ನಿತ್ಯಭವಿಷ್ಯ|08-07-2019

ಮೇಷ: ನೀವು ಕೈಗೊಂಡಿರುವ ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ ನಂತರ ವಿಶೇಷ ಸಮಾಧಾನ, ನೆಮ್ಮದಿ ಲಭ್ಯ. ಶುಭಸಂಖ್ಯೆ: 4

ವೃಷಭ: ಭಾಗ್ಯದ ವಿಚಾರವು ಪ್ರತಿಯೊಬ್ಬನಿಗೂ ಬೇರೆ ಬೇರೆ. ಹೆಣಗಾಡುವುದು ಇದ್ದೇ ಇದೆ. ಗುರಿ ತಲುಪುತ್ತೀರಿ. ಶುಭಸಂಖ್ಯೆ: 9

ಮಿಥುನ: ಮುಖ್ಯವಾದ ವಿಚಾರಕ್ಕಾಗಿ ಪರದಾಟಗಳನ್ನು ಎದುರಿಸುತ್ತೀರಿ. ಆದರೂ ಎದುರಿಸುವ ಧೈರ್ಯ ಇರಲಿ. ಒಳಿತಿದೆ. ಶುಭಸಂಖ್ಯೆ: 3

ಕಟಕ: ತಾಯಿ ದುರ್ಗಾಳನ್ನು ಆರಾಧಿಸುವುದರ ಮೂಲಕ ಆವಶ್ಯಕವಾದ ಸಾಮರ್ಥ್ಯ, ಉತ್ಸಾಹವನ್ನು ಪಡೆಯಬಲ್ಲಿರಿ. ಶುಭಸಂಖ್ಯೆ: 6

ಸಿಂಹ: ನಿಮ್ಮದಾದ ಒಂದಷ್ಟು ಪ್ರಯತ್ನಗಳ ದಾರಿಯಲ್ಲಿ ಹಣದ ಬಳಕೆ ಮಾಡಿ. ಆದರೆ ಖರ್ಚಿನಲ್ಲಿ ಬಿಗಿ ಹಿಡಿತ ಇರಲಿ. ಶುಭಸಂಖ್ಯೆ: 2

ಕನ್ಯಾ: ನಿಸ್ತೇಜತೆ, ವೈಫಲ್ಯಗಳನ್ನು ಮುಖದಲ್ಲಿ ತೋರಿಸಿಕೊಳ್ಳಬೇಡಿ. ಛಲದಿಂದ ಮುನ್ನುಗ್ಗಿ. ದಾರಿ ಗೋಚರಿಸಲಿದೆ. ಶುಭಸಂಖ್ಯೆ: 8

ತುಲಾ: ಮಕ್ಕಳ ಬಗೆಗಿನ ವಿಚಾರದಲ್ಲಿ ಏಕಾಏಕಿ ತೊಂದರೆಗಳು ಎದ್ದೇಳಬಹುದು. ಈ ಬಗ್ಗೆ ಎಚ್ಚರ ವಹಿಸಿದರೆ ಉತ್ತಮ. ಶುಭಸಂಖ್ಯೆ: 5

ವೃಶ್ಚಿಕ: ನಿಮ್ಮದೇ ಆದ ಸಮಸ್ಯೆಗಳನ್ನು ಕೇಳಿಸಿಕೊಳ್ಳಲು ಕೆಲವು ಹಿರಿಯರು ಸಿಗಲಿದ್ದಾರೆ. ಚಿಂತೆಯನ್ನು ಬಿಟ್ಟು ನಿರಾಳರಾಗಿರಿ. ಶುಭಸಂಖ್ಯೆ: 9

ಧನುಸ್ಸು: ಹೇಗೋ, ಏನೋ, ಎಂತೋ ಎಂಬ ಭಯ ಇದ್ದರೂ ಲಕ್ಷ್ಮೀನರಸಿಂಹನ ಅನುಗ್ರಹದಿಂದಾಗಿ ಎಲ್ಲವೂ ಸುಸೂತ್ರವಾಗಲಿದೆ. ಶುಭಸಂಖ್ಯೆ: 3

ಮಕರ: ಮಕ್ಕಳ ಅಭ್ಯುದಯದ ವಿಚಾರದಲ್ಲಿ ನಿಮಗೇ ತಿಳಿಯದ ರೀತಿಯಲ್ಲಿ ದಾರಿಯೊಂದರ ನಿರ್ಮಾಣ ಸಾಧ್ಯವಿದೆ. ಶುಭಸಂಖ್ಯೆ: 5

ಕುಂಭ: ತಾವೇ ಬುದ್ಧಿವಂತರು ಎಂದು ತಿಳಿದುಕೊಂಡು ಬಂದವರ ಜತೆ ಚರ್ಚೆಗೆ ಹೋಗದಿರಿ. ಮೌನವೇ ಸೂಕ್ತವಾಗಿದೆ. ಶುಭಸಂಖ್ಯೆ: 7

ಮೀನ: ಎಲ್ಲೋ ಒಂದೆಡೆ ನಿಮ್ಮನ್ನು ನೀವು ಮುಗ್ಧರು ಎಂದು ಗುರುತಿಸಿಕೊಳ್ಳುವಿರಿ. ನಿಮ್ಮ ಆತ್ಮವಿಶ್ವಾಸದಿಂದ ಗೆಲುವಿದೆ. ಶುಭಸಂಖ್ಯೆ: 1

Leave a Reply

Your email address will not be published. Required fields are marked *