blank

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವಿರೋಧಿಗಳು ನಿಮಗೆ ಬೆಂಬಲ ಸೂಚಿಸುವರು

Nitya Bhavisya Vijayavani

ಮೇಷ:ನ್ಯಾಯವಾದಿಗಳು ಸ್ವಪ್ರಯತ್ನದಿಂದ ಕಾರ್ಯದಲ್ಲಿ ಮುನ್ನಡೆ ಕಾಣುವಿರಿ. ಮಕ್ಕಳಿಂದಲೇ ವಾದ-ವಿವಾದಗಳು ಹೆಚ್ಚಾಗಬಹುದು. ಶುಭಸಂಖ್ಯೆ: 9

ವೃಷಭ:ಮುಕ್ತ ಭಾವನೆಯಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳು ನಿಮಗೆ ಬೆಂಬಲ ಸೂಚಿಸುವರು. ಶುಭ ಸಂಖ್ಯೆ 9

ಮಿಥುನ:ಹಿರಿಯರ ಸಕಾಲಿಕ ಸಲಹೆಗಳಿಂದ ಆಗಬಹುದಾಗಿದ್ದ ನಷ್ಟ ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಶುಭಸಂಖ್ಯೆ:3

ಕಟಕ:ಪದೇಪದೇ ನಿರ್ಧಾರ ಬದಲಿಸುವ ನಿಮ್ಮ ನಡವಳಿಕೆಯಿಂದ ಕುಟುಂಬದಲ್ಲಿ ಅಸಹನೆ. ಕರಿದ ಪದಾರ್ಥ ಮಾರುವವರಿಗೆ ಲಾಭ. ಶುಭಸಂಖ್ಯೆ:5

ಸಿಂಹ:ಯಾವುದರಲ್ಲ್ಲೂ ಆತುರ ಬೇಡ. ಮಹಿಳೆಯರಿಗೆ ಕುಟುಂಬ ವ್ಯವಹಾರದಲ್ಲಿ ತೃಪ್ತಿ. ವೃತ್ತಿಯಲ್ಲಿ ವೈಯಕ್ತಿಕ ಸಮಸ್ಯೆಗೆ ಮುಕ್ತಿ. ಶುಭಸಂಖ್ಯೆ:7

ಕನ್ಯಾ:ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುವಿರಿ. ವಸ್ತ್ರ ವ್ಯಾಪಾರಿಗಳಿಗೆ ಹೆಚ್ಚು ಆದಾಯ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಮನಃಸ್ತಾಪ. ಶುಭಸಂಖ್ಯೆ: 6

ತುಲಾ:ಸಂಪನ್ಮೂಲ ಕ್ರೋಡೀಕರಿಸಲು ಯತ್ನ ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ ಎದುರಾಗಬಹುದು. ಆದಾಯ ಹೆಚ್ಚುತ್ತದೆ. ಶುಭಸಂಖ್ಯೆ:3

ವೃಶ್ಚಿಕ:ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಸಹಾಯ. ಬಾಹ್ಯಾಕಾಶ ಸಂಸ್ಥೆಯ ನೌಕರರಿಗೆ ಭಡ್ತಿ. ಸರ್ಕಾರಿ ಕೆಲಸಗಳಲ್ಲಿ ಮಂದಗತಿ. ಶುಭಸಂಖ್ಯೆ: 2

ಧನುಸ್ಸು:ಕೆಲವೊಂದು ವಿಷಯಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸ್ವಲ್ಪ ಸಮಾಧಾನ ಚಿತ್ತದಿಂದ ವ್ಯವಹರಿಸಿರಿ. ಶುಭಸಂಖ್ಯೆ: 1

ಮಕರ:ಸತ್ಯಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲ ನಿವಾರಣೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ. ಶುಭಸಂಖ್ಯೆ: 7

ಕುಂಭ:ಕೃಷಿ ಯಂತ್ರ ಹೊಂದಿರುವವರಿಗೆ ಬಾಡಿಗೆಯಿಂದ ಹೆಚ್ಚಿನ ಆದಾಯ. ಪ್ರೇಮದಲ್ಲಿ ಹಿನ್ನಡೆ. ವಿದೇಶಿ ವ್ಯವಹಾರದಲ್ಲಿ ಮುನ್ನಡೆ. ಶುಭಸಂಖ್ಯೆ:4

ಮೀನ:ಸಾಮರ್ಥ್ಯ ಅರಿತು ಕೆಲಸ ಆಯ್ಕೆಮಾಡಿಕೊಳ್ಳಿ. ನೌಕರಿಯಲ್ಲಿರುವವರಿಗೆ ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 8

Share This Article

ಬೇಸಿಗೆಯಲ್ಲಿ ಗುಂಗುರು ಕೂದಲಿನ ಆರೈಕೆ ಮಾಡುವುದು ಹೇಗೆ ಗೊತ್ತಾ? curly hair

curly hair: ಗುಂಗುರು ಕೂದಲು ತುಂಬಾ ಸುಂದರವಾಗಿ ಕಾಣುತ್ತದೆ, ಇದಕ್ಕೆ ಸರಿಯಾದ ಆರೈಕೆಯ ಅಗತ್ಯವಿರುತ್ತದೆ. ನೀವು…

ಅಪ್ಪಿತಪ್ಪಿಯೂ ಈ ದಿನ ಪೊರಕೆಯನ್ನು ಖರೀದಿಸಬೇಡಿ! ಖಂಡಿತ ತೊಂದರೆಗೆ ಸಿಲುಕುತ್ತೀರಿ.. broom

broom: ಹಿಂದೂಗಳು ಪೊರಕೆಯನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸುತ್ತಾರೆ. ಭಕ್ತರು ಲಕ್ಷ್ಮಿ ದೇವಿಯು ಪೊರಕೆಗಳಲ್ಲಿ ವಾಸಿಸುತ್ತಾಳೆ…

ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ‘ಲೈಂಗಿಕ ಕೊಠಡಿಗಳು’! Prison

Prison: ಇಟಲಿ ಸರ್ಕಾರ ಒಂದು ವಿನೂತನ ನಿರ್ಧಾರ ತೆಗೆದುಕೊಂಡಿದೆ. ಕೈದಿಗಳ ಗೌಪ್ಯತೆಯ ಹಕ್ಕುಗಳನ್ನು ಗೌರವಿಸಿ, ಇಟಲಿ…