ನಿತ್ಯಭವಿಷ್ಯ|10-07-2019

ಮೇಷ: ಆರ್ಥಿಕ ಬಲದ ಸಂವರ್ಧನೆಗಳಿಗಾಗಿ ನಿಮಗೆ ಕೆಲವು ಹೊಸ ಬಗೆಯ ವಿಚಾರಗಳು ಗೋಚರಿಸಬಹುದು. ಶುಭಸಂಖ್ಯೆ: 2

ವೃಷಭ: ವಿಶೇಷವಾಗಿ ನಡೆದಾಡುವಾಗ ಎಚ್ಚರ ಇರಲಿ. ಮುಗ್ಗರಿಸಿ ಬೀಳುವಂತಹ ಸಾಧ್ಯತೆಯಿಂದ ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 6

ಮಿಥುನ: ನಿಮ್ಮ ಆಪ್ತ ಜನರ ಕೆಲವು ಅನುಮಾನಗಳ ಕಾರಣದಿಂದಾಗಿ ಅನೇಕ ಬಗೆಯ ಗೊಂದಲಗಳು ಎದ್ದೇಳಲು ಸಾಧ್ಯವಿದೆ. ಶುಭಸಂಖ್ಯೆ: 3

ಕಟಕ: ಶ್ರೀ ಭ್ರಮರಾಂಬಾಳನ್ನು ಸ್ತುತಿಸುವ ಕೆಲಸ ಪ್ರಮುಖವಾಗಲಿ. ಇದರಿಂದ ದಾಂಪತ್ಯದಲ್ಲಿ ಸಿದ್ಧಿ ಸಾಧ್ಯವಾಗಲಿದೆ. ಶುಭಸಂಖ್ಯೆ: 7

ಸಿಂಹ: ನೀವು ನಿಮ್ಮ ದೌರ್ಬಲ್ಯಗಳನ್ನು ಮೀರಿ ಹೊರಬರುವ ವಿಚಾರ ಸಾಕಾರಾವಾದರೆ ಪ್ರಶಂಸೆಗಳು ಲಭ್ಯವಾಗಲಿವೆ. ಶುಭಸಂಖ್ಯೆ: 1

ಕನ್ಯಾ: ಏನೋ ಒಂದು ಬಗೆಯ ಆತಂಕ ಆರೋಗ್ಯದ ಏರುಪೇರುಗಳಿಗೆ ಕಾರಣವಾಗಲು ಅವಕಾಶವಾದೀತು. ಶುಭಸಂಖ್ಯೆ: 8

ತುಲಾ: ವೃಥಾ ಸುಮ್ಮನೆ ನಿಮ್ಮನ್ನು ಹಗುರವಾಗಿ ಕಾಣುವ ಜನರು ಬಂದರೂ ಚಾತುರ್ಯದಿಂದ ಅವರನ್ನು ದೂರವೇ ಇಡಿ. ಶುಭಸಂಖ್ಯೆ: 5

ವೃಶ್ಚಿಕ: ಕೈಕಾಲು ಗಂಟುಗಳ ನೋವಿನಿಂದಾಗಿ ಬಳಲಿಕೆ ಸಾಧ್ಯ. ತಜ್ಞ ವೈದ್ಯರ ಸಲಹೆ ಪಡೆಯುವುದು ಸರಿಯಾದುದು. ಶುಭಸಂಖ್ಯೆ: 6

ಧನುಸ್ಸು: ನಿಮಗಿಂತ ಹಿರಿಯರಾದವರ ಬಗೆಗೆ, ಅವರ ಆರೋಗ್ಯದ ಬಗೆಗೆ ನಿಗಾ ವಹಿಸುವುದು ಉತ್ತಮ ವಿಚಾರ. ಶುಭಸಂಖ್ಯೆ: 8

ಮಕರ: ಸದ್ಗುರು ಶ್ರೀ ಲಕ್ಷ್ಮೀನರಸಿಂಹಸ್ವಾಮಿಯನ್ನು ಆರಾಧಿಸಿ. ಇದರಿಂದ ಪ್ರಮೋಶನ್​ಗೆ ಸುಗಮವಾದ ದಾರಿ ಇದೆ. ಶುಭಸಂಖ್ಯೆ: 4

ಕುಂಭ: ನಿಮ್ಮನ್ನು ಆರಾಧಿಸುವ ಜನ ತುಂಬ ಇದ್ದಾರೆ. ಹೊಸದೇ ರೀತಿಯ ಹೊಣೆಯನ್ನು ಹೊರಲು ತಯಾರಾಗಿ. ಶುಭಸಂಖ್ಯೆ: 2

ಮೀನ: ಕೆಲವು ಸಲ ಪೂರ್ತಿ ಸಂದೇಹದ ಸ್ವಭಾವ ನಿಮಗೆ ತೊಂದರೆ ತಂದಿದೆ. ಹಿಂದಿನ ತಪ್ಪು ಮರುಕಳಿಸದಿರಲಿ. ಶುಭಸಂಖ್ಯೆ: 8

Leave a Reply

Your email address will not be published. Required fields are marked *