ನಿತ್ಯಭವಿಷ್ಯ|06-03-2019

ಮೇಷ: ಸಾಧಿಸಿ ತೋರಿಸುತ್ತೇನೆ ಎಂಬ ನಂಬಿಕೆ ಇರಲಿ. ಆತ್ಮವಿಶ್ವಾಸ, ಪ್ರಾಮಾಣಿಕ ಪ್ರಯತ್ನಗಳಿಂದ ಸಿದ್ಧಿ. ಶುಭಸಂಖ್ಯೆ: 5

ವೃಷಭ: ರಕ್ಷಕಿಯಾದ ಭದ್ರಕಾಳಿಯನ್ನು ಸ್ತುತಿಸಿ. ಕೆಂಪು ಹೂವುಗಳನ್ನು ದೇವಿಯ ಮಂದಿರಕ್ಕೆ ಅರ್ಪಿಸಿ. ಗೆಲುವಿದೆ. ಶುಭಸಂಖ್ಯೆ: 9

ಮಿಥುನ: ನಿಮ್ಮ ಪರಿಪೂರ್ಣವಾದ ರ್ತಾಕ, ಬೌದ್ಧಿಕ ಮಹತ್ವದ ಚಿಂತನೆಗಳು ನಿಮ್ಮನ್ನು ಗುರಿಗೆ ತಲುಪಿಸುವಲ್ಲಿ ಸಫಲವಾಗುತ್ತವೆ. ಶುಭಸಂಖ್ಯೆ: 2

ಕಟಕ: ಸರ್ಕಾರಿ ವಿಚಾರ, ಕೆಲಸಕಾರ್ಯಗಳಲ್ಲಿ ಆತ್ಮಸ್ಥೈರ್ಯದಿಂದ ಸಂಭಾವಿತರನ್ನು ಸಂದರ್ಶಿಸಿ. ಕೆಲಸದಲ್ಲಿ ಯಶಸ್ಸು. ಶುಭಸಂಖ್ಯೆ: 4

ಸಿಂಹ: ಪರಮ ಸದ್ಗುರುವಾದ ನರಸಿಂಹನನ್ನು, ಮಾರುತಿಯನ್ನು ಆರಾಧಿಸಿ. ಬಿರುಗಾಳಿಯ ವಿರುದ್ಧ ರಕ್ಷೆ ಲಭ್ಯ. ಶುಭಸಂಖ್ಯೆ: 7

ಕನ್ಯಾ: ನಿಮ್ಮ ಕೌಶಲದ ಮಾತುಗಳು ಜನರನ್ನು ಪ್ರಾಮಾಣಿಕವಾಗಿ ಸ್ಪಂದಿಸಿ ಹೆಚ್ಚಿನ ಪ್ರಶಂಸೆ ಒದಗಿಸಲಿವೆ. ಶುಭಸಂಖ್ಯೆ: 8

ತುಲಾ: ನಿಮ್ಮ ವ್ಯತಿರಿಕ್ತ ವಿಚಾರ, ವರ್ತನೆಗಳಿಂದ ಅನ್ಯರನ್ನು ಘಾಸಿಗೊಳಿಸದಿರಿ. ಅಚ್ಚರಿಪಡುವಂತೆ ಅನ್ಯರ ಬೆಂಬಲ ಲಭ್ಯವಿದೆ. ಶುಭಸಂಖ್ಯೆ: 1

ವೃಶ್ಚಿಕ: ಕುಟುಂಬದ ಸ್ವಾಸ್ಥ್ಯದ ಗಟ್ಟಿತನದಿಂದಲೇ ವೈಯಕ್ತಿಕ ಜೀವನ ನಿಲ್ಲುವಂಥದು. ಕುಟುಂಬವನ್ನು ಅಲಕ್ಷಿಸದಿರಿ. ಶುಭಸಂಖ್ಯೆ: 6

ಧನುಸ್ಸು: ವಿನಾಶದ ವಿಚಾರವನ್ನೇ ಆಲೋಚಿಸುತ್ತ ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ. ಭರವಸೆಯಿಂದ ಹೆಜ್ಜೆ ಇರಿಸಿ. ಶುಭಸಂಖ್ಯೆ: 2

ಮಕರ: ನಿಮ್ಮನ್ನು ಅನವಶ್ಯಕವಾದ ಪರಿಸ್ಥಿತಿಯತ್ತ ಎಳೆದುತಂದು ನಷ್ಟಕ್ಕೆ ಕಾರಣರಾಗುವ ಜನರಿಂದ ದೂರ ಇರಿ. ಶುಭಸಂಖ್ಯೆ: 5

ಕುಂಭ: ನಿಮ್ಮ ಅಪ್ರತಿಮ ಯಶಸ್ಸಿನ ವಿಚಾರದಲ್ಲಿ ಈವರೆಗಿನ ಅನುಭವಗಳನ್ನು ಬಳಸಿಕೊಂಡು ಮುನ್ನುಗ್ಗಿ. ಯಶಸ್ಸಿದೆ. ಶುಭಸಂಖ್ಯೆ: 9

ಮೀನ: ವ್ಯವಧಾನ ಹಾಗೂ ಸೂಕ್ಷ್ಮ ಕ್ರಿಯಾಶೀಲತೆಯಿಂದ ಗುರಿ ತಲುಪಲು ಪ್ರಯತ್ನಿಸಿ. ಅವಸರದಿಂದ ಅಪಕೀರ್ತಿ. ಶುಭಸಂಖ್ಯೆ: 3