ನಿತ್ಯ ಭವಿಷ್ಯ: ಈ ರಾಶಿಯವರು ಸಂಗಾತಿಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು

ಮೇಷ: ಇಂದೇ ಎಲ್ಲವನ್ನೂ ಮುಗಿಸಿ ಕೈತೊಳೆದುಕೊಳ್ಳಬೇಕು ಎಂಬ ಒತ್ತಡವನ್ನು ನಿರ್ವಿುಸಿಕೊಳ್ಳದಿರಿ. ಗೆಲ್ಲುತ್ತೀರಿ. ಶುಭಸಂಖ್ಯೆ: 2

ವೃಷಭ: ಮಕ್ಕಳನ್ನು ಸರಿಯಾಗಿ ಗಮನಿಸಿ ಬೆರೆಯಿರಿ. ನಿಮ್ಮ ಪ್ರೋತ್ಸಾಹದಿಂದ ಅವರು ಸಂತಸಪಡದೆ ಇರಲಾರರು. ಶುಭಸಂಖ್ಯೆ: 8

ಮಿಥುನ: ನಿಮ್ಮ ಸಂಗಾತಿಯ ವಿಚಾರದಲ್ಲಿ ಹೆಚ್ಚಿನ ಕಾಳಜಿಗಳು ಇರಲಿ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರ ಅವಶ್ಯ. ಶುಭಸಂಖ್ಯೆ: 4

ಕಟಕ: ದೂರದ ಬಂಧುಗಳ ಅನಿರೀಕ್ಷಿತ ಆಗಮನದಿಂದ ಕೆಲವು ಪ್ರಯೋಜನಗಳನ್ನು ಪಡೆಯುವ ಸಂತೋಷವಿದೆ. ಶುಭಸಂಖ್ಯೆ: 1

ಸಿಂಹ: ಅನೇಕ ವಿಚಾರಗಳಲ್ಲಿ ನಿಮ್ಮ ಸಂತೋಷಕ್ಕೆ ಕಾರಣವಾಗುವ ಅದೃಷ್ಟ ಇಂದು ಸಲೀಸಾಗಿ ಕೂಡಿ ಬರಲಿದೆ. ಶುಭಸಂಖ್ಯೆ: 7

ಕನ್ಯಾ: ಹಿರಿಯರ ನಿರೀಕ್ಷೆ ಹೆಚ್ಚಿರುತ್ತದೆ. ಸಿಟ್ಟು ಮಾಡಿಕೊಳ್ಳದೆ ಶಾಂತವಾಗಿ ಮಾತಾಡಿ. ತೃಪ್ತರಾಗಿ. ಮನಸ್ಸು ನಿರಾಳ. ಶುಭಸಂಖ್ಯೆ: 3

ತುಲಾ: ಭಕ್ತದಯಾನಿಧಿ ಶ್ರೀಶೈಲ ಮಲ್ಲಿಕಾರ್ಜುನನ ಸ್ತುತಿಯಿಂದ ಹಲವು ದಿನಗಳ ಕನಸುಗಳಿಗೆ ನನಸಿನ ರೂಪ ಲಭ್ಯ. ಶುಭಸಂಖ್ಯೆ: 6

ವೃಶ್ಚಿಕ: ಕಡತಗಳ ವಿಚಾರದಲ್ಲಿ ಅಜಾಗ್ರತೆ ಮಾಡಬೇಡಿ. ನಿಮಗೆ ಬೇಕಾದ ಮುಖ್ಯ ದಾಖಲೆ ಬಗ್ಗೆ ಎಚ್ಚರ ಇರಲಿ. ಶುಭಸಂಖ್ಯೆ: 8

ಧನುಸ್ಸು: ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ. ವೈದ್ಯರ ಆದೇಶದ ನಂತರವೇ ಒತ್ತಡದ ಕೆಲಸಗಳನ್ನು ನಿರ್ವಹಿಸಿ. ಶುಭಸಂಖ್ಯೆ: 2

ಮಕರ: ಹತ್ತಿರದವರು ನಿಮ್ಮ ಸಹಾಯಕ್ಕೆ ಬರುವ ನಿರೀಕ್ಷೆ ಇದೆ. ಒಳ್ಳೆಯ ಬೆಳವಣಿಗೆಗಾಗಿನ ಚಿಕ್ಕ ಪ್ರಾರಂಭಕ್ಕೆ ಚಾಲನೆ. ಶುಭಸಂಖ್ಯೆ: 5

ಕುಂಭ: ಶ್ರೀದೇವಿ ಕಾತ್ಯಾಯಿನಿಯ ಆರಾಧನೆಯಿಂದ ನಿಮ್ಮದೇ ಆದ ಕೆಲವು ಕಾರ್ಯಯೋಜನೆಗಳನ್ನು ಸಫಲಗೊಳಿಸುವಿರಿ. ಶುಭಸಂಖ್ಯೆ: 3

ಮೀನ: ಹೊಸದೇ ಊರಿಗೆ ವರ್ಗಾವಣೆಯ ಆದೇಶ ಬಂದು ಗೊಂದಲ ಎಬ್ಬಿಸುವ ವಿಚಾರ ಹರಳುಗಟ್ಟಿದೆ. ಎಚ್ಚರ. ಶುಭಸಂಖ್ಯೆ: 9

Leave a Reply

Your email address will not be published. Required fields are marked *