ನಿತ್ಯಭವಿಷ್ಯ| 02-03-2019

ಮೇಷ: ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡರೂ ಸರ್ರನೆ ಕೆಲವು ಬಗೆಯ ಕಿರಿಕಿರಿಗಳು ಉದ್ಭವಿಸಲು ಸಾಧ್ಯ. ಶುಭಸಂಖ್ಯೆ: 9

ವೃಷಭ: ಹಲವಾರು ದಾರಿಗಳು ಧುತ್ತನೆ ಎದುರಾದರೂ ಸುಸಂಬದ್ಧ ತರ್ಕದಿಂದಲೇ ಸೂಕ್ತವಾದ ದಾರಿಯನ್ನು ಆರಿಸಿಕೊಳ್ಳಿ. ಶುಭಸಂಖ್ಯೆ: 2

ಮಿಥುನ: ನೀವು ಸರಿಯಾಗಿ ವ್ಯವಹರಿಸಲು ಹೊರಟರೂ ಕೆಲವು ಕಿಡಿಗೇಡಿಗಳಿಂದ ತೊಂದರೆಯೇ ಎದುರಾದೀತು. ಶುಭಸಂಖ್ಯೆ: 4

ಕಟಕ: ಕ್ರಿಯಾಶೀಲತೆಯನ್ನು ಪ್ರದರ್ಶಿಸಿ. ಕಷ್ಟಗಳಿರದ ದಿಕ್ಕುಗಳಲ್ಲಿ ಹಲವಾರು ಅವಕಾಶಗಳು ಅರಳಬಹುದಾಗಿದೆ. ಶುಭಸಂಖ್ಯೆ: 8

ಸಿಂಹ: ಹಿರಿಯರು ನಿಮ್ಮ ಸಹಾಯಕ್ಕೆ ಲಭಿಸುತ್ತಾರೆ. ಮುಕ್ತವಾಗಿ ಮಾತನಾಡಲು ಖಂಡಿತವಾಗಿ ಹಿಂಜರಿಯದಿರಿ. ಶುಭಸಂಖ್ಯೆ: 6

ಕನ್ಯಾ: ಹೊಸ ಕೆಲಸದ ಬಗೆಗೆಗಿನ ನಿರೀಕ್ಷೆಗೆ ಉತ್ತಮವಾದ ಅವಕಾಶಗಳನ್ನು ಪಡೆಯಲು ಹೇರಳ ಸಾಧ್ಯತೆಗಳಿವೆ. ಶುಭಸಂಖ್ಯೆ: 2

ತುಲಾ: ಧನಲಾಭದ ದಾರಿಗಳನ್ನು ಸೂಕ್ತವಾಗಿ ತಿಳಿದು ಹೆಜ್ಜೆಗಳನ್ನು ಇಡಲು ವರ್ತಮಾನವು ನಿಮಗೆ ಸಹಕರಿಸಲಿದೆ. ಶುಭಸಂಖ್ಯೆ: 7

ವೃಶ್ಚಿಕ: ಸೌಮ್ಯ ಸ್ವಭಾವದ ನಿಮ್ಮನ್ನು ತೊಂದರೆಗೆ ಸಿಲುಕಿಸಲು ಕೆಲವರು ಕಾದಿದ್ದಾರೆ. ಉಪಾಯದಿಂದ ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 9

ಧನುಸ್ಸು: ಹಿಂದಿನ ಕೆಲವು ವರ್ಷಗಳ ತಪ್ಪುಗಳು ಘಟಿಸದಂತೆ ಕೃಷಿಯ ಕುರಿತ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿ. ಶುಭಸಂಖ್ಯೆ: 5

ಮಕರ: ನಿಮ್ಮವರಲ್ಲಿ ಕೆಲವು ಹತ್ತಿರದ ಬಂಧುಗಳು ವ್ಯಾಜ್ಯದ ವಿಚಾರದಲ್ಲಿ ನೈತಿಕವಾದ ಬೆಂಬಲವನ್ನು ನೀಡಲಿದ್ದಾರೆ. ಶುಭಸಂಖ್ಯೆ: 3

ಕುಂಭ: ಹತ್ತಿರದ ದಾರಿಗಳಲ್ಲಿ ಶ್ರಮವಿರದೆ ಕೆಲಸಗಳನ್ನು ಪೂರೈಸಲು ಸಾಧ್ಯ ಎಂಬ ನಂಬಿಕೆ ಕೈಕೊಡುವ ಸಾಧ್ಯತೆಯಿದೆ. ಶುಭಸಂಖ್ಯೆ: 1

ಮೀನ: ತೀರ ಹತ್ತಿರದವರಿಂದ ಕೆಲವು ಕಿರಿಕಿರಿಗಳನ್ನು ಎದುರಿಸಲು ಸಜ್ಜಾಗಿ. ಅನುಭವವೇ ನಿಮಗೆ ಸಂಜೀವಿನಿಯಾಗಲಿದೆ. ಶುಭಸಂಖ್ಯೆ: 7