ನಿತ್ಯಭವಿಷ್ಯ|03-03-2019

ಮೇಷ: ಕ್ಷಣಾರ್ಧದಲ್ಲಿ ಆಗಬೇಕಾದ ಕೆಲಸಗಳು ವಿಳಂಬಕ್ಕೆ ಸಿಲುಕಿ ಗೊಂದಲ ಆಗಬಹುದು. ಆದರೆ ಸಿದ್ಧಿ ಇದೆ. ಶುಭಸಂಖ್ಯೆ: 3

ವೃಷಭ: ಸದ್ದು, ಗದ್ದಲ, ವಿಘ್ನ, ಅಶಾಂತಿಗಳನ್ನು ನಿರ್ವಿುಸಲು ಸಜ್ಜಾದ ಹಿತಶತ್ರುಗಳ ಬಗೆಗೆ ಎಚ್ಚರ ಇದ್ದೇ ಇರಲಿ. ಶುಭಸಂಖ್ಯೆ: 9

ಮಿಥುನ: ನಿಮ್ಮ ಬಗೆಗಿನ ಸಜ್ಜನರ ಅಭಿಪ್ರಾಯಗಳು ಕ್ಲಿಷ್ಟಕರವಾಗಿದ್ದ ಕೆಲಸಗಳನ್ನು ಪೂರೈಸಲು ಶಕ್ತಿ ಆಗಲಿವೆ. ಶುಭಸಂಖ್ಯೆ: 5

ಕಟಕ: ಮಹಾನ್ ಶಕ್ತಿಮೂಲವಾದ ಭವಾನಿಯನ್ನು ಆರಾಧಿಸಿ. ಕಡು ಕತ್ತಲಿನಲ್ಲೂ ಬೆಳಕಿನ ದೀಪ ಕಾಣಿಸುತ್ತದೆ. ಶುಭಸಂಖ್ಯೆ: 8

ಸಿಂಹ: ಸ್ಪಷ್ಟವಾದ ರ್ತಾಕ ಗೊತ್ತುಗುರಿಗಳನ್ನು ನಿಮ್ಮ ನಿರ್ಧಾರದಿಂದ ಸಕಾರಾತ್ಮಕವಾಗಿ ಗೆಲ್ಲಿ. ತಾಳ್ಮೆ ತಪ್ಪದಿರಲಿ. ಶುಭಸಂಖ್ಯೆ: 1

ಕನ್ಯಾ: ಗೆದ್ದೇ ಗೆಲ್ಲುವ ಅಚಲವಾದ ನಂಬಿಕೆ ಇದೆ. ಇರಲಿ, ತಾಂತ್ರಿಕ ತೊಂದರೆಗಳು ಉದ್ಭವಿಸದಂತೆ ಎಚ್ಚರ ಇರಲಿ. ಶುಭಸಂಖ್ಯೆ: 5

ತುಲಾ: ವಿಶೇಷ ವಿಚಾರವೊಂದು ಮನಸ್ಸಿಗೆ ಹಿತವನ್ನು ತರುವ ಅಪರೂಪದ ಬೆಳವಣಿಗೆಯಾಗಿ ಗೋಚರಿಸಬಹುದು. ಶುಭಸಂಖ್ಯೆ: 2

ವೃಶ್ಚಿಕ: ಸಫಲತೆಯ ದಾರಿಯಲ್ಲಿ ಅನುಗ್ರಹದ ದಿವ್ಯವನ್ನು ಬದಲಿಸುವ ಶ್ರೀ ವೆಂಕಟೇಶ್ವರನನ್ನು ಭಕ್ತಿಯಿಂದ ಸ್ತುತಿಸಿ. ಶುಭಸಂಖ್ಯೆ: 7

ಧನುಸ್ಸು: ತಪ್ಪು ಮಾಹಿತಿಯನ್ನು ಕೊಟ್ಟು ತಮಾಷೆ ನೋಡುವ ಜನ ಇರುತ್ತಾರೆ. ಬುದ್ಧಿಶಕ್ತಿಯಿಂದ ಮುಂದಕ್ಕೆ ಹೆಜ್ಜೆ ಇಡಿ. ಶುಭಸಂಖ್ಯೆ: 4

ಮಕರ: ವಿಶೇಷಗಳನ್ನು ಸಾಧಿಸುವ ನಿಮ್ಮ ಸಂಕಲ್ಪ ಅನುಪಮವಾದುದೇ ಆಗಿದೆ. ಆದರೆ ಎಲ್ಲರನ್ನೂ ನಂಬಿಬಿಡಬೇಡಿ. ಶುಭಸಂಖ್ಯೆ: 6

ಕುಂಭ: ನಿಮ್ಮದೇ ಆದ ವೈಯಕ್ತಿಕ ರೀತಿ ರಿವಾಜುಗಳಲ್ಲಿನ ಶಿಸ್ತು-ಸಂಯಮಗಳು ಗೆಳೆಯರಿಗೆ ಹಿತಕಾರಿ. ಬೆಂಬಲ ಲಭ್ಯ. ಶುಭಸಂಖ್ಯೆ: 1

ಮೀನ: ನಿರೀಕ್ಷಿಸಿದ ಗುರಿ ತಲುಪಲು ವಿರೋಧಿಗಳ ಅಡೆತಡೆ ಇದ್ದೇ ಇರುತ್ತದೆ. ನಿಮ್ಮ ಅಚಲ ನಂಬಿಕೆಯನ್ನು ಮಾತ್ರ ಬಿಡದಿರಿ. ಶುಭಸಂಖ್ಯೆ: 7