ಸಲ್ಮಾನ್-ಸುದೀಪ್ ಮುಖಾಮುಖಿ!

ಬೆಂಗಳೂರು: ‘ದಬಂಗ್ 3’ ಚಿತ್ರದ ಮೇಲೆ ಬಾಲಿವುಡ್ ಮಾತ್ರವಲ್ಲ, ಕನ್ನಡ ಸಿನಿಮಾ ಪ್ರೇಮಿಗಳೂ ಈಗಾಗಲೇ ದೃಷ್ಟಿ ನೆಟ್ಟಿದ್ದಾರೆ.

ಯಾಕೆಂದರೆ, ಸಲ್ಮಾನ್ ಖಾನ್ ಜತೆ ‘ಕಿಚ್ಚ’ ಸುದೀಪ್ ಖಳನ ಲುಕ್​ನಲ್ಲಿ ಹೇಗೆಲ್ಲ ಕಾಣಿಸಲಿದ್ದಾರೆ ಎಂಬ ಕೌತುಕ ಎಲ್ಲರಲ್ಲೂ ಇದೆ. ಆ ಕುತೂಹಲಕ್ಕೆ ಇದೀಗ ದಿನಗಣನೆ ಆರಂಭವಾಗಿದೆ. ಮೇ ತಿಂಗಳ ಮೊದಲ ವಾರದಲ್ಲಿ ಸಲ್ಮಾನ್ ಮತ್ತು ಸುದೀಪ್ ಮುಖಾಮುಖಿಯಾಗಲಿದ್ದಾರೆ.

ಸಾಹಸ ದೃಶ್ಯಗಳ ಮೂಲಕ ಅವರಿಬ್ಬರೂ ತೆರೆಮೇಲೆ ಒಂದಾಗಲಿ ದ್ದಾರೆ. ಈಗಾಗಲೇ ಮಧ್ಯಪ್ರದೇಶದ ಕೆಲ ಸ್ಥಳಗಳಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಚಿತ್ರತಂಡ, 2ನೇ ಹಂತದ ಚಿತ್ರೀಕರಣವನ್ನು ಮುಂಬೈನ ದಹಿಸಾರ್​ನಲ್ಲಿ ಮಾಡಲು ನಿರ್ಧರಿಸಿದೆ.

Leave a Reply

Your email address will not be published. Required fields are marked *