ಐಪಿಎಸ್‌ ಅಧಿಕಾರಿ ರೂಪಾ ಹೆಸರಲ್ಲಿ ಫೇಕ್‌ ಇನ್ಸ್ಟಾಗ್ರಾಂ ಅಕೌಂಟ್

ಬೆಂಗಳೂರು: ಖಡಕ್‌ ಅಧಿಕಾರಿಯೆಂದೇ ಖ್ಯಾತಿ ಹೊಂದಿರುವ ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ರೂಪಾ ಅವರ ಫೋಟೊಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರೂಪಾ ಅವರು, ಕಳೆದ ಕೆಲ ದನಿಗಳಿಂದ ಈ ಖಾತೆಯನ್ನು ಸೃಷ್ಟಿಸಿ ಫೋಟೊ ಅಪ್‌ಲೋಡ್‌ ಮಾಡಲಾಗಿದೆ. ಆದರೆ ಇದು ನನ್ನದಲ್ಲ. ನಾನು ಇನ್ಸ್ಟಾಗ್ರಾಂನಲ್ಲಿ ಇಲ್ಲ ಎಂದು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್)