ನಿತ್ಯಭವಿಷ್ಯ|05-03-2019

ಮೇಷ: ಮನೆಯ ಜನರೊಡನೆ ವೇಳೆ ಕಳೆಯಲು ವೇಳಾಪಟ್ಟಿಯನ್ನು ನಿರ್ವಿುಸಿಕೊಳ್ಳಿ. ತೃಪ್ತಿಯ ಅಲೆಗಳಿಗೆ ದಾರಿ ಸಿಗಲಿದೆ. ಶುಭಸಂಖ್ಯೆ: 5

ವೃಷಭ: ದೂರದ ಬೆಟ್ಟ ಕಂಡು ಸಂಭ್ರಮಪಡುತ್ತಿದ್ದೀರಿ. ತೊಂದರೆ ಇಲ್ಲ. ಹತ್ತಿರ ಹೋಗದಿರಿ. ನುಣ್ಣಗೆ ಇರದು. ಶುಭಸಂಖ್ಯೆ: 9

ಮಿಥುನ: ಸಮಾಜವಿರೋಧಿ ಜನರು ನಿಮಗೆ ಕೆಟ್ಟ ಹೆಸರು ತರಬಹುದು. ಬೋಳೆತನದಿಂದ ವರ್ತಿಸಬೇಡಿ. ಎಚ್ಚರ. ಶುಭಸಂಖ್ಯೆ: 2

ಕಟಕ: ಸರ್ವೆಶ್ವರಿಯಾದ ಶ್ರೀಮಾತಾ ದುರ್ಗಾಪರಮೇಶ್ವರಿಯ ಅಭಯಹಸ್ತ ಒದಗಿಬಂದಿದೆ. ಆರಾಧಿಸಿ. ಶುಭಸಂಖ್ಯೆ: 4

ಸಿಂಹ: ವಿಮಾಸಂಸ್ಥೆಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಪದೋನ್ನತಿಗೆ ಅವಕಾಶ ಕೂಡಿ ಬರಬಹುದು. ಶುಭಸಂಖ್ಯೆ:

ಕನ್ಯಾ: ವ್ಯವಸ್ಥೆಯ ವಿರುದ್ಧ ಈಜುವುದು ಯುಕ್ತವಾ ದುದು. ಆದರೆ ಹಿಂದೆ ಮುಂದೆ ಯೋಚಿಸದೆ ಕಷ್ಟಕ್ಕೆ ಒಳಗಾಗದಿರಿ. ಶುಭಸಂಖ್ಯೆ: 3

ತುಲಾ: ನಿಮ್ಮ ತಾಳ್ಮೆ, ವಿನಯ, ಸಹಕಾರ ನೀಡುವ ಮನೋಭಾವಗಳು ಹೆಚ್ಚಿನ ಎತ್ತರಕ್ಕೆ ನಿಮ್ಮನ್ನು ಕರೆದೊಯ್ಯಬಲ್ಲವು. ಶುಭಸಂಖ್ಯೆ: 5

ವೃಶ್ಚಿಕ: ಎಚ್ಚರದಿಂದ ಮಾತನಾಡಿದರೂ ತೊಂದರೆಗೆ ಒಳಗಾಗುವ ಸಾಧ್ಯತೆಗಳಿವೆ. ನಿಮ್ಮದಾದ ವಿವೇಕವನ್ನು ಬಿಡದಿರಿ. ಶುಭಸಂಖ್ಯೆ: 2

ಧನಸ್ಸು: ಮುಗಿಯದ ಓಡಾಟಗಳು ಇರುವಾಗ ಸರಳವಾಗಿ ಜೀವನ ನಡೆಸಲು ಯೋಚಿಸಿ. ಸಿಡುಕತನದಿಂದ ಅಪಾಯ. ಶುಭಸಂಖ್ಯೆ: 1

ಮಕರ: ಸೂರ್ಯದೇವನನ್ನು ಗೌರವ ಆದರಗಳೊಂದಿಗೆ ಸ್ತುತಿಸಿ. ಜ್ಞಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಮುನ್ನಡೆ ಇದೆ. ಶುಭಸಂಖ್ಯೆ: 9

ಕುಂಭ: ನಿಮ್ಮನ್ನು ಆದರಿಸುವ, ಗೌರವಿಸುವ ಜನರಿಂದ ಇಂದು ನಿಮಗೆ ಉತ್ತಮವಾದ ಉಡುಗೊರೆಗಳು ಸಿಗಲಿದೆ. ಶುಭಸಂಖ್ಯೆ: 8

ಮೀನ: ಹಿರಿಯರನ್ನು ಗೌರವಿಸಿ. ಆದರೆ ನಿಮ್ಮ ಶಕ್ತಿ ಮೀರಿ ಏನೋ ಒಂದನ್ನು ಬಯಸುವ ಜನರಿಂದ ದೂರವಿರಿ. ಕ್ಷೇಮ. ಶುಭಸಂಖ್ಯೆ: 6