More

    ದಿನ ಭವಿಷ್ಯ | ಈ ರಾಶಿಯವರಿಗಿಂದು ಕುಟುಂಬದ ಹಿತಶತ್ರುಗಳಿಂದ ಸಮಸ್ಯೆ

    ಮೇಷ: ಸ್ವಂತ ವ್ಯವಹಾರಗಳಲ್ಲಿ ಅನುಕೂಲ. ಅಪಮಾನ, ನಿಂದನೆಯಿಂದ ಮಾನಸಿಕ ವೇದನೆ. ಕಾನೂನುಬಾಹಿರ ಧನ ಸಂಪಾದನೆ. ಶುಭಸಂಖ್ಯೆ: 5

    ವೃಷಭ: ದೂರ ಪ್ರಯಾಣ, ಅನಾರೋಗ್ಯ. ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ. ಪರಿಹಾರಕ್ಕಾಗಿ ಕುಲದೇವತೆಗೆ ತುಪ್ಪದ ದೀಪ ಹಚ್ಚಿ. ಶುಭಸಂಖ್ಯೆ: 9

    ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಮಕ್ಕಳು ಶತ್ರುಗಳಾಗುವರು. ಸಂತಾನ ದೋಷ. ಶುಭಸಂಖ್ಯೆ: 2

    ಕಟಕ: ಧನ ನಷ್ಟ. ಕುಟುಂಬದ ಹಿತಶತ್ರುಗಳಿಂದ ಸಮಸ್ಯೆಯಾಗಬಹುದು. ಗೌರವಕ್ಕೆ ಧಕ್ಕೆ. ಆಸೆ ಆಕಾಂಕ್ಷೆಗಳಿಗೆ ವಿರೋಧ. ಶುಭಸಂಖ್ಯೆ: 7

    ಸಿಂಹ: ವಿಕೃತ ಆಸೆ ಅಭಿಲಾಷೆಗಳು. ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಬಡ್ತಿ. ಉತ್ತಮ ಉದ್ಯೋಗಾವಕಾಶ ಸಿಗಲಿದೆ. ಶುಭಸಂಖ್ಯೆ: 1

    ಕನ್ಯಾ: ಮೋಸ ಹೋಗಿ ನಷ್ಟ ಉಂಟಾದೀತು. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಶುಭಸಂಖ್ಯೆ: 9

    ತುಲಾ: ಸುಲಲಿತವಾಗಿ ಧನ ಸಂಪಾದನೆ ಮಾಡುವಿರಿ. ಅನಿರೀಕ್ಷಿತ ಅದೃಷ್ಟ ಒದಗಿಬರಲಿದೆ. ಪೂರ್ವಿಕರ ಗುಪ್ತನಿಧಿ ಲಭಿಸುವುದು. ಶುಭಸಂಖ್ಯೆ: 4

    ವೃಶ್ಚಿಕ: ದಾಂಪತ್ಯದಲ್ಲಿ ಬೇಸರ. ಸಂಶಯಗಳು ಕಾಡಬಹುದು, ಅವಕಾಶಗಳು ಕೈತಪ್ಪುವವು. ಇಷ್ಟದೇವರನ್ನು ಧ್ಯಾನಿಸಿ. ಸಾಲಬಾಧೆ. ಶುಭಸಂಖ್ಯೆ:6

    ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳ ಪ್ರೀತಿಯ ವಿಷಯಗಳ ಚಿಂತೆ. ಅಧಿಕ ನಷ್ಟ ಮತ್ತು ಸಮಸ್ಯೆ. ಅದೃಷ್ಟವಂತರಾಗುವಿರಿ. ಶುಭಸಂಖ್ಯೆ: 8

    ಮಕರ: ದಾಂಪತ್ಯದಲ್ಲಿ ಸಮಸ್ಯೆ. ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ. ಉದ್ಯೋಗ ಲಾಭವಾಗಿ ಬಹುದಿನಗಳ ಕನಸು ನನಸು. ಶುಭಸಂಖ್ಯೆ: 7

    ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೇ ವಸ್ತು ಖರೀದಿಗಾಗಿ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ. ಅತಿಯಾದ ವಿಷಯಾಸಕ್ತಿ. ಶುಭಸಂಖ್ಯೆ: 7

    ಮೀನ: ಸಾಲ ಮಾಡುವ ಪರಿಸ್ಥಿತಿ. ಶತ್ರು ದಮನ. ಕೋರ್ಟ್ ಕೇಸುಗಳಲ್ಲಿ ಜಯ. ಆರ್ಥಿಕ ಅನುಕೂಲ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ:3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts