ಮೇಷ: ಏನೋ ಒಂದು ರಹಸ್ಯವಾದ ನಿಗೂಢ ಶಕ್ತಿಯು ನಿಮ್ಮನ್ನು ಬಾಧಿಸಬಹುದು. ದುರ್ಗಾಶಕ್ತಿಯ ಸ್ತುತಿ ಉತ್ತಮ. ಶುಭಸಂಖ್ಯೆ: 3
ವೃಷಭ: ಬಾಳಸಂಗಾತಿಯ ವಿಚಾರದಲ್ಲಿ ಎಚ್ಚರ ವಹಿಸಬೇಕು. ಮನಸ್ತಾಪಗಳಿಗೆ ಯಾವುದೇ ಅವಕಾಶವನ್ನೂ ನೀಡಬೇಡಿ. ಶುಭಸಂಖ್ಯೆ: 6
ಮಿಥುನ: ಕೆಲವರಿಂದ ನಿಮ್ಮ ಮುಖಭಂಗ ಮಾಡುವ ಪ್ರಯತ್ನ ಸಾಧ್ಯವಾಗಬಹುದು. ಅಂಥವರಿಂದ ದೂರವೇ ಇರಿ. ಶುಭಸಂಖ್ಯೆ: 9
ಕಟಕ: ಒತ್ತಡದ ಕಾರಣಕ್ಕಾಗಿ ಖಂಡಿತವಾಗಿಯೂ ಯಾವುದರಲ್ಲೂ ಹಣ ತೊಡಗಿಸುವ ಆತುರವನ್ನು ತೋರದಿರಿ. ಶುಭಸಂಖ್ಯೆ: 7
ಸಿಂಹ: ನೀವು ಬುದ್ಧಿವಂತರೇನೋ ಹೌದು. ಆದರೆ ಇತರರೂ ಬುದ್ಧಿವಂತರಾಗಿರುತ್ತಾರೆ. ಹಾವು ಏಣಿ ಆಟದಲ್ಲಿ ಎಚ್ಚರ. ಶುಭಸಂಖ್ಯೆ: 3
ಕನ್ಯಾ: ತುಂಬಿಕೊಂಡಿದ್ದ ಅವ್ಯಕ್ತ ಭಯದಿಂದ ಹೊರಕ್ಕೆ ಬರುವುದಕ್ಕೆ ದಾರಿಯೊಂದು ಸಿಗಲಿದೆ. ಕುಲದೇವರನ್ನು ಸ್ತುತಿಸಿ. ಶುಭಸಂಖ್ಯೆ: 5
ತುಲಾ: ಅನ್ನಪೂರ್ಣೆಶ್ವರಿಯನ್ನು ಆರಾಧಿಸಿ. ವಿಶೇಷವಾಗಿ ಬಿಳಿಯ ಹೂಗಳಿಂದಲೇ ಅರ್ಚನೆ ಮಾಡಿದರೆ ಉತ್ತಮ. ಶುಭಸಂಖ್ಯೆ: 2
ವೃಶ್ಚಿಕ: ಅಚಾತುರ್ಯದಿಂದ ಉಂಟಾದ ಕಗ್ಗಂಟುಗಳಿಂದ ಹೊರಬರುವ ಅವಕಾಶ ನಿಮಗಿಂದು ಬೇಗ ಸಿಗಲಿದೆ. ಶುಭಸಂಖ್ಯೆ: 8
ಧನಸ್ಸು: ನಿಮ್ಮನ್ನು ಹೊಗಳಿದರು ಎಂಬ ಕಾರಣಕ್ಕಾಗಿ ಧಾರಾಳಿಯಾಗಿ ಹಣವನ್ನು ನೀಡದಿರಿ. ತೊಂದರೆಯೇ ಆದೀತು. ಶುಭಸಂಖ್ಯೆ: 1
ಮಕರ: ನಿಮ್ಮ ಕನಸಿನ ಯೋಜನೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ಸಾಕಾರ ಮಾಡುವ ಅವಕಾಶವಿದೆ. ಶುಭಸಂಖ್ಯೆ: 4
ಕುಂಭ: ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಂತೋಷಕರ ಬೆಳವಣಿಗೆಗಳು ನಿಮಗೆ ಸುಸ್ಪಷ್ಟವಾಗಿ ಗೋಚರಿಸಲಿವೆ. ಶುಭಸಂಖ್ಯೆ: 8
ಮೀನ: ತಾಳ್ಮೆ ಹಾಗೂ ಅತ್ಯಂತ ಜಾಣ್ಮೆಯಿಂದಲೇ ಮುಸುಕಿನಲ್ಲಿ ಗುದ್ದಾಟ ನಡೆಸುವಂತಹ ಜನರನ್ನು ಎದುರಿಸಿ. ಶುಭಸಂಖ್ಯೆ: 5