್ಯಭವಿಷ್ಯ|12-07-2019

ಮೇಷ: ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಕೆಲವು ಗಮನಾರ್ಹವಾದ ಉತ್ತಮ ಬೆಳವಣಿಗೆಗಳಿಗೆ ಸಾಧ್ಯತೆಗಳು ಜಾಸ್ತಿ. ಶುಭಸಂಖ್ಯೆ: 8

ವೃಷಭ: ಹಲವು ವಿರೋಧಾಭಾಸಗಳಿಗೆ ಕಾರಣವಾಗುವಂತಹ ಮಾತುಗಳಿಂದ ಹಿನ್ನಡೆ ಉಂಟಾಗಲು ಸಾಧ್ಯ. ಶುಭಸಂಖ್ಯೆ: 6

ಮಿಥುನ: ವಿಪರೀತವಾಗಿ, ವಿಚಿತ್ರವಾಗಿ ವರ್ತಿಸಬೇಡಿ. ನೀವು ಸೋಲುವ ಮೂಲಕವೇ ಸಂಗಾತಿಯನ್ನು ಗೆಲ್ಲಬೇಕು. ಶುಭಸಂಖ್ಯೆ: 7

ಕಟಕ: ಅನ್ಯರು ಅನಿರೀಕ್ಷಿತವಾಗಿ ಆಡುವಂತಹ ಮಾತುಗಳು ನಿಮ್ಮನ್ನು ನೋವಿಗೆ ತಳ್ಳುವ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ: 2

ಸಿಂಹ: ಕುಲದೇವರನ್ನು ಭಕ್ತಿಪೂರ್ವಕವಾಗಿ ಧ್ಯಾನಿಸುವುದರಿಂದಾಗಿ ಅಪರೂಪದ ಸಾಧನೆಗಳಿಗೆ ಅನುಗ್ರಹ ಲಭ್ಯ. ಶುಭಸಂಖ್ಯೆ: 9

ಕನ್ಯಾ: ಕೆಲವು ವಿಷಯಗಳಲ್ಲಿ ಏನು ಕೂಡ ತಿಳಿಯದವರಂತೆ ಇದ್ದು ಮಕ್ಕಳ ಚಲನವಲನ ಗಮನಿಸಿದರೆ ಒಳಿತು. ಶುಭಸಂಖ್ಯೆ: 5

ತುಲಾ: ಅನ್ಯರ ಹಸ್ತಕ್ಷೇಪಗಳು ಜಾಸ್ತಿ ಆದಲ್ಲಿ ಕಾಯ್ದೆ ಕಾನೂನುಗಳ ಮೊರೆ ಹೋಗಿ. ಅದರಿಂದ ನಿಮಗೆ ಸಿದ್ಧಿ ಇದೆ. ಶುಭಸಂಖ್ಯೆ: 2

ವೃಶ್ಚಿಕ: ಆಳುಗಳು ನಾಗರಹಾವಿನಂತೆ ಬುಸುಗುಡುವ ಸಾಧ್ಯತೆಗಳು ಜಾಸ್ತಿ. ಜಾಣ್ಮೆಯಿಂದ ಅವರನ್ನು ನಿಯಂತ್ರಿಸಿ. ಶುಭಸಂಖ್ಯೆ: 5

ಧನುಸ್ಸು: ಸಿಟ್ಟಿನಿಂದಾಗಿ ವ್ಯಕ್ತಿತ್ವದ ಸಮರ್ಥನೆ, ವರ್ಚಸ್ಸುಗಳಿಗಾಗಿನ ಪ್ರಯತ್ನಗಳು ತೊಂದರೆಗೆ ಸಿಲುಕಬಹುದು. ಎಚ್ಚರ. ಶುಭಸಂಖ್ಯೆ: 1

ಮಕರ: ನಿಮ್ಮನ್ನು ಒಪ್ಪಿಕೊಂಡು ಆದರಿಸುವಂತಹ ಜನರು ತುಂಬ ಇರುವುದನ್ನು ಕಂಡು ಮನಸ್ಸಿಗೆ ಹರ್ಷವಿದೆ. ಶುಭಸಂಖ್ಯೆ: 8

ಕುಂಭ: ಕೆಲಸದ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಮ್ಮ ನೆಮ್ಮದಿಯನ್ನು ಕೆಡಿಸುವಂತಹ ಸಾಧ್ಯತೆಗಳು ಅಧಿಕ. ತಾಳ್ಮೆಯೇ ಉತ್ತಮ. ಶುಭಸಂಖ್ಯೆ: 4

ಮೀನ: ನಿಮ್ಮ ಶಕ್ತಿಯ ದಾರ್ಢ್ಯತೆಗೆ ನಿಲುಕದ ವಿಚಾರಗಳಿಲ್ಲ. ಆದರೂ ಪರದಾಟಗಳಿಂದ ನೆಮ್ಮದಿಗೆ ಭಂಗ ಬಂದೀತು. ಶುಭಸಂಖ್ಯೆ: 2

Leave a Reply

Your email address will not be published. Required fields are marked *