ಕನಕಪುರ ಜೆಡಿಎಸ್​ ನಾಯಕಿ ನಾಗರತ್ನ ಮನೆಯಲ್ಲಿ 3 ಕೆಜಿ ಚಿನ್ನಾಭರಣ ದರೋಡೆ: ತಡರಾತ್ರಿ ಮನೆಗೆ ನುಗ್ಗಿದ್ದ ಕಳ್ಳರು

ರಾಮನಗರ: ಕನಕಪುರದ ಪ್ರಶಾಂತ್​ನಗರದಲ್ಲಿರುವ ಜೆಡಿಎಸ್​ ನಾಯಕಿ ನಾಗರತ್ನ ಅವರ ಮನೆಯಲ್ಲಿ ಶನಿವಾರ ತಡರಾತ್ರಿ ದರೋಡೆ ನಡೆದಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮನೆಯವರೆಲ್ಲ ಹೋಗಿದ್ದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿರುವ ಕಳ್ಳರು ಒಟ್ಟು 3 ಕೆಜಿ 300 ಗ್ರಾಂ ಚಿನ್ನಾಭರಣ ಮತ್ತು 73 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದಾರೆ.

ವಿಷಯ ತಿಳಿದು ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಕನಕಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *