ನಿತ್ಯಭವಿಷ್ಯ|09-07-2019

ಮೇಷ: ನಿಮ್ಮ ಏಕಾಗ್ರತೆಯನ್ನು ಕೆಡಿಸಿ ನೆಮ್ಮದಿಯನ್ನು ಹಾಳುಮಾಡುವಂತಹ ಮಂದಿಯ ಬಗ್ಗೆ ಚಿಂತಿಸದೆ ನಿರ್ಲಕ್ಷಿಸಿಬಿಡಿ. ಶುಭಸಂಖ್ಯೆ: 4

ವೃಷಭ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವುದನ್ನು ಮುಂದುವರಿಸದೆಯೇ ಹೆಚ್ಚಿನ ಕಾಳಜಿ ಹೊಂದಿ. ತೊಂದರೆ ತಪ್ಪಿಸಿ. ಶುಭಸಂಖ್ಯೆ: 8

ಮಿಥುನ: ಇರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳದೆ ಮುಂದಿನ ಕೆಲಸಕ್ಕೆ ಮುಂದಾಗದಿರಿ. ಅಡೆತಡೆ ಬರಬಹುದು. ಶುಭಸಂಖ್ಯೆ: 6

ಕಟಕ: ನಿಮ್ಮದು ಕುಟುಕುವ ಗುಣಧರ್ಮ ಎಂಬ ಆರೋಪಗಳೂ ಬರಬಹುದು. ಈ ಬಗ್ಗೆ ತುಸು ನಿಗಾ ಇರಲಿ. ಶುಭಸಂಖ್ಯೆ: 3

ಸಿಂಹ: ವಿವಾಹಾಪೇಕ್ಷಿಗಳು ಹಿರಿಯರ ಸಹಾಯವನ್ನು ಪಡೆದು ಕ್ರಿಯಾಶೀಲರಾಗಲು ಜಾಸ್ತಿ ಅವಕಾಶಗಳು ಇವೆ. ಶುಭಸಂಖ್ಯೆ: 7

ಕನ್ಯಾ: ಭಗವಾನ್ ಪರಶಿವನನ್ನು ಧ್ಯಾನಿಸುವ ಮೂಲಕ ಮಕ್ಕಳ ಮೂಲಕ ಬಂದ ಸಮಸ್ಯೆಗಳು ದೂರವಾಗಲಿವೆ. ಶುಭಸಂಖ್ಯೆ: 5

ತುಲಾ: ನಿಮಗೇ ತಿಳಿಯದಂತೆ ಹೆಗ್ಗಣಗಳು ನಿಮ್ಮನ್ನು ಆರ್ಥಿಕವಾಗಿ ಶೋಷಿಸಬಹುದು. ಖರ್ಚಿನಲ್ಲಿ ಎಚ್ಚರ ವಹಿಸಿ. ಶುಭಸಂಖ್ಯೆ: 2

ವೃಶ್ಚಿಕ: ವರ್ತಮಾನದ ಗಟ್ಟಿಯಾದ ಅದೃಷ್ಟದ ಕಾರಣದಿಂದ ನಿಮ್ಮಗೆ ಅನೇಕ ರೀತಿಯ ಲಾಭಗಳು ಸಿಗಲಿವೆ. ಶುಭಸಂಖ್ಯೆ: 9

ಧನುಸ್ಸು: ಬಂಧಿಯಾಗಿದ್ದೀರಿ ಎಂಬ ಮನೋಭಾವದಿಂದ ಭಯ ಉಂಟಾಗಬಹುದು. ಅದರ ನಿವಾರಣೆಗೆ ಪಾರ್ವತಿಯನ್ನು ಧ್ಯಾನಿಸಿ. ಶುಭಸಂಖ್ಯೆ: 3

ಮಕರ: ನಿಮ್ಮ ಬೆನ್ನ ಹಿಂದೆ ನಡೆಯುವಂತಹ ಷಡ್ಯಂತ್ರಗಳ ಬಗ್ಗೆ ಗಣೇಶನ ಮೊರೆ ಹೋಗಿ. ಚಿಂತಿಸದೆ ನಿರಾಳರಾಗಿ. ಶುಭಸಂಖ್ಯೆ: 8

ಕುಂಭ: ಎಷ್ಟೇ ಪರಿಪೂರ್ಣತೆ ಸಾಧಿಸಿದರೂ ನಿಮ್ಮ ಪಾರದರ್ಶಕತೆಯ ಬಗ್ಗೆ ತೊಂದರೆ ಮಾಡುವ ಜನ ಇರುತ್ತಾರೆ. ಶುಭಸಂಖ್ಯೆ: 5

ಮೀನ: ನಿಮ್ಮನ್ನು ಸಂಪೂರ್ಣವಾಗಿ ನಂಬಿಕೊಂಡು ಆರಾಧಿಸುವವರನ್ನು ಖಂಡಿತ ಅನುಮಾನಿಸಲು ಮುಂದಾಗದಿರಿ. ಕ್ಷೇಮವಿದೆ. ಶುಭಸಂಖ್ಯೆ: 1

Leave a Reply

Your email address will not be published. Required fields are marked *