ನಿತ್ಯಭವಿಷ್ಯ|07-03-2019

ಮೇಷ: ಬಹಳ ಎಚ್ಚರದಿಂದಲೇ ಮುನ್ನುಗ್ಗುವ ನಿಮ್ಮ ಪ್ರಯತ್ನ ಸರಿಯಾದುದೇ ಆಗಿದೆ. ಆದರೆ ತೀರಾ ನಿಧಾನ ಬೇಡ. ಶುಭಸಂಖ್ಯೆ: 8

ವೃಷಭ: ಕಾರ್ಮೋಡಗಳು ತುಂಬಿರುವುದು ಸತ್ಯವಾದರೂ ಚದುರಿಹೋಗುವ ಮೋಡಗಳನ್ನು ತಾಳ್ಮೆಯಿಂದ ಕಾಯಿರಿ. ಶುಭಸಂಖ್ಯೆ: 4

ಮಿಥುನ: ಜನರೆದುರು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಪ್ರದರ್ಶಿಸಬೇಡಿ. ಉಪದ್ವ್ಯಾಪ ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 2

ಕಟಕ: ನಿಮ್ಮದು ಮೃದು ಸ್ವಭಾವ ಆಗಿರುವುದರಿಂದ ಕಿರಿಕಿರಿ ಎಬ್ಬಿಸಿ ಹಣ ಎತ್ತುವ ಪ್ರಯತ್ನ ನಡೆದಿತ್ತು. ಎಚ್ಚರ ಇರಲಿ. ಶುಭಸಂಖ್ಯೆ: 5

ಸಿಂಹ: ನಿಮ್ಮ ಮಾತುಗಳನ್ನು ನೇರವಾಗಿ, ಸ್ಪಷ್ಟವಾಗಿ ತಿಳಿಯುವಂತೆ, ಮೃದುವಾಗಿ, ನಿಖರವಾಗಿ ಮುಂದಿಡಿ. ಗೆಲುವಿದೆ. ಶುಭಸಂಖ್ಯೆ: 7

ಕನ್ಯಾ: ಗುರುಸಾರ್ವಭೌಮ ಮಂತ್ರಾಲಯ ರಾಯರನ್ನು ಧ್ಯಾನಿಸಿ. ಸಂಭಾವ್ಯವಾದ ನಷ್ಟದಿಂದ ಪಾರಾಗುವಿರಿ. ಶುಭಸಂಖ್ಯೆ: 2

ತುಲಾ: ಹೂವುಗಳ ನಡುವೆ ಮುಳ್ಳುಗಳು ಇರುತ್ತವೆ ಎಂಬುದನ್ನು ತಿಳಿದು ನಿಮ್ಮದಾದ ಶುಭ ಕೆಲಸ ಮಾಡಿ ಗೆಲ್ಲಿ. ಶುಭಸಂಖ್ಯೆ: 6

ವೃಶ್ಚಿಕ: ಅನವಶ್ಯಕವಾದ ಸಮೀಕರಣ, ಖರ್ಚು ವೆಚ್ಚಗಳಿಂದ ಹಿನ್ನಡೆ ಸಾಧ್ಯ. ವ್ಯವಧಾನದಿಂದ ವ್ಯವಹರಿಸಿ. ಶುಭಸಂಖ್ಯೆ: 3

ಧನುಸ್ಸು: ವರಪ್ರದೆಯಾದ ಕನ್ನಿಕಾ ಪರಮೇಶ್ವರಿಯನ್ನು ಆರಾಧಿಸಿ. ತಾಯಿಯ ಬೆಂಬಲದಿಂದ ಮನಸ್ಸು ನಿರಾಳ. ಶುಭಸಂಖ್ಯೆ: 8

ಮಕರ: ಕುಳಿತಲ್ಲಿಂದಲೇ ಎಲ್ಲ ಕೆಲಸಗಳನ್ನು ನಿಯಂತ್ರಿಸಲು ಮುಂದಾಗದಿರಿ. ಕೇಡಿಗಳು ತೊಂದರೆ ಬರಬಹುದು. ಶುಭಸಂಖ್ಯೆ: 1

ಕುಂಭ: ನಿಮಗೆ ಚೆನ್ನಾಗಿ ಅನುಭವ ಇರುವ ಕಾರ್ಯ ವಲಯವನ್ನು ನಂಬಿ ಕಾರ್ಯಪ್ರವೃತ್ತರಾಗಿ. ಯಶಸ್ಸಿದೆ. ಶುಭಸಂಖ್ಯೆ: 5

ಮೀನ: ಅನವಶ್ಯಕವಾದ ಸಿಟ್ಟು ನಿರ್ಧಾರಗಳಿಂದ ಕುಶಲರಾದ ಗೆಳೆಯರನ್ನು ಜನರನ್ನು ಕಳೆದುಕೊಳ್ಳುವಿರಿ. ಜಾಗ್ರತೆ. ಶುಭಸಂಖ್ಯೆ: 9