ನಿತ್ಯಭವಿಷ್ಯ|09-03-2019

ಮೇಷ: ಹೊಂಚು ಹಾಕಿ ನಿಮ್ಮ ಯೋಜನೆಗಳನ್ನು ವಿಫಲಗೊಳಿಸುವ ಕೇಡಿಗಳನ್ನು ಎಚ್ಚರದಿಂದ ದೂರವಾಗಿಸಿಕೊಳ್ಳಿ. ಶುಭಸಂಖ್ಯೆ: 2

ವೃಷಭ: ಅವಶ್ಯವಾಗಿ ಒತ್ತಡಗಳನ್ನು ಎದುರಿಸುವ ಮನೋದಾರ್ಢ್ಯತೆಯನ್ನು ತೋರಬೇಕು. ಅಂಜುಗುಳಿತನ ಬೇಡ. ಶುಭಸಂಖ್ಯೆ: 4

ಮಿಥುನ: ಹಿರಿಯರು ಅಥವಾ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು. ಅವಸರಿಸದೆ ಚಿಕಿತ್ಸೆ ಕೊಡಿಸಿ. ನಿರಾಳತೆ ಲಭ್ಯ. ಶುಭಸಂಖ್ಯೆ: 7

ಕಟಕ: ಸ್ವತಂತ್ರವಾದ ನಿರ್ಧಾರವನ್ನು ತಳೆಯಿರಿ. ಸಫಲತೆಗಾಗಿನ ನಿಮ್ಮ ಪ್ರಯತ್ನಗಳಿಗೆ ಬೌದ್ಧಿಕ ಗಟ್ಟಿತನದಿಂದ ಯಶಸ್ಸಿದೆ. ಶುಭಸಂಖ್ಯೆ: 5

ಸಿಂಹ: ಸುಗಮವಾಗಿ ನಡೆಯುವ ಕೆಲಸಕಾರ್ಯಗಳಿಗೆ ಕೆಲವು ಗೆಳೆಯರೇ ಅಡ್ಡಿ ಮಾಡಬಹುದು. ಜಾಗ್ರತೆಯಿಂದ ಇರಿ. ಶುಭಸಂಖ್ಯೆ: 9

ಕನ್ಯಾ:  ಭದ್ರಕಾಳಿಯನ್ನು, ವೆಂಕಟೇಶ್ವರನನ್ನು ಬಿಡದೆ ಆರಾಧಿಸಿ. ದುಷ್ಟರು ಕೊಡದಿರುವ ನಿಮ್ಮ ಹಣ ಬೇಗ ಮರಳಿ ಸಿಗಲಿದೆ. ಶುಭಸಂಖ್ಯೆ: 6

ತುಲಾ:  ಶಿಸ್ತಿನ ಆವಶ್ಯಕತೆ ಇದೆ. ನಿಮ್ಮದಾದ ಸಂಪನ್ನ, ಪಾರದರ್ಶಕ ವ್ಯಕ್ತಿತ್ವಕ್ಕೆ ವಿಶೇಷ ಪ್ರಶಂಸೆ ಸಿಗಲು ಸಾಧ್ಯವಿದೆ. ಶುಭಸಂಖ್ಯೆ: 3

ವೃಶ್ಚಿಕ: ಇದು ಉತ್ತಮ ಕಾಲವಲ್ಲ ಎಂದು ಮೀನಮೇಷ ಎಣಿಸದಿರಿ. ಲೆಕ್ಕಾಚಾರ, ಮಿತವ್ಯಯದಿಂದ ಯೋಜನೆ ರೂಪಿಸಿ ಗೆಲ್ಲಿ. ಶುಭಸಂಖ್ಯೆ: 8

ಧನುಸ್ಸು:  ಎಲ್ಲ ವಿಚಾರಗಳಲ್ಲಿಯೂ ಯಶಸ್ಸು ಸಾಧ್ಯವಾಗಬೇಕಾದರೆ ಮಾತನ್ನು ನಿಯಂತ್ರಿಸಿ. ಯೋಚಿಸಿಯೇ ಮಾತನಾಡಿ. ಶುಭಸಂಖ್ಯೆ: 5

ಮಕರ: ಲೋಕಪಾಲಕನಾದ ಕಪಾಲಿ ಪರಶಿವನನ್ನು ಆರಾಧಿಸಿ. ಮಾರುತಿಯನ್ನು ಸ್ತುತಿಸಿ. ಗೆಲುವಿನ ದಾರಿಗೆ ಬೆಳಕಿದೆ. ಶುಭಸಂಖ್ಯೆ: 2

ಕುಂಭ: ನೀವು ಅಡಿಯಿಡುವ ದಾರಿಗಳಲ್ಲಿ ಮುಳ್ಳುಗಳು ಇರದೆ ಎಲ್ಲವೂ ನಿರಾಯಾಸ ಎಂಬ ಅತಿ ಆತ್ಮವಿಶ್ವಾಸ ಬೇಡ. ಶುಭಸಂಖ್ಯೆ: 1

ಮೀನ: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದನ್ನು ತರ್ಕಬದ್ಧವಾಗಿ ಆಲೋಚಿಸಿ. ಆದರೆ ನಿಜವಾದ ಹಾಲನ್ನು ನಿರ್ಲಕ್ಷಿಸದಿರಿ. ಶುಭಸಂಖ್ಯೆ: 8