ನಿತ್ಯಭವಿಷ್ಯ|08-03-2019

ಮೇಷ:  ನೀವು ಗೌರವಿಸುವ ವ್ಯಕ್ತಿಗಳು ವ್ಯಾಜ್ಯದ ವಿಚಾರವೊಂದರಲ್ಲಿ ನಿಮ್ಮನ್ನು ಬೆಂಬಲಿಸಿ ಶಾಂತಿಯನ್ನು ತರುತ್ತಾರೆ. ಶುಭಸಂಖ್ಯೆ: 7

ವೃಷಭ:  ಅವಸರದ ಹೆಜ್ಜೆಗಳು ಬೇಡ. ಅನವಶ್ಯಕವಾದ ನಿಧಾನ ಪ್ರವೃತ್ತಿ ಕೂಡ ಬೇಡ. ಸಮತೋಲನದ ಸ್ಥಿತಿ ಮಾತ್ರ ಇರಲಿ. ಶುಭಸಂಖ್ಯೆ: 4

ಮಿಥುನ: ಗೌರೀಶಂಕರ ಸ್ವಾಮಿಯ ಸ್ತುತಿಯಿಂದ ಬಿಕ್ಕಟ್ಟಿನ ವರ್ತಮಾನವನ್ನು ದೂರ ಮಾಡಿಕೊಳ್ಳುವ ಅವಕಾಶಗಳು ಜಾಸ್ತಿ. ಶುಭಸಂಖ್ಯೆ: 8

ಕಟಕ: ನಯವಾಗಿಯೇ ಕಾಣಿಸುವ ವರ್ತಮಾನವನ್ನು ಮುಳ್ಳಿನ ಹಂದರವಾಗಿಸುವ ಜನರನ್ನು ದೂರದಲ್ಲಿಯೇ ಇರಿಸಿ. ಶುಭಸಂಖ್ಯೆ: 9

ಸಿಂಹ: ನಿಮಗೆ ಶಕ್ತಿ, ತಾಳ್ಮೆ ಇದೆ. ಅದೃಷ್ಟದ ವಿಚಾರದಲ್ಲಿ ಬಿಕ್ಕಟ್ಟು ಎದುರಾಗುತ್ತದೆ. ಮಕ್ಕಳ ಬೆಂಬಲ ಪಡೆಯಿರಿ. ಕ್ಲೇಶ ನಿವಾರಣೆ. ಶುಭಸಂಖ್ಯೆ: 6

ಕನ್ಯಾ:  ಅನುಗ್ರಹಿಸುತ್ತಿರುವ ಗಣೇಶನ ಕಾರಣದಿಂದಾಗಿ ಸ್ನೇಹಮಯಿಯಾದ ಹಿರಿಯ ಜೀವವೊಂದು ನಿಮ್ಮ ಬೆಂಬಲಕ್ಕೆ ಬರಲಿದೆ. ಶುಭಸಂಖ್ಯೆ: 2

ತುಲಾ:  ಯಾರಿಗೂ ಹಣ ಕೊಡುವ, ಕೊಡಿಸುವ ಕೆಲಸ ಮಾಡಲು ಹೋಗದಿರಿ. ಅಪಾಯಕ್ಕೆ ಕೈ ಹಾಕಿಕೊಳ್ಳದಿರಿ. ಶುಭಸಂಖ್ಯೆ: 5

ವೃಶ್ಚಿಕ:  ಗುರಿಯಿರದೆ ಯಾರೋ ಬಿಟ್ಟ ಬಾಣ ಬಂದು ನಿಮ್ಮನ್ನು ಕಾಡಬಹುದು. ಎಚ್ಚರದಿಂದ ಇರಲು ನಿಮ್ಮ ಪ್ರಯತ್ನ ಇರಲಿ. ಶುಭಸಂಖ್ಯೆ: 3

ಧನುಸ್ಸು:  ಧನಲಾಭದ ವಿಚಾರದಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎಂಬ ಸಂಗತಿಯು ಕಿರಿಕಿರಿ ತರಬಹುದು. ಶುಭಸಂಖ್ಯೆ: 7

ಮಕರ:  ವಿಶೇಷ ಸ್ಥಾನಮಾನಕ್ಕಾಗಿ ಏಕಾಗ್ರತೆ, ಎಡಬಿಡದ ಪ್ರಯತ್ನ ನಡೆಸಿ. ಅದೃಷ್ಟ ಕೂಡಿಬರುವುದು ಸಾಧ್ಯವಿದೆ. ಶುಭಸಂಖ್ಯೆ: 1

ಕುಂಭ: ನಿಮ್ಮ ನಯವಿನಯ, ಜ್ಞಾನಕ್ಕಾಗಿನ ಹಸಿವು ನಿಮಗೆ ಉನ್ನತವಾದುದನ್ನು ಒದಗಿಸಲು ಸನ್ನದ್ಧವಾಗಿದೆ. ಶುಭಸಂಖ್ಯೆ: 6

ಮೀನ: ಕೇವಲ ಸಂಶಯ, ಹಿಂಜರಿಕೆ, ಕೀಳರಿಮೆಗಳಿಂದ ಒಳ್ಳೆಯ ಅವಕಾಶಗಳು ಬಂದಾಗ ನಿರಾಕರಣೆ ಮಾಡಲು ಮುಂದಾಗದಿರಿ. ಶುಭಸಂಖ್ಯೆ: 3