ನಿತ್ಯಭವಿಷ್ಯ|04-03-2019

ಮೇಷ: ಅನ್ಯರ ಬಳಿಯಲ್ಲಿ ವಿನಯಪೂರ್ವಕವಾಗಿ ತಿಳಿಯುವುದಿದ್ದು, ಜ್ಞಾನವೃದ್ಧಿಗೆ ಇಂದು ಅವಕಾಶ ಸಿಗಲಿದೆ. ಶುಭಸಂಖ್ಯೆ: 2

ವೃಷಭ: ಸರ್ಕಾರಿ ಕೆಲಸಗಾರರಿಗೆ ಏಕಾಏಕಿ ವರ್ಗಾವಣೆಗಳು ಸಾಧ್ಯವಾಗಬಹುದು. ಮೌನವಾಗಿ ಸ್ವೀಕರಿಸಿ. ಸಿದ್ಧಿ ಇದೆ. ಶುಭಸಂಖ್ಯೆ: 7

ಮಿಥುನ: ದೂರದ ಊರಿನ ನೆಂಟರೊಬ್ಬರು ಹಳೆಯ ಸಂಗತಿಯೊಂದರ ಕುರಿತು ಉಪಯುಕ್ತವಾದ ಮಾಹಿತಿ ನೀಡಲಿದ್ದಾರೆ. ಶುಭಸಂಖ್ಯೆ: 9

ಕಟಕ: ಆಸುಪಾಸಿನಲ್ಲಿರುವ ಜನರು ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡುವ ವಿಚಾರ ಹೆಚ್ಚು ಸಂತಸ ತರಲಿದೆ. ಶುಭಸಂಖ್ಯೆ: 6

ಸಿಂಹ: ಜಗದ್ವಂದ್ಯನಾದ ಶ್ರೀ ನಾರಾಯಣನನ್ನು ನಿರಂತರವಾಗಿ ಸ್ತುತಿಸಿ. ನಿಮ್ಮ ಅನೇಕ ಕೆಲಸಗಳಲ್ಲಿ ಸಾಫಲ್ಯ ಲಭ್ಯ. ಶುಭಸಂಖ್ಯೆ: 4

ಕನ್ಯಾ: ಸುಮ್ಮನೆ ಬಾಯಿಮಾತಿನ ಮೇಲೆ ಯಾರನ್ನೂ ನಂಬುವ ಮುಗ್ಧತನ ತೋರಲು ಮುಂದಾಗದಿರಿ. ತೊಂದರೆ ಇದೆ. ಶುಭಸಂಖ್ಯೆ: 1

ತುಲಾ: ಹಳೆಯ ಕಡತ ನಿಮಗೆ ಮುಖ್ಯವಾದುದಾದರೂ ಅನವಶ್ಯಕ ಶೇಖರಣೆ ದೂರ ಮಾಡಿ. ಲಕ್ಷಿ್ಮಯ ಸಿದ್ಧಿಗೆ ದಾರಿ ಇದೆ. ಶುಭಸಂಖ್ಯೆ: 8

ವೃಶ್ಚಿಕ: ಬೇರೆಯವರು ನೀಡುವ ಸಲಹೆಗಳನ್ನು ಸ್ವೀಕರಿಸುವ ಅಥವಾ ಬಿಡುವ ವಿಚಾರ ನಿಮಗೆ ಸೇರಿದ್ದಾದರೂ ಕೇಳಿಸಿಕೊಳ್ಳಿ. ಶುಭಸಂಖ್ಯೆ: 3

ಧನುಸ್ಸು: ನಿಮ್ಮನ್ನು ಗುರುತಿಸಿ ಆರಾಧಿಸುವ ಜನ ಇದ್ದಾರೆ. ನೀವು ಹುಡುಕಿ ಆಯ್ಕೆ ಮಾಡಿಕೊಳ್ಳುವ ಚಾತುರ್ಯ ತೋರಿ. ಒಳಿತಿದೆ. ಶುಭಸಂಖ್ಯೆ: 9

ಮಕರ: ನಿಮ್ಮ ಹೊಂದಾಣಿಕೆಯ ಮನೋಭಾವದಿಂದಾಗಿ ವ್ಯಾಜ್ಯಗಳು ಕೆಲವು ರಾಜಿಗಳನ್ನು ಸಂಪಾದಿಸಿ ಲಾಭವನ್ನು ತಂದುಕೊಡಲಿವೆ. ಶುಭಸಂಖ್ಯೆ: 1

ಕುಂಭ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ವಿಷಯ ತಿಳಿದು ಕೂಡ ಯಾಕೆ ಬೆಟ್ಟ ಹತ್ತುತ್ತೀರಿ? ವ್ಯರ್ಥ ಪ್ರಯತ್ನವನ್ನು ಕೈಬಿಡಿ. ಶುಭಸಂಖ್ಯೆ: 5

ಮೀನ: ಹೆಚ್ಚಿನ ವ್ಯಾಸಂಗಕ್ಕೆ ಇದೀಗ ಸುಸಂದರ್ಭ. ಕೆಲವು ಪ್ರಯತ್ನಗಳು ಸಫಲವಾಗಲು ಇಂದು ಒಳ್ಳೆಯ ದಿನವಾಗಿದೆ. ಶುಭಸಂಖ್ಯೆ: 2