More

    ನಿತ್ಯ ಭವಿಷ್ಯ: ಈ ರಾಶಿಗೆ ಸೇರಿದವರ ನಿರೀಕ್ಷೆಗಳನ್ನು ಬುಡಮೇಲು ಮಾಡುವಂತ ಜನರೇ ಸದ್ಯಕ್ಕೆ ಸಿಗುತ್ತಾರೆ. ಎಚ್ಚರಿಕೆ ವಹಿಸಿ

    ಮೇಷ: ನಿಮ್ಮ ನಿರೀಕ್ಷೆಗಳನ್ನು ಬುಡಮೇಲು ಮಾಡುವಂತಹ ಜನರೇ ಸದ್ಯಕ್ಕೆ ಸಿಗುತ್ತಾರೆ. ಜೋಕೆಯಿಂದಿರಿ. ಶುಭಸಂಖ್ಯೆ: 8

    ವೃಷಭ: ಹಿತಶತ್ರುಗಳು ನಿಮ್ಮನ್ನು ದಾರಿ ತಪ್ಪಿಸಿ ಅವಮಾನಕ್ಕೆ ದೂಡುವ ಕಾರ್ಯದಲ್ಲಿ ನಿರತರಾಗಬಹುದು. ಶುಭಸಂಖ್ಯೆ: 5

    ಮಿಥುನ: ಧನಾತ್ಮಕ ಬೆಳವಣಿಗೆಗೆ ಕಾರಣವಾಗುವಂಥ ಪೂರ್ವದ ಕೆಲಸಕ್ಕೆ ಶೀಘ್ರದಲ್ಲೇ ಒಳಿತಿನ ಒಳ್ಳೆಯ ಸಮಯ. ಶುಭಸಂಖ್ಯೆ: 9

    ಕಟಕ: ಸ್ಪಷ್ಟವಾಗಿಯೇ ಮಾತನಾಡಿ. ಏಕೆಂದರೆ ಧೂರ್ತರಿಗೂ ದಡ್ಡರಿಗೂ ಸ್ಪಷ್ಟವಾದ ಮಾತು ಅವಶ್ಯವಾಗಿದೆ. ಶುಭಸಂಖ್ಯೆ: 6

    ಸಿಂಹ: ದೂರದ ಬಂಧುಗಳ ಅನಿರೀಕ್ಷಿತ ಆಗಮನದಿಂದಾಗಿ ಕಿರಿಕಿರಿಗೆ ಅವಕಾಶ ಜಾಸ್ತಿ. ನಿಮ್ಮಲ್ಲೇ ತಾಳ್ಮೆ ಇರಲಿ. ಶುಭಸಂಖ್ಯೆ: 2

    ಕನ್ಯಾ: ಶ್ರೀದೇವಿ ಭಗವತಿಯನ್ನು ಆರಾಧಿಸಿ. ಆದಷ್ಟು ಪ್ರಾಮಾಣಿಕವಾಗಿರಿ. ಒಳ್ಳೆಯ ಫಲಕ್ಕೆ ದಾರಿ ಅಧಿಕವಾಗಿದೆ. ಶುಭಸಂಖ್ಯೆ: 4

    ತುಲಾ: ಕೆಲಸದ ಸ್ಥಳದಲ್ಲಿ ಕೋಪಿಸಿಕೊಳ್ಳದೆ ಶಾಂತವಾಗಿರಿ. ಉದ್ರೇಕಿಸುವ ಮಾತುಗಳು ಬಂದರೂ ಕೂಡ ತೆಪ್ಪಗಿರಿ. ಶುಭಸಂಖ್ಯೆ: 1

    ವೃಶ್ಚಿಕ: ಚಿಕ್ಕಪುಟ್ಟ ಕಾರಣಗಳಿಂದಾಗಿ ಮನಸ್ತಾಪ ಬಂದು ಒಡಹುಟ್ಟಿದವರೇ ಬಿರುಕನ್ನು ಉಂಟುಮಾಡಲು ಸಾಧ್ಯ. ಶುಭಸಂಖ್ಯೆ: 8

    ಧನಸ್ಸು: ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗೃತರಾಗಿ. ಅನ್ಯರು ವಿನಾಕಾರಣ ನಿಮ್ಮನ್ನು ಬೇಸ್ತು ಬೀಳಿಸಬಹುದು. ಶುಭಸಂಖ್ಯೆ: 3

    ಮಕರ: ನಿರೀಕ್ಷೆಗೂ ಮೀರಿ ಹೆಚ್ಚಿನ ಲಾಭ ಒದಗುವುದಕ್ಕೆ ಅಪರಿಚಿತರಿಂದ ಅಗತ್ಯವಾದುದರ ನೆರವು ಸಿಗಲಿದೆ. ಶುಭಸಂಖ್ಯೆ: 7

    ಕುಂಭ: ಮಾತು ಮುತ್ತಿನ ಮಣಿಗೆ ಸಮಾನ. ಎಚ್ಚರದಿಂದ ಮಾತಾಡಿ. ಇಲ್ಲದಿದ್ದರೆ ಏನೋ ಮಾತಾಡಿ ಪರಿತಪಿಸುವಿರಿ. ಶುಭಸಂಖ್ಯೆ: 1

    ಮೀನ: ಉತ್ತಮವಾದ ಸಾಮಾಜಿಕ ಕೆಲಸಕಾರ್ಯಗಳ ಮೂಲಕ ಹೆಚ್ಚಿನದಾದ ಪ್ರಶಂಸೆಯನ್ನು ಸಂಪಾದಿಸಲಿದ್ದೀರಿ. ಶುಭಸಂಖ್ಯೆ: 6

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts