ನಿತ್ಯಭವಿಷ್ಯ|11-07-2019

ಮೇಷ: ನಿಮಗೀಗ ಕೆಲಸದ ಸ್ಥಳದಲ್ಲಿ ಧೈರ್ಯಕ್ಕೆ ತೊಂದರೆ ಬರುವಂತಹ ಬೆಳವಣಿಗೆಗಳು ಆಗಲು ಸಾಧ್ಯ. ಶುಭಸಂಖ್ಯೆ: 3

ವೃಷಭ: ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಯೋಗ್ಯರಾದ ಹಿರಿಯ ರೊಬ್ಬರು ನಿಮಗೆ ಲಭ್ಯ. ಶುಭಸಂಖ್ಯೆ: 8

ಮಿಥುನ: ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದಂತೆ ಹೆಚ್ಚಿನ ನಿಗಾ ವಹಿಸಿ. ಎಚ್ಚರ ಅಗತ್ಯವಾಗಿದೆ. ಶುಭಸಂಖ್ಯೆ: 6

ಕಟಕ: ನಿಮ್ಮ ಮನಸ್ಸಿನಾಳದ ನಿರ್ದಿಷ್ಟ ಇಚ್ಛೆಯೊಂದು ಸಾಕಾರಗೊಳ್ಳಲು ಇಂದು ಸದವಕಾಶ ಬರಲಿದೆ. ಶುಭಸಂಖ್ಯೆ: 4

ಸಿಂಹ: ನಿಮ್ಮ ಚಟುವಟಿಕೆಗಳನ್ನು ತುಂಬ ಜನ ಗಮನಿಸುತ್ತಿರುವುದು ತಿಳಿದಿರಲಿ. ನಿಮ್ಮ ನಡೆ ಸರಿಯಾಗಿರಲಿ. ಶುಭಸಂಖ್ಯೆ: 1

ಕನ್ಯಾ: ಓಡಾಡುವ ಸಂದರ್ಭದಲ್ಲಿ ತುಸು ಮುಂಜಾಗ್ರತೆ ವಹಿಸಿ. ಜಾರಿ ಬೀಳುವ ಸಾಧ್ಯತೆಗಳು ಜಾಸ್ತಿ ಇವೆ. ಶುಭಸಂಖ್ಯೆ: 8

ತುಲಾ: ಕಾಲಭೈರವನನ್ನು ಭಕ್ತಿಭಾವಗಳಿಂದ ಆರಾಧನೆ ಮಾಡಿ. ಧೈರ್ಯದಿಂದ ಕೆಲಸವನ್ನು ಸಾಧಿಸುವಿರಿ. ಶುಭಸಂಖ್ಯೆ: 3

ವೃಶ್ಚಿಕ: ಹಿರಿಯರ ಜೊತೆಯಲ್ಲಿ ಕಷ್ಟ ಸುಖವನ್ನು ಹಂಚಿಕೊಳ್ಳುವ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಲಭ್ಯ. ಶುಭಸಂಖ್ಯೆ: 7

ಧನುಸ್ಸು: ಮಕ್ಕಳು ನಿಮ್ಮನ್ನು ಸಂತೋಷಪಡಿಸುವ ಬಗೆಗಿನ ಬೆಳವಣಿಗೆಗಳ ಕಡೆಗೆ ಗಮನ ಹರಿಸಲಿದ್ದಾರೆ. ಶುಭಸಂಖ್ಯೆ: 5

ಮಕರ: ಶಕ್ತಿದುರ್ಗಾಳ ದಯದಿಂದಾಗಿ ನಿಮ್ಮ ಪಾಲಿಗೆ ಸಿಗಬೇಕಾದ ಯಶಸ್ಸು ಖಚಿತವಾಗಿ ಲಭಿಸಲಿದೆ. ಶುಭಸಂಖ್ಯೆ: 9

ಕುಂಭ: ನಿಮ್ಮ ವೈಯಕ್ತಿಕ ಯಶಸ್ಸಿಗಾಗಿ ಬಾಳಸಂಗಾತಿಯ ಜತೆಗೆ ಪ್ರಸ್ತಾಪಿಸಿ, ಸಮಾಲೋಚನೆ ನಡೆಸಿ. ಶುಭಸಂಖ್ಯೆ: 7

ಮೀನ: ನಿಮಗೆ ನೀವೇ ಯಜಮಾನರು. ಕೈಕೆಸರಾದರೆ ಬಾಯಿ ಮೊಸರು ಎಂಬ ಮಾತು ಸತ್ಯವಾಗಲಿದೆ. ಶುಭಸಂಖ್ಯೆ: 2

Leave a Reply

Your email address will not be published. Required fields are marked *